ಸುಳ್ಯ: ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ. ಇದರ ಕಛೇರಿಗೆ ಹವಾನಿಯಂತ್ರಿತ ಯಂತ್ರದ ಕೊಡುಗೆ

ಸಮಗ್ರ ನ್ಯೂಸ್: ಸುಳ್ಯ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ., ದಲ್ಲಿ ನ. 7 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಸಹಕಾರಿಯ ಕಛೇರಿಗೆ ಹವಾನಿಯಂತ್ರಿತ ಯಂತ್ರವನ್ನು ಕೊಡುಗೆಯಾಗಿ ನೀಡಿದ ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮಲ್ಲಿಕಾ ಸ್ಟಾಲ್ ಅಂಗಡಿಯ ಮಾಲಕ ತೊಡಿಕಾನ ಗ್ರಾಮದ ಬಾಳೆಕಜೆಯ ಶ್ರಿ ಬಾಲಕೃಷ್ಣ ಬಿ ವಿ ಇವರನ್ನು ಸನ್ಮಾನಿಸಲಾಯಿತು ಮತ್ತು ಇವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.

Ad Widget ... ..

ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷ ಜನಾರ್ದನ ದೋಳ ಉಪಾಧ್ಯಕ್ಷರಾದ ಸತ್ಯನಾರಾಯಣ ಅಚ್ರಪ್ಪಾಡಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಅಶ್ವತ್ ಬಿಳಿಮಲೆ ನಿರ್ದೇಶಕರಾದ ರಾಘವ ಗೌಡ ಮದುವೆಗದ್ದೆ, ಆನಂದ ಗೌಡ ಖಂಡಿಗ, ಸತೀಶ್ ಕೆ ಜಿ, ಸಚಿನ್ ಕುಮಾರ್ ಮಡಪ್ಪಾಡಿ, ಪ್ರಕಾಶ್ ಕೇರ್ಪಳ, ದೀಕ್ಷಿತ್ ಕುಮಾರ್ ಪಾನತ್ತಿಲ, ಭವಾನಿ ಬಿಳಿಮಲೆ ಮತ್ತು ಸಿಬ್ಬಂದಿ ಲಿಖಿತಾ ಉಪಸ್ಥಿತರಿದ್ದರು.

Ad Widget

Leave a Comment

Your email address will not be published. Required fields are marked *