Ad Widget .

ಸುಳ್ಯ:ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿಯಲ್ಲಿ ಯಕ್ಷಗಾನ ತರಬೇತಿ ಕೇಂದ್ರ ಆರಂಭ

ಸಮಗ್ರ ನ್ಯೂಸ್:ಶಿವಾಜಿ ಯುವ ವೃಂದ ಹಳೆಗೇಟು,ಶಿವಾಜಿ ಗೆಳೆಯರ ಬಳಗ ಹಳೆಗೇಟು,ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿಯಲ್ಲಿ ಮುಖೇಶ್ ಬೆಟ್ಟಂಪಾಡಿ ಅವರ ಸಂಯೋಜನೆಯಲ್ಲಿ ಉಚಿತ ಯಕ್ಷಗಾನ ತರಬೇತಿ ತರಗತಿಯು ದೀಪಗಳ ಹಬ್ಬ ದೀಪಾವಳಿಯ ಶುಭದಿನದಂದು ಆರಂಭವಾಯಿತು. ತರಗತಿಯನ್ನು ಯಕ್ಷಗಾನ ಗುರುಗಳು ಶಶಿಕಿರಣ್ ಕಾವು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು.

Ad Widget . Ad Widget .

ವೇದಿಕೆಯಲ್ಲಿ ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ ರಾಧಕೃಷ್ಣ ನಾಯಕ್,ಕಾರ್ಯದರ್ಶಿ ಭಾಸ್ಕರ್ ಎಂ.ಎಸ್, ಮಂಜುನಾಥೇಶ್ವರ ಭಜನಾ ಮಂಡಳಿಯ ಗೌರವ ಅಧ್ಯಕ್ಷ ನಾರಾಯಣ ಬೆಟ್ಟಂಪಾಡಿ, ಭಜನಾ ಮಂಡಳಿಯ ಅಧ್ಯಕ್ಷ ಯುವ ನಾಯಕ ಅವಿನ್ ಬೆಟ್ಟಂಪಾಡಿ, ಕಲಾವಿದ ಸನತ್ ಬರಮೇಲು ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ಗುರುಗಳು ಶಶಿಕುಮಾರ್ ಕಾವು ಅವರು ಮೊದಲ ದಿನದ ತರಗತಿಯನ್ನು ಆರಂಭಿಸಿದರು.

Ad Widget . Ad Widget .

Leave a Comment

Your email address will not be published. Required fields are marked *