Ad Widget .

ದೇಶವೇ ಬೆಳಗಿದರೂ ಇಲ್ಲಿ ಮಾತ್ರ 230 ವರ್ಷಗಳಿಂದ ದೀಪಾವಳಿ ಸಂಭ್ರಮವಿಲ್ಲ! ಮೇಲುಕೋಟೆಯ ಅಯ್ಯಂಗಾರ್ ಕುಟುಂಬ ಹೀಗೇಕೆ ಮಾಡುತ್ತಿದೆ?

ಸಮಗ್ರ ನ್ಯೂಸ್: ದೇಶವೇ ದೀಪಗಳಿಂದ ಜಗಮಗಿಸುತ್ತಿದ್ದು, ಎಲ್ಲೆಡೆ ಬೆಳಕಿನ-ಸುಡುಮದ್ದುಗಳ ಸಡಗರ ಕಂಡುಬರುತ್ತಿದ್ದರೆ ಇಲ್ಲೊಂದು ಕಡೆ ಮಾತ್ರ ವರ್ಷಗಟ್ಟಲೆ ಕಾಲದಿಂದ ದೀಪಾವಳಿ ಹಬ್ಬ ಆಚರಣೆಯನ್ನೇ ಮಾಡಿಲ್ಲ.

Ad Widget . Ad Widget .

ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆ ಗ್ರಾಮವೇ ಇಂಥದ್ದೊಂದು ಬೆಳವಣಿಗೆಗೆ ಸಾಕ್ಷಿಯಾಗಿದೆ. ಇಲ್ಲಿನ ಅಯ್ಯಂಗಾರ್ ಸಮುದಾಯ ಸುಮಾರು 230 ವರ್ಷಗಳಿಂದ ದೀಪಾವಳಿ ಹಬ್ಬ ಆಚರಿಸುತ್ತಿಲ್ಲ.

Ad Widget . Ad Widget .

ನರಕ ಚತುರ್ದಶಿಯ ವಾರ್ಷಿಕ ಹಬ್ಬ ಆಚರಿಸಲು 1790ರಲ್ಲಿ ಶ್ರೀರಂಗಪಟ್ಟಣದ ನರಸಿಂಹ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ 800 ಅಮಾಯಕ ನಿರಾಯುಧ ಅಯ್ಯಂಗಾರ್ ಬ್ರಾಹ್ಮಣರನ್ನು ಟಿಪ್ಪು ಸುಲ್ತಾನ್ ಹತ್ಯೆ ಮಾಡಿಸಿದ್ದನು.

ಅಂದು ಟಿಪ್ಪು ಸುಲ್ತಾನ್ ಮೇಲುಕೋಟೆಯ ಈ 800 ಮನೆಗಳ ದೀಪಗಳನ್ನು ನಂದಿಸಿದ್ದು, ಇಂದಿಗೂ ಇಲ್ಲಿನ ಜನರ ಹೃದಯದಲ್ಲಿ ಆ ನೋವು ಮಾಸಿಲ್ಲ. ತಮ್ಮ ಪೂರ್ವಜರ ಸ್ಮರಣೆಯಲ್ಲಿ ಮೇಲುಕೋಟೆ ಗ್ರಾಮದ ಅಯ್ಯಂಗಾರ್​ ಬ್ರಾಹ್ಮಣರೂ ಇಂದಿಗೂ ದೀಪಾವಳಿ ಆಚರಿಸುತ್ತಿಲ್ಲ.

Leave a Comment

Your email address will not be published. Required fields are marked *