ಚೆಂಬು ಕಳ್ಳತನ ಆಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ದಿನನಿತ್ಯ ಕಳ್ಳತನ ದರೋಡೆ, ಕೊಲೆ ಕೇಸ್ ಗಳನ್ನು ಪೊಲೀಸರು ಕೇಳಿರುತ್ತಾರೆ ಆದರೆ ಪೊಲೀಸರಿಗೆ ಇದೊಂದು ವಿಚಿತ್ರ ಕೇಸ್ ಪತ್ತೆಯಾಗಿದೆ.

Ad Widget ... ..


ಕಳ್ಳತನ ಕೇಸ್ ಅಂತ ಹೋದ ಹೊಯ್ಸಳ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ. ಕಳ್ಳತನ ಆಗಿದೆ ಅಂತ ಕಂಟ್ರೋಲ್ ರೂಂಗೆ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ಈ ವೇಳೆ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಫುಲ್ ಗಲಿಬಿಲಿಗೊಂಡಿದ್ದಾರೆ. ಕಸಿವಿಸಿ ಅನುಭವಿಸಿದ್ದಾರೆ. ಸ್ಥಳಕ್ಕೆ ಹೋದ ಪೊಲೀಸರಿಗೆ ಟಾಯ್ಲೆಟ್ ನಲ್ಲಿ ಬಳಸುವ ಚೆಂಬು ಕಳ್ಳತನ ಆಗಿದೆ ಎಂದು ಆ ವ್ಯಕ್ತಿ ಮಾಹಿತಿ ನೀಡಿದ್ದಾರೆ.

Ad Widget


ಪಕ್ಕದ ಮನೆಯವನು ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಮಾಹಿತಿ ನೀಡಿದ್ದಾರೆ. ಕುತೂಹಲದ ಸಂಗತಿಯೆಂದರೆ ಪೊಲೀಸರು ಹೋಗಿದ್ದರಿಂದ ಚೆಂಬು ಕದ್ದಿದ್ದ ವ್ಯಕ್ತಿ ಅದನ್ನು ವಾಪಸ್ಸು ಇಟ್ಟುಬಿಟ್ಟಿದ್ದಾನೆ. ಈ ಬಗ್ಗೆ ಕಂಟ್ರೋಲ್ ರೂಂ ನವರು ಹೊಯ್ಸಳ ಬಳಿ ಮಾಹಿತಿ ಕೇಳಿದ್ದಾರೆ. ಈ ವೇಳೆ ಹೊಯ್ಸಳ ಸಿಬ್ಬಂದಿ ಚೆಂಬಿನ ಕತೆ ವಿವರಿಸಿದ್ದಾರೆ. ಸದ್ಯ ಹೊಯ್ಸಳ ಹಾಗೂ ಕಂಟ್ರೋಲ್ ರೂಂ ಸಿಬ್ಬಂದಿ ನಡುವಿನ ಆಡಿಯೋ ವೈರಲ್ ಆಗಿದೆ.

Leave a Comment

Your email address will not be published. Required fields are marked *