Ad Widget .

ವಿಶ್ವಕಪ್‍ನಲ್ಲಿ ವೈಫಲ್ಯ ಕಂಡ ಶ್ರೀಲಂಕಾ ತಂಡ/ ಕ್ರಿಕೆಟ್ ಮಂಡಳಿಯನ್ನೇ ವಜಾಗೊಳಿಸಿದ ಶ್ರೀಲಂಕಾ ಸರಕಾರ

ಸಮಗ್ರ ನ್ಯೂಸ್: ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‍ನಲ್ಲಿ ಸತತ ವೈಫಲ್ಯ ಕಾಣುತ್ತಿರುವ ಶ್ರೀಲಂಕಾ ತಂಡದ ಕ್ರಿಕೆಟ್ ಮಂಡಳಿಯನ್ನೇ ಶ್ರೀಲಂಕಾ ಸರ್ಕಾರ ವಜಾಗೊಳಿಸಿ ಆದೇಶ ಹೊರಡಿಸಿದೆ. ಭಾರತ ತಂಡದ ವಿರುದ್ಧ ಹೀನಾಯ ಸೋಲುಂಡ ಬಳಿಕ ಶ್ರೀಲಂಕಾದ ಕ್ರೀಡಾ ಸಚಿವ ರೋಶನ್ ರಣಸಿಂಘೆ ಮಂಡಳಿಯನ್ನು ವಜಾಗೊಳಿಸಿ, ಅರ್ಜುನ ರಣತುಂಗ ಅವರನ್ನು ಮಂಡಳಿಯ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಅರ್ಜುನ ರಣತುಂಗ 1996ರ ವಿಶ್ವಕಪ್ ವಿಜೇತ ಶ್ರೀಲಂಕಾ ತಂಡದ ನಾಯಕರಾಗಿದ್ದರು.

Ad Widget . Ad Widget .

ನವೆಂಬರ್ 2ರಂದು ಮುಂಬೈನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ 358 ರನ್ನುಗಳಿಗೆ ಉತ್ತರವಾಗಿ ಕೇವಲ 55 ರನ್ನುಗಳನ್ನು ಗಳಿಸಿತ್ತು. ಈ ಸೋಲಿನ ಕುರಿತು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಂಡದಿಂದ ವಿವರವಾದ ವರದಿಯನ್ನು ಕೇಳಿತ್ತು. ಆದರೆ ಈ ನಡುವೆ ಶ್ರೀಲಂಕಾ ಸರ್ಕಾರ ಕ್ರಿಕೆಟ್ ಮಂಡಳಿಯನ್ನೇ ವಜಾಗೊಳಿಸಿದ್ದು, ಇದು ಅಚ್ಚರಿಯ ಬೆಳವಣಿಗೆಗಳಿಗೆ ಕಾರಣವಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *