Ad Widget .

ಮೌನ ದೀಪಾವಳಿ ಆಚರಿಸಿ ಮಾದರಿಯಾದ ಏಳು ಹಳ್ಳಿಗಳು

ಸಮಗ್ರ ನ್ಯೂಸ್: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಎಲ್ಲೆಡೆ ಪಟಾಕಿ ಸದ್ದುಗಳೇ ಕೇಳಿ ಬರುತ್ತವೆ. ಇದರ ವಾಯು ಮಾಲಿನ್ಯದ ಜತೆಗೆ ಶಬ್ದ ಮಾಲಿನ್ಯವನ್ನು ತರುತ್ತದೆ. ಇದೇ ರೀತಿ ಎಲ್ಲೆಡೆ ಸಂಭ್ರಮಾಚರಣೆ ನಡೆದರೆ, ತಮಿಳುನಾಡಿನ ಈ 7 ಹಳ್ಳಿಗಳ ಜನರು ಮಾತ್ರ ‘ಮೌನ ದೀಪಾವಳಿ’ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ.

Ad Widget . Ad Widget .

ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ಏಳು ಹಳ್ಳಿಗಳು ಕೇವಲ ದೀಪಗಳು ಹಚ್ಚುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸಿದ್ದಾರೆ. ಇಲ್ಲಿ ಹಸಿರು ಪಟಾಕಿಗಳನ್ನು ಹಚ್ಚಲಾಗಿದೆ. ಕಾರಣ ಈ ಹಳ್ಳಿಗಳ ಸಮೀಪವೇ ಪಕ್ಷಧಾಮ ಇದೆ. ಈ ಕಾರಣದಿಂದ ಅರ್ಥಪೂರ್ಣ ಆಚರಣೆಗೆ ಈ ವರ್ಷ ರಾಜ್ಯ ಸಾಕ್ಷಿಯಾಗಿದೆ.

Ad Widget . Ad Widget .

ಈರೋಡ್ ನಿಂದ ಕೇವಲ 10 ಕಿಲೋಮೀಟರ್‌ ದೂರದಲ್ಲಿರುವ ವಡಮುಗಂ ವೆಲ್ಲೋಡ್‌ನ ಸುತ್ತಮುತ್ತ ಈ ಗ್ರಾಮಗಳಿವೆ. ಇಲ್ಲಿ ಸಾವಿರಾರು ಸ್ಥಳೀಯ ಪಕ್ಷಿ ಪ್ರಭೇದಗಳು ಮತ್ತು ಇತರ ಪ್ರದೇಶಗಳಿಂದ ವಲಸೆ ಹಕ್ಕಿಗಳು ಆಗಮಿಸುತ್ತವೆ. ಇವುಗಳು ಅಕ್ಟೋಬರ್ ನಿಂದ ಜನವರಿ ತಿಂಗಳ ಮಧ್ಯೆ ಈ ಅಭಯಾರಣ್ಯಕ್ಕೆ ಭೇಟಿ ನೀಡಿ, ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ.

ಪ್ರತಿವರ್ಷ ಪಕ್ಷಿಗಳ ಆಗಮಿಸುತ್ತವೆ. ಪ್ರತಿ ವರ್ಷ ದೀಪಾವಳಿ ಹಬ್ಬ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ತಿಂಗಳಲ್ಲಿ ಬರುವುದರಿಂದ ಪಕ್ಷಿಧಾಮದ ಸುತ್ತಮುತ್ತ ಅಂದಾಜು 900ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತವೆ. ಅವರೆಲ್ಲ ದೀಪಾವಳಿಯನ್ನು ಪಟಾಕಿ ಹೊಡೆಯದೇ ಸರಳವಾಗಿ ಆಚರಿಸುವ ಮೂಲಕ ಪಕ್ಷಿಗಳನ್ನು ರಕ್ಷಿಸುವ ನಿರ್ಧಾರ ಕೈಗೊಂಡರು.

ಈ ನಿರ್ಧಾರದಿಂದ ಈ ಏಳು ಗ್ರಾಮಗಳ ಜನರು ಕಳೆದ 22 ವರ್ಷಗಳಿಂದ ಈ ಸರಳ ದೀಪಾವಳಿ ಆಚರಣೆ ವಿಧಾನವನ್ನೇ ಅನುಸರಿಸುತ್ತಿದ್ದಾರೆ. ದೀಪಾವಳಿ ಆಚರಣೆಗೆಂದು ಅವರು ತಮ್ಮ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುತ್ತಾರೆ. ಕೇವಲ ಸದ್ದು ಬಾರದ ಮಿಂಚು ಪಟಾಕಿ ಸುಡಲು ಅನುಮತಿಸಿದ್ದಾರೆ. ಇಲ್ಲಿ ಮಕ್ಕಳಿಗೂ ಸಹ ಪಟಾಕಿ ಹೊಡೆಯಲು ಅವಕಾಶ ನೀಡುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *