Ad Widget .

ಬೆಂಗಳೂರು: ‘ಸಮಗ್ರ ಸಮಾಚಾರ’ ದೀಪಾವಳಿ ವಿಶೇಷಾಂಕ ಬಿಡುಗಡೆಗೊಳಿಸಿದ ಜೋಗಿ

ಸಮಗ್ರ ನ್ಯೂಸ್: ಸಮಗ್ರ ಸಮಾಚಾರ.ಕಾಂ ನ ಪ್ರಥಮ ದೀಪಾವಳಿ ವಿಶೇಷ ಸಂಚಿಕೆಯನ್ನು ಬೆಂಗಳೂರಿನ ಸಾವಣ್ಣ ಪ್ರಕಾಶನ ಆವರಣದಲ್ಲಿ ಹಿರಿಯ ಸಾಹಿತಿ, ಪತ್ರಕರ್ತ ಗಿರೀಶ್ ರಾವ್ ಹತ್ವಾರ್(ಜೋಗಿ) ಬಿಡುಗಡೆಗೊಳಿಸಿದರು.

Ad Widget . Ad Widget .

ಈ ಸಂದರ್ಭದಲ್ಲಿ ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ, ಯುವ ಸಾಹಿತಿ ಮತ್ತು ಕಾದಂಬರಿಕಾರ ಸಂಪತ್ ಸಿರಿಮನೆ, ಸಮಗ್ರ ಸಮಾಚಾರ ಮುಖ್ಯಸ್ಥ ಜಯದೀಪ್ ಕುದ್ಕುಳಿ, ಸಂಪಾದಕ ಪ್ರಸಾದ್ ಕೋಲ್ಚಾರ್, ಸಂಚಿಕೆ ನಿರ್ವಾಹಕ ಕೀರ್ತನ್ ಕುಕ್ಕುಡೇಲು, ಸಿಬ್ಬಂದಿಗಳಾದ ಅನನ್ಯ ಕಾಟೂರು, ಧನ್ಯಶ್ರೀ ಅಮ್ಮುಂಜ ಉಪಸ್ಥಿತರಿದ್ದರು.

Ad Widget . Ad Widget .

ಈ ಸಂದರ್ಭದಲ್ಲಿ ಮಾತನಾಡಿದ ಜೋಗಿಯವರು, ಪುಟ್ಟ ತಂಡದ‌ ಸಾಹಸ ಬಲುದೊಡ್ಡದು. ಉತ್ತಮ ಬರಹಗಳನ್ನು ಹೊತ್ತು ತಂದ ಸಂಚಿಕೆ ಅರ್ಥಪೂರ್ಣವಾಗಿ ಮೂಡಿಬಂದಿದೆ ಎಂದರು.

ಸಂಪತ್ ಸಿರಿಮನೆ ಮಾತನಾಡಿ, ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಈ ಹೊಸ ಸಾಹಸ ಮಾಡಿರುವುದು ನಿಜಕ್ಕೂ ಮೆಚ್ಚುವಂಥದ್ದು, ಓದಬಹುದಾದ ಲೇಖನಗಳ ಹೊತ್ತಗೆ ಅಧ್ಬುತ ಪ್ರಯೋಗ ಎಂದರು.

ವಿಶೇಷಾಂಕವು ನ.13ರಂದು ಮಾರುಕಟ್ಟೆಯಲ್ಲಿ ಲಭ್ಯವಿರಲಿದ್ದು, ಹತ್ತಿರದ ಮಳಿಗೆಗಳಲ್ಲಿ ಕಾದಿರಿಸಿಕೊಳ್ಳಬಹುದು. ವಿಶೇಷಾಂಕದ ಕುರಿತ ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಂಖ್ಯೆ 9108131193 ಸಂಪರ್ಕಿಸಬಹುದು.

Leave a Comment

Your email address will not be published. Required fields are marked *