ಕೊಡಗಿನ ಸುಗ್ಗಿ ಹಬ್ಬ ಎಂದು ಪ್ರಸಿದ್ದವಾಗಿರುವ ಹುತ್ತರಿಗೆ ಕೊಡಗಿನ ಮಳೆ ಹಾಗೂ ಬೆಳೆ ದೇವರೆಂದೇ ಕರೆಯಲ್ಪಡುವ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಅಮ್ಮಂಗಲ ಜ್ಯೋತಿಷ್ಯರು ನವೆಂಬರ್ 27ರಂದು ಮಹೂರ್ತ ನಿಗದಿ ಮಾಡಿದರು.
ನವೆಂಬರ್ 27ರ ರಾತ್ರಿ 7.20ಕ್ಕೆ ನೆರೆ ಕಟ್ಟುವುದು, ರಾತ್ರಿ 8.20ಕ್ಕೆ ಕದಿರು ಕುಯ್ಯುವುದು ಮತ್ತು ರಾತ್ರಿ 9.20ಕ್ಕೆ ಪ್ರಸಾದ ಸ್ವೀಕಾರ ಕಾರ್ಯಕ್ರಮ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ನಡೆಯಲಿದೆ.
ಕೊಡಗಿನ ಇತರ ಕಡೆಗಳಲ್ಲಿ ರಾತ್ರಿ 7.45ಕ್ಕೆ ನೆರೆ ಕಟ್ಟುವುದು, ರಾತ್ರಿ 8.45ಕ್ಕೆ ಕದಿರು ಕುಯ್ಯುವುದು ಮತ್ತು ರಾತ್ರಿ 9.45ಕ್ಕೆ ಭೋಜನಕ್ಕೆ ಶುಭ ಮಹೂರ್ತ ಎಂದು ತಿಳಿಸಲಾಗಿದೆ.