ಚಿಂತಕಿ ಕೆ.ಷರೀಪಾರ ‘ನೀರೊಳಗಣ ಕಿಚ್ಚು’ ಗೆ ಮುಸ್ಲಿಂ ಸಾಹಿತ್ಯ‌ ಪ್ರಶಸ್ತಿ

ಸಮಗ್ರ ನ್ಯೂಸ್: ಮುಸ್ಲಿಂ ಬರಹಗಾರರ ಕನ್ನಡದ ಪ್ರಕಟಿತ ಅತ್ಯುತ್ತಮ ಕೃತಿಗೆ, ಕರ್ನಾಟಕ ಮುಸ್ಲಿಂ ಲೇಖಕರ ಸಂಘವು ಕೊಡಮಾಡುವ 2022ನೇ ಸಾಲಿನ ‘ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ಗೆ ಸಾಹಿತಿ, ಚಿಂತಕಿ ಕೆ.ಷರೀಫಾ ಅವರ ‘ನೀರೊಳಗಣ ಕಿಚ್ಚು’ ಕಥಾಸಂಕಲನ ಆಯ್ಕೆಯಾಗಿದೆ.

Ad Widget ... ..

ದಿ. ಯು.ಟಿ‌ ಫರೀದ್ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಯು ₹10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ನವೆಂಬರ್‌ 23ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ.

Ad Widget

Leave a Comment

Your email address will not be published. Required fields are marked *