Ad Widget .

ಪುತ್ತೂರು: ದಿಢೀರನೇ ಅಸೌಖ್ಯಗೊಂಡು ಸಾವನ್ನಪ್ಪಿದ ನವವಿವಾಹಿತೆ

ಸಮಗ್ರ ನ್ಯೂಸ್: ನವವಿವಾಹಿತೆ ದಿಢೀರ್‌ ಅಸ್ವಸ್ಥತೆಗೆ ಒಳಗಾಗಿ ಚಿಕಿತ್ಸೆಗೆ ಕೊಂಡು ಹೋಗುವ ವೇಳೆ ಮೃತಪಟ್ಟ ಘಟನೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಪದಡ್ಕ ಎಂಬಲ್ಲಿ ನ 7 ರಂದು ನಡೆದಿದೆ. ಪಡುವನ್ನೂರು ಗ್ರಾಮದ ಪದಡ್ಕ ನಿವಾಸಿ ಪುಷ್ಪ (22) ಮೃತಪಟ್ಟವರು.

Ad Widget . Ad Widget .

ನ. 7 ರಂದು ನಸುಕಿನ ಜಾವ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಈಶ್ವರಮಂಗಲದ ಕ್ಲಿನಿಕ್‌ ಗೆ ಕರೆದುಕೊಂಡು ಬಳಿಕ ಪುತ್ತೂರು ಆಸ್ಫತ್ರೆಗೆ ಕರೆದುಕೊಂಡು ಹೋಗುವ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Ad Widget . Ad Widget .

ಪುಷ್ಪಾರವರಿಗೆ 6 ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಮೃತರು ತಂದೆ ತಾಯಿ ಪತಿ ಸಂತೋಷ್‌ ಕುಲಾಲ್‌, ಅತ್ತೆ ಹಾಗೂ ಮಾವನನ್ನು ಅಗಲಿದ್ದಾರೆ. ಪುಪ್ಪಾ ಹೃದಯಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

Leave a Comment

Your email address will not be published. Required fields are marked *