Ad Widget .

ಉಗ್ರರ ಕೆಂಗಣ್ಣಿನಿಂದ ಜಸ್ಟ್ ಮಿಸ್ ಆಯ್ತು‌ ಕರ್ನಾಟಕ!? NIA ತನಿಖೆಯಲ್ಲಿ ಬಯಲಾಯ್ತು ಆ ಆತಂಕಕಾರಿ ವಿಚಾರ

ಸಮಗ್ರ ನ್ಯೂಸ್: ನಿಜಕ್ಕೂ ಕರ್ನಾಟಕದ ಜನ ಬೆಚ್ಚಿ ಬೀಳೋ ಸುದ್ದಿಯಿದು. ಸ್ವಲ್ಪ ಯಾಮಾರಿದ್ದರೂ ಕರ್ನಾಟಕದಲ್ಲಿ ನಡೆಯುತ್ತಿತ್ತಾ ಭಾರೀ ವಿದ್ವಂಸಕ ಕೃತ್ಯ? ಹೀಗೊಂದು ಶಂಕೆ ಇದೀಗ ಶುರುವಾಗಿದೆ. ಕಳೆದ ಜುಲೈ ತಿಂಗಳಲ್ಲಿ ಪುಣೆ ಬಳಿ ರಾಷ್ಟ್ರೀಯ ತನಿಖಾ (NIA) ಸಂಸ್ಥೆ ಬಂಧಿಸಿದ್ದ 7 ಮಂದಿ ಶಂಕಿತ ಉಗ್ರರ ವಿರುದ್ಧ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ವೇಳೆ ಬಂಧಿತ ಶಂಕಿತ ಉಗ್ರರು ಕರ್ನಾಟಕದಲ್ಲೂ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎನ್ನುವ ವಿಚಾರ ಪ್ರಸ್ತಾಪಿಸಲಾಗಿದೆ.

Ad Widget . Ad Widget . Ad Widget .

ಕಳೆದ ಜುಲೈನಲ್ಲಿ ಪುಣೆ ಬಳಿ 7 ಮಂದಿ ಶಂಕಿತ ಐಸಿಸ್ ಉಗ್ರರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದನಾ ದಾಳಿ ನಡೆಸುವ ಸಂಚಿನಲ್ಲಿ ಭಾಗಿಯಾಗಿರುವ ಶಂಕೆ ಮೇಲೆ 7 ಮಂದಿ ಮೇಲೆ ದಾಳಿ ನಡೆಸಲಾಗಿತ್ತು.

ಬಂಧಿತರನ್ನು ಮಧ್ಯಪ್ರದೇಶದ ರತ್ಲಾಮ್‌ನ ಮೊಹಮ್ಮದ್ ಇಮ್ರಾನ್, ಮೊಹಮ್ಮದ್ ಯೂಸುಫ್ ಖಾನ್ ಅಲಿಯಾಸ್ ‘ಮಟ್ಕಾ’ ಅಲಿಯಾಸ್ ಅಮೀರ್ ಅಬ್ದುಲ್ ಹಮೀದ್ ಖಾನ್, ಮೊಹಮ್ಮದ್ ಯೂನಸ್, ಮೊಹಮ್ಮದ್ ಯಾಕೂಬ್ ಸಾಕಿ ಅಲಿಯಾಸ್ ‘ಆದಿಲ್’ ಅಲಿಯಾಸ್ ಆದಿಲ್ ಸಲೀಂ ಖಾನ್, ಮಹಾರಾಷ್ಟ್ರದ ಪುಣೆಯ ಕೊಂಡ್ವಾದ ಕದೀರ್ ದಸ್ತಗೀರ್ ಪಠಾಣ್ ಅಲಿಯಾಸ್ ‘ಅಬ್ದುಲ್ ಕದೀರ್’ ಮತ್ತು ಸೀಮಾಬ್ ನಾಸಿರುದ್ದೀನ್ ಕಾಜಿ, ಮಹಾರಾಷ್ಟ್ರದ ಥಾಣೆಯಲ್ಲಿರುವ ಪಾದ್ಘಾದ ‘ಜುಲ್ಫಿಕರ್ ಅಲಿ ಬರೋಡಾವಾಲಾ ಅಲಿಯಾಸ್ ‘ಲಾಲಾಭಾಯಿ’ ಅಲಿಯಾಸ್ ‘ಸೈಫ್’, ಶಾಮಿಲ್ ಸಾಕಿಬ್ ನಾಚನ್ ಮತ್ತು ಆಕಿಫ್ ಅತೀಕ್ ನಾಚನ್ ಎಂಬುವರನ್ನು ಬಂಧಿಸಲಾಗಿತ್ತು.

ಇನ್ನು ಪುಣೆ ಬಳಿ‌ ಶಂಕಿತ ಐಸಿಸ್ ಉಗ್ರರು ಕರ್ನಾಟಕದಲ್ಲೂ‌ ಸಹ ಸ್ಫೋಟಕ್ಕೆ ಪ್ಲಾನ್ ಮಾಡಿದ್ದರು ಎಂಬ ಸ್ಫೋಟಕ ವಿಚಾರ ಇದೀಗ ಬೆಳಕಿಗೆ ಬಂದಿದೆ. ಎನ್‌ಐಎ ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದ್ದು, ಕರ್ನಾಟಕದಲ್ಲಿ ಸ್ಫೋಟಕ್ಕೂ ಶಂಕಿತ ಉಗ್ರರು ಸ್ಥಳ ಗುರುತು ಮಾಡಿದ್ದರು ಎನ್ನಲಾಗಿದೆ.

Leave a Comment

Your email address will not be published. Required fields are marked *