ಸಮಗ್ರಸಮಾಚಾರ: ರಾಜ್ಯ ರಾಜಕಾರಣದಲ್ಲಿ ಇದೀಗ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಿದ್ಯುತ್ ಕಳ್ಳತನದ ಆರೋಪವನ್ನು ಕಾಂಗ್ರೆಸ್ ಮಾಡಿದೆ. ಕುಮಾರಸ್ವಾಮಿ ಮನೆ ವಿದ್ಯುತ್ ಅಲಂಕಾರಕ್ಕೆ ವಿದ್ಯುತ್ ಅನ್ನು ಅಕ್ರಮವಾಗಿ ಬಳಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಉಚಿತ ವಿದ್ಯುತ್ ಬೇಕಿದ್ರೆ ಗೃಹಜ್ಯೋತಿ ಯೋಜನೆಗೆ ಒಂದು ಅರ್ಜಿ ಸಲ್ಲಿಸಬಹುದಿತ್ತು ಅಲ್ಲವಾ ಎಂದು ವ್ಯಂಗ್ಯ ಮಾಡಿದೆ. ನಿವಾಸಕ್ಕೆ ವಿದ್ಯುತ್ ಕಂಬದಿಂದ ವೈರ್ ಎಳೆದಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ಕಾರ್ಪ್ ನಲ್ಲಿ ಕಾಂಗ್ರೆಸ್ ಹಂಚಿಕೊಂಡಿದೆ. ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಹೆಚ್.ಡಿ ಕುಮಾರಸ್ವಾಮಿಯವರ ಜೆ ಪಿ ನಗರದ ನಿವಾಸದ ದೀಪಾವಳಿಯ ದೀಪಾಲಂಕಾರಕ್ಕೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅಪರಾಧ ಮಾಡಿಲ್ಲ, ನಾನೇನು ದೇಶ ಲೂಟಿ ಮಾಡಿದ್ನಾ, ನಾವೇನು ಕದಿರಿ ಅಂದಿದ್ವ, ದೀಪಾವಳಿಗೆ ಮನೆ ಲೈಟಿಂಗ್ ಮಾಡಲು ಬಂದವರು ಅಲ್ಲಿಂದ ಅನೆಕ್ಷನ್ ಮಾಡಿದ್ದಾರೆ. ವಿಷಯ ಗೊತ್ತಾದ ಕೂಡ್ಲೆ ತೆಗಿಸಿದೇನೆ. ಎರಡು ಸಾವಿರಕೊಸ್ಕರ ಹೀಗೆ ಮಾಡಲ್ಲ ನಾನು, ನಮ್ಮ ಮನೆ ಹತ್ರ ಬಂದವರಿಗೆ ದುಡ್ಡು ಕೊಡ್ತೇವೆ, ಇನ್ನೂ ಎರಡು ಸಾವಿರಕ್ಕೆ ಈ ತರ ಮಾಡ್ಬೇಕ ಅಂದಿದ್ದಾರೆ. ಏನೋ ತಪ್ಪಾಗಿ ಹೋಗಿದೆ ದಂಡ ಕಟ್ಟಲು ತಯಾರಿದ್ದೇನೆ ಎಂದಿದ್ದಾರೆ.
ಇದೀಗ ಬೆಸ್ಕಾಂ ಅಧಿಕಾರಿಗಳು ಮತ್ತು dysp ಕುಮಾರಸ್ವಾಮಿ ಮನೆಯಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ. ಎಷ್ಟು ಅಕ್ರಮ ವಿದ್ಯುತ್ ಬಳಸಿದ್ದಾರೆ ಎಂದು ಸಂಜೆ ವೇಳೆ ಅಧಿಕಾರಿಗಳು ರಿಪೋರ್ಟ್ ನೀಡುತ್ತಾರೆ.