ಮೂಡಿಗೆರೆ: ಬೈಕ್ ಗೆ ಲಾರಿ ಡಿಕ್ಕಿ| ಸವಾರ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಬೈಕ್ ಗೆ ತರಕಾರಿ ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಬಿದರನಹಳ್ಳಿ ಪಟ್ಟಣದಲ್ಲಿ ನಡೆದಿದೆ.

Ad Widget ... ..

ಮೃತಪಟ್ಟವರನ್ನು ಮೂಡಿಗೆರೆ ತಾಲೂಕಿನ ಕೆಂಜಿಗೆ ಸಮೀಪದ ಬಾಳೆಹಳ್ಳಿಯ ಮಂಜುನಾಥ್ ಎಂದು ಗುರುತಿಸಲಾಗಿದೆ. ಅವರ ತಂದೆಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

ತರಕಾರಿ ತುಂಬಿಕೊಂಡು ರಾಷ್ಟ್ರೀಯ ಹೆದ್ದಾರಿ ಮೂಲಕ ಮಂಗಳೂರಿಗೆ ಹೋಗುತ್ತಿದ್ದ ಲಾರಿ ಅವಸರದಿಂದ ಬಂದ ರಭಸಕ್ಕೆ ಮೃತದೇಹವನ್ನು 1 ಕಿ.ಮೀ. ಎಳೆದೊಯ್ದ ಲಾರಿಯೂ ಪಲ್ಟಿಯಾಗಿದೆ.

ಈ ಬಗ್ಗೆ ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *