Ad Widget .

‘ನಾನು ಭ್ರಷ್ಟನಲ್ಲ’ ಎಂದು ಬೋರ್ಡ್ ಹಾಕಿಕೊಂಡ ಬಿಇಒ ಕಛೇರಿ ಅಧಿಕ್ಷಕ| ಅಧಿಕಾರಿಯ ಈ ಕೆಲಸಕ್ಕೆ ಎಲ್ಲರೂ ಫಿದಾ!

ಸಮಗ್ರ ನ್ಯೂಸ್: ಸರ್ಕಾರಿ ಕಛೇರಿಗಳಲ್ಲಿ ಲಂಚ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ. ಗುಮಾಸ್ತನಿಂದ ಹಿಡಿದು ಮೇಲಾಧಿಕಾರಿವರೆಗೆ ಎಲ್ಲರೂ ಲಂಚ ತೆಗೆದುಕೊಂಡು ಭ್ರಷ್ಟರಾಗುತ್ತಿದ್ದಾರೆ. ಜನರಿಗೆ ದುಡ್ಡು ಕೊಡದೆ ಕೆಲಸವಾಗುವುದಿಲ್ಲ ಎಂಬ ಭಾವನೆ ಬೇರೂರಿದೆ.

Ad Widget . Ad Widget .

ಆದರೆ ಹಾಸನದಲ್ಲೊಬ್ಬ ಅಧಿಕಾರಿ ತಮ್ಮ ಮೇಜಿನ ಮೇಲೆ “ನಾನು ಭ್ರಷ್ಟನಲ್ಲ,ಇಲ್ಲಿ ಲಂಚ ಸ್ವೀಕರಿಸುವುದಿಲ್ಲ” ಎಂಬ ಫಲಕ ಹಾಕಿಕೊಂಡು ಪ್ರಾಮಾಣಿಕತೆ ಮೆರೆದಿದ್ದಾರೆ.ಆ ಮುಖಾಂತರ ಪ್ರಾಮಾಣಿಕತೆ ಇನ್ನೂ ಇದೆ ಎಂದು ತೋರಿಸಿದ್ದಾರೆ.

Ad Widget . Ad Widget .

ಈ ಲಂಚಾಸುರಗಳ ಹಾವಳಿಯ ಮಧ್ಯೆ ಹಾಸನದ ಬಿಇಒ ಕಛೇರಿಯ ಅಧೀಕ್ಷಕ ಡಿಎಸ್ ಲೋಕೇಶ್ ಅವರು ತಮ್ಮ ಟೇಬಲ್ ಮೇಲೆ ನಾನು ಭ್ರಷ್ಟನಲ್ಲ‌, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿಕೊಳ್ಳುವ ಮೂಲಕ ಪ್ರಾಮಾಣಿಕತೆ ಮೆರೆಯುತ್ತಿದ್ದಾರೆ.

ಎಲ್ಲೆಡೆ ಲಂಚಾವತಾರವೇ ತಾಂಡವವಾಡುತ್ತಿರುವಾಗ ಲೋಕೇಶ್ ಅವರ ಈ ಎದೆಗಾರಿಕೆಯ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಈ ಹಿಂದೆ ಮಾಜಿ ಪ್ರಧಾನಿ ಅವರ ಆಪ್ತ ಕಾರ್ಯದರ್ಶಿ ಆಗಿ ಕೆಲಸ ಮಾಡಿದ್ದ ಲೋಕೇಶ್ ಅವರು ತಮ್ಮ ಜನಸ್ನೇಹಿ ಕೆಲಸದಿಂದ‌ ಮೆಚ್ಚುಗೆ ಗಳಿಸಿದ್ದರು. ಇದೀಗ ಪ್ರಮೋಷನ್ ಪಡೆದು ಬಿಇಓ ಕಛೇರಿಯ ಅಧೀಕ್ಷರಾಗಿದ್ದು ಅವರು ಕರ್ತವ್ಯ ಆರಂಭಿಸಿದ ದಿನದಿಂದ ಹೀಗೊಂದು ಬೋರ್ಡ್ ಹಾಕಿಕೊಂಡು ಕೆಲಸ ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಇಂತಹ ಪ್ರಾಮಾಣಿಕ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಲಿ ಎಂಬುದೊಂದೇ ಆಶಯವಾಗಿದೆ.

Leave a Comment

Your email address will not be published. Required fields are marked *