Ad Widget .

ಚಾಮರಾಜನಗರದ 7 ಗ್ರಾಮಗಳಿಗಿಲ್ಲ ದೀಪಾವಳಿಯ ಸಂಭ್ರಮ

ಸಮಗ್ರ ಸಮಾಚಾರ: ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ತುಂಬಾ ಜೋರಿದೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಈ ಕಳೆ ಕಾಣುತ್ತಿಲ್ಲ, ಯಾಕೆ ಹಬ್ಬದ ಸಂಭ್ರಮವಿಲ್ಲ? ಹಬ್ಬ ಆಚರಿಸುವುದಿಲ್ವ ಹೀಗೆ ನಾನಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಚಾಮರಾಜನಗರದ ಏಳು ಗ್ರಾಮಗಳಲ್ಲಿ ದೀಪಾವಳಿಯ ಸಡಗರ ಸಂಭ್ರಮ ಯಾವುದೂ ಕಾಣುತ್ತಿಲ್ಲ. ಇದಕ್ಕೆ ಕಾರಣ ಮಂಗಳವಾರ ಹಬ್ಬ ಬಂದಿರುವುದು. ಹಾಗಾದರೆ ಈ ಗ್ರಾಮಗಳಲ್ಲಿ ದೀಪಾವಳಿ ಹಬ್ಬ ಯಾವಾಗ ಆಚರಿಸುತ್ತಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೆಂಡಗಳ್ಳಿ, ವೀರನಪುರ, ಬನ್ನಿತಾಳಪುರ, ಮಾಡ್ರಹಳ್ಳಿ, ನಲ್ಲೂರು, ಮಳವಳ್ಳಿ ಹಾಗೂ ನೇನೆಕಟ್ಟೆ ಗ್ರಾಮಗಳಲ್ಲಿ ದೀಪಾವಳಿ ಹಬ್ಬವನ್ನ ಆಚರಿಸುತ್ತಿಲ್ಲ. ಇದಕ್ಕೆ ಕಾರಣ ದೀಪಾವಳಿಯ ಬಲಿಪಾಡ್ಯಮಿ ಮಂಗಳವಾರ ಬಂದಿರುವುದು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ 7 ಗ್ರಾಮಗಳಲ್ಲಿ ಹಿಂದಿನ ಕಾಲದಿಂದಲೂ ದೀಪಾವಳಿಯ ಬಲಿಪಾಡ್ಯಮಿ ಬುಧವಾರ ಬಿಟ್ಟು ವಾರದ ಬೇರೆ ಯಾವುದೇ ದಿನಗಳಲ್ಲಿ ಬಂದರು ಆಚರಿಸಿಕೊಂಡು ಬರುತ್ತಿಲ್ಲ. ಬುಧವಾರದಂದು ಹೊಸ ಬಟ್ಟೆ ತೊಟ್ಟು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾಸುಗಳಿಗೆ ಸ್ನಾನ ಮಾಡಿಸಿ ಮನೆಯಲ್ಲಿ ಸಿಹಿ ಊಟ ಮಾಡುತ್ತಾರೆ. ಕಳೆದ ಮೂರು ತಲೆಮಾರುಗಳಿಂದ ಈ ಏಳು ಗ್ರಾಮದವರು ಬುಧವಾರವೇ ಹಬ್ಬ ಆಚರಿಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. ಅಷ್ಟಕ್ಕೂ ಬುಧವಾರವೇ ಏಕೆ ಹಬ್ಬ ಆಚರಿಸಬೇಕು ಎಂಬ ಪ್ರಶ್ನೆಗೆ ಗ್ರಾಮಸ್ಥರ ಉತ್ತರ ಹೀಗಿದೆ.
ಬುಧವಾರ ಹೊರತುಪಡಿಸಿ ಬೇರೆ ಯಾವುದೇ ದಿನಗಳಲ್ಲಿ ಹಬ್ಬ ಆಚರಿಸಿದರೇ ಊರಿಗೆ ಕೆಡಕಾಗುತ್ತೆ, ಜಾನುವಾರುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತವೆ ಎಂಬುವುದು ಗ್ರಾಮಸ್ಥರ ನಂಬಿಕೆ ಇದೆ. ಹೀಗಾಗಿ ದೀಪಾವಳಿ ಹಬ್ಬ ಬುಧವಾರ ಹೊರತುಪಡಿಸಿ ಇನ್ಯಾವುದೇ ದಿನಗಳಲ್ಲಿ ಬಂದರೇ ಈ 7 ಗ್ರಾಮಗಳ ಜನರು ಆಚರಿಸುವುದಿಲ್ಲ. ಬುಧವಾರದಂದು ದೇವಸ್ಥಾನದಿಂದ ತೀರ್ಥ ತಂದು ಹಸುಗಳಿಗೆ ಸಂಪಡಿಸಿ, ಪೂಜೆ ಮಾಡಿ, ಬಳಿಕ ಹಸುಗಳನ್ನು ಊರಿನ ಸುತ್ತ ಒಂದು ಸುತ್ತು ಹಾಕಿಸುತ್ತಾರೆ.

Ad Widget . Ad Widget . Ad Widget .

ಎಷ್ಟೇ ಬದಲಾದರು ಈ ರೀತಿಯ ಆಚಾರ, ವಿಚಾರ ಮಾತ್ರ ಇಂದಿಗೂ ಜೀವಂತವಿದೆ ಎನ್ನುವುದಕ್ಕೆ ಈ ಗ್ರಾಮವೇ ಸಾಕ್ಷಿ.

Leave a Comment

Your email address will not be published. Required fields are marked *