Ad Widget .

ಗ್ಲೆನ್ ಮ್ಯಾಕ್ಸ್‌ವೆಲ್ ದ್ವಿಶತಕಕ್ಕೆ ಬೆಚ್ಚಿದ ಕ್ರಿಕೆಟ್ ಜಗತ್ತು/ ಕ್ರಿಕೆಟ್ ದಿಗ್ಗಜರಿಂದ ಗುಣಗಾನ

ಸಮಗ್ರ ನ್ಯೂಸ್: ಏಕದಿನ ವಿಶ್ವಕಪ್ ಟೂರ್ನಿಯ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಂಕಷ್ಟದ ಕಾಲಘಟ್ಟದಲ್ಲಿ ಅಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ಗಳಿಸಿದ ದ್ವಿಶತಕಕ್ಕೆ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದೆ. ಇನ್ನೇನು ಆಸ್ಟ್ರೇಲಿಯಾ ಸೋತೇ ಹೋಯಿತು ಎಂಬಂತಹ ಸಮಯದಲ್ಲಿ ತಂಡವನ್ನು ಗೆಲುವಿನತ್ತ ಸಾಗಿಸಿದ ರೀತಿಯನ್ನು ಕ್ರಿಕೆಟ್ ದಿಗ್ಗಜರು ಗುಣಗಾನ ಮಾಡಿದ್ದಾರೆ.

Ad Widget . Ad Widget .

ಇಬ್ರಾಹಿಂ ಜೋರ್ಡನ್ ಅವರ ಶತಕದ ನೆರವಿನಿಂದ 291 ರನ್ನುಗಳನ್ನು ಗಳಿಸಿ, 292 ರನ್ನುಗಳ ಗುರಿಯನ್ನು ಆಸೀಸ್ ತಂಡಕ್ಕೆ ನೀಡಿತ್ತು. ಈ ಗುರಿಯನ್ನು ತಲುಪಲು ಹೊರಟ ಆಸೀಸ್ ಒಂದು ಹಂತದಲ್ಲಿ 91 ರನ್ನುಗಳಿಗೆ 7 ವಿಕೆಟ್‍ಗಳನ್ನು ಕಳೆದುಕೊಂಡು ಪರದಾಡುತ್ತಿತ್ತು. ಈ ಹಂತದಲ್ಲಿ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಜೊತೆಗೂಡಿದ ಮ್ಯಾಕ್ಸ್‌ವೆಲ್ 170 ಎಸೆತಗಳಲ್ಲಿ 202 ರನ್ನುಗಳನ್ನು ಗೆಲುವಿನತ್ತ ಮುನ್ನಡೆಸಿದರು. ಈ ಜೊತೆಯಾಟದಲ್ಲಿ ಕಮ್ಮಿನ್ಸ್ ಪಾಲು ಕೇವಲ 12 ರನ್ನುಗಳು ಮಾತ್ರ. ಏಳು ವಿಕೆಟ್‍ಗಳನ್ನು ಬಹಳ ಸುಲಭವಾಗಿ ಕಿತ್ತಿದ್ದ ಅಫ್ಘಾನ್ ಬೌಲರ್‌ಗಳಿಗೆ ಮತ್ತೊಂದು ವಿಕೆಟ್ ತೆಗೆಯಲಾಗಲೇ ಇಲ್ಲ.

Ad Widget . Ad Widget .

128 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ 201 ರನ್ನುಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಬೆನ್ನುನೋವು ಮತ್ತು ಸ್ನಾಯು ಸೆಳೆತದ ನಡುವೆ ಮ್ಯಾಕ್ಸ್‌ವೆಲ್ ಆಟ ಜಗತ್ತಿನ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದು, ಅವರೆಲ್ಲರು ಮ್ಯಾಕ್ಸ್‌ವೆಲ್ ಗುಣಗಾನ ಮಾಡಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ‘ನನ್ನ ಜೀವನದಲ್ಲಿ ನೋಡಿದ ಅತ್ಯಂತ ಶ್ರೇಷ್ಠ ಏಕದಿನ ಇನ್ನಿಂಗ್ಸ್’ ಎಂದು ಹೊಗಳಿದರೆ, ಭಾರತದ ಮಾಜಿ ಆಟಗಾರ ವೀರೆಂದ್ರ ಸೆಹ್ವಾಗ್ ‘ಏಕದಿನದಲ್ಲಿ ಕಂಡ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ’ ಎಂದು ಶ್ಲಾಘಿಸಿದ್ದಾರೆ.

ಕ್ರಿಕೆಟ್ ಪ್ರೇಮಿ ಶಶಿ ತರೂರ್ ‘ನನ್ನ ಜೀವನದಲ್ಲಿ ಕಪಿಲ್ ದೇವ್‍ಗೆ ಸರಿಸಮನಾಗಿ ಮತ್ತೊಂದು ಇನ್ನಿಂಗ್ಸ್ ಎಂದಾದರೂ ನೋಡುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ಪವಾಡಗಳು ತನ್ನಿಂದ ತಾನೇ ಸೃಷ್ಟಿಯಾಗುತ್ತವೆ ಎಂದು ಮ್ಯಾಕ್ಸ್ ವೆಲ್ ನಮಗೆ ತೋರಿಸಿಕೊಟ್ಟಿದ್ದಾರೆ ಎಂದು ಹೊಗಳಿದ್ದಾರೆ. ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ‘ಇದು ಮಾನಸಿಕ ಹಾಗೂ ದೈಹಿಕ ಅಸಾಧಾರಣ ಪ್ರತಿಭೆಗೆ ಸಾಕ್ಷಿ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *