Ad Widget .

ಕರ್ನಾಟಕದ ಶಾಸಕರ ಹೆಗಲಲ್ಲಿ ರಾರಾಜಿಸಲಿದೆ ಗಂಡಭೇರುಂಡ

ಸಮಗ್ರ ನ್ಯೂಸ್: ಕರ್ನಾಟಕದ ಅಧಿಕೃತ ಲಾಂಛನ ಗಂಡಬೇರುಂಡ ಇನ್ನು ಶಾಸಕರ ಹೆಗಲಿನಲ್ಲಿ ರಾರಾಜಿಸಲಿದೆ. ಕರ್ನಾಟಕದ ಉಭಯ ಸದನಗಳ ಶಾಸಕರು ಇನ್ನು ಮುಂದೆ ಅಧಿವೇಶನಗಳಿಗೆ ಹಾಜರಾಗುವಾಗ ಗಂಡಬೇರುಂಡ ಲಾಂಛನವನ್ನು ಧರಿಸಲಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದಿಂದ ಶಾಸಕರು ಮತ್ತು ಎಂಎಲ್‌ಸಿಗಳು ತಮ್ಮ ಭುಜದ ಎಡಭಾಗದಲ್ಲಿ ಬ್ಯಾಡ್ಜ್‌ಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ.

Ad Widget . Ad Widget . Ad Widget .

ಶಾಸಕರು ರಾಜ್ಯ ಮತ್ತು ದೇಶದ ಹೊರಗೆ ಪ್ರಯಾಣಿಸುವಾಗ ಅವುಗಳನ್ನು ಧರಿಸಬೇಕೆಂದು ನಿರೀಕ್ಷಿಸಲಾಗಿದೆ. ಡಿಸೆಂಬರ್ 4 ರಂದು ಬೆಳಗಾವಿ ಅಧಿವೇಶನ ಆರಂಭವಾಗಲಿದೆ.

ಇತ್ತೀಚೆಗೆ ಹೊರರಾಜ್ಯದಿಂದ ಚುನಾಯಿತ ಪ್ರತಿನಿಧಿಗಳು ಅವರನ್ನು ಭೇಟಿಯಾದಾಗ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಬ್ಯಾಡ್ಜ್ ಕಲ್ಪನೆ ಬಂದಿತ್ತು. ವಿದೇಶಿ ಪ್ರತಿನಿಧಿಗಳು ವಿಶಿಷ್ಟ ಬ್ಯಾಡ್ಜ್ ಧರಿಸಿರುವುದನ್ನು ಅವರು ಗಮನಿಸಿದರು ಮತ್ತು ರಾಜ್ಯದ ಶಾಸಕರಿಗೂ ಇದೇ ರೀತಿಯ ಬ್ಯಾಡ್ಜ್‌ಗಳನ್ನು ಪಡೆಯಲು ಚಿಂತನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬ್ಯಾಡ್ಜ್ ಅನ್ನು ಹೆಚ್ಚಾಗಿ ಚಿನ್ನದ ಲೇಪನದೊಂದಿಗೆ ಹಿತ್ತಾಳೆಯಿಂದ ತಯಾರಿಸಲಾಗುತ್ತದೆ. ಗಂಡಬೇರುಂಡ ಹಿಂದೂ ಪುರಾಣಗಳಲ್ಲಿ ಎರಡು ತಲೆಯ ಪಕ್ಷಿಯಾಗಿದ್ದು ಇದನ್ನು ಭಗವಾನ್ ವಿಷ್ಣುವಿನ ರೂಪವೆಂದು ನಂಬಲಾಗಿದೆ. ಈ ಲಾಂಛನವನ್ನು ಅಂದಿನ ಮೈಸೂರು ರಾಜ್ಯವು ಬಳಸುತ್ತಿತ್ತು ಮತ್ತು 50 ವರ್ಷಗಳ ಹಿಂದೆ ಮೈಸೂರು ರಾಜ್ಯವು ಕರ್ನಾಟಕವಾದ ನಂತರವೂ ರಾಜ್ಯ ಲಾಂಛನವಾಗಿ ಮುಂದುವರೆಯಿತು. ಆರಂಭದಲ್ಲಿ ಶಾಸಕರಿಗೆ ಬ್ಯಾಡ್ಜ್‌ಗಳನ್ನು ಪಡೆಯುವ ಆಲೋಚನೆ ಇತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *