Ad Widget .

ಕಡಬ: ಮಕ್ಕಳಾಗಿಲ್ಲ ಎಂದು ಸಾವಿಗೆ ಶರಣಾದ ವ್ಯಕ್ತಿ

ಸಮಗ್ರ ನ್ಯೂಸ್: ವ್ಯಕ್ತಿಯೋರ್ವರು
ಮಕ್ಕಳಾಗಲಿಲ್ಲವೆಂದು ಮನನೊಂದು ಸಾವಿಗೆ ಶರಣಾದ ಘಟನೆ ಕಡಬ ತಾಲೂಕು ಕಾಣಿಯೂರು ಗ್ರಾಮದ ಅಬ್ಬಡದಲ್ಲಿ ಅ.12 ರಂದು ನಡೆದಿದೆ. ಮೃತಪಟ್ಟವರನ್ನು ಲೋಕಯ್ಯ (43 ವರ್ಷ) ಎಂದು ಗುರುತಿಸಲಾಗಿದೆ.

Ad Widget . Ad Widget .

ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ಸಾವಿಗೆ ಶರಣಾಗಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಅವರು ಶೋಭಾ ಅನ್ನುವವರ ಜೊತೆ ವಿವಾಹವಾಗಿದ್ದರು. ಆದರೆ ಅವರಿಗೆ ಸಂತಾನ ಭಾಗ್ಯ ಒಲಿದು ಬಂದಿರಲಿಲ್ಲ. ಇದರಿಂದ ನೊಂದು ಮದ್ಯ ಸೇವನೆ ಮಾಡಲು ಶುರು ಮಾಡಿಕೊಂಡಿದ್ದರು.

Ad Widget . Ad Widget .

ಇತ್ತೀಚೆಗೆ ಸುಮಾರು 4 ವರ್ಷಗಳಿಂದ ಲೋಕಯ್ಯ ಗೌಡರು ಕೂಲಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು , ಮದ್ಯ ಸೇವನೆ ಅಧಿಕವಾಗಿ ಸಮಯಕ್ಕೆ ಸರಿಯಾಗಿ ಅನ್ನ – ಆಹಾರ ಇಲ್ಲದೇ ನಿತ್ರಾಣಗೊಂಡಿದ್ದರು . ನ.12ರಂದು ಶೋಭಾ ಬೆಳಗ್ಗೆ ಕೂಲಿ ಕೆಲಸಕ್ಕೆ ಹೋಗಿದ್ದು , ಸಂಜೆ ಮನೆಗೆ ಬಂದಾಗ ಮನೆಯ ಹಾಲ್ ನಲ್ಲಿ ಲೋಕಯ್ಯ ಗೌಡರು ಬಿದ್ದುಕೊಂಡಿದ್ದು , ಅವರ ಬಾಯಿಯಿಂದ ಬಿಳಿ ನೊರೆ ಬಂದಿದ್ದು , ಘಾಟು ವಾಸನೆ ಬರುತ್ತಿತ್ತು . ಮುಟ್ಟಿ ನೋಡಿದಾಗ ಮೈ ತಣ್ಣಗಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪರೀಕ್ಷಿಸಿದಾಗ ಲೋಕಯ್ಯ ಗೌಡರು ಮೃತಪಟ್ಟಿರುವುದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Comment

Your email address will not be published. Required fields are marked *