Ad Widget .

ಪ್ರತಿಮಾ ಕೊಲೆ ಕೇಸ್: ನಾಪತ್ತೆಯಾಗಿದ್ದ ಕಾರ್ ಡ್ರೈವರ್ ಪೊಲೀಸರ ವಶಕ್ಕೆ!

ಸಮಗ್ರ ಸಮಾಚಾರ: ಬೆಂಗಳೂರಿನ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್ ಮೆಂಟ್ ನಲ್ಲಿ ಚಾಕು ಇರಿದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ ಎಂಬವರನ್ನು ಕೊಲೆ ಮಾಡಲಾಗಿತ್ತು.

Ad Widget . Ad Widget .

ಪ್ರತಿಮಾ ಕಳೆದ 8 ವರ್ಷಗಳಿಂದ ಒಬ್ಬರೇ ಈ ಅಪಾರ್ಟ್​​ಮೆಂಟ್​​ನಲ್ಲಿ ವಾಸವಿದ್ದರು. ಈ ಸಂದರ್ಭದಲ್ಲಿ ನವೆಂಬರ್ 4ರಂದು ರಾತ್ರಿ 8.30 ಗೆ ಪ್ರತಿಮಾ ಅವರನ್ನು ಮನೆಯ ಮುಂಭಾಗದಲ್ಲೇ ಉಸಿರುಗಟ್ಟಿಸಿ ಕತ್ತು ಇರಿದು ಕೊಲೆ ಮಾಡಲಾಗಿದೆ. ಆದ್ರೆ ಪೊಲೀಸರು ಈ ಬಗ್ಗೆ ಕೊಲೆಯಾದ ದಿನದಿಂದ ಸತತವಾಗಿ ಪರಿಶೀಲನೆ ನಡೆಸುತ್ತಲೇ ಇದ್ದರು. ಇದೀಗ ಈ ತನಿಖೆಗೆ ತೆರೆಬಿದ್ದಿದ್ದು ಆರೋಪಿ ಯಾರೆಂದು ಪತ್ತೆಹಚ್ಚುವಲ್ಲಿ ಪೊಲೀಸರ ಕಾರ್ಯ ಯಶಸ್ವಿಯಾಗಿದೆ
ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯವರನ್ನು, ಡ್ರೈವರ್​, ಹಳೆ ಡ್ರೈವರ್​ ಆಫೀಸ್​ ಸ್ಟಾಪ್​ಗಳ ಜೊತೆ ಮೊಬೈಲ್​ ಅನ್ನೂ ವಶ ಪಡಿಸಿಕೊಂಡಿದ್ದರು. ಇದೀಗ ಈ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಣಿ ಅಧಿಕಾರಿ ಪ್ರತಿಮಾ ಅವರ ಹಳೆ ಡ್ರೈವರ್ ಆಗಿದ್ದ ಕಿರಣ್ ಎಂಬಾತನೇ ಕೊಲೆ ಮಾಡಿದ್ದಾನೆ. ಮೊದಲಿಗೆ ಈ ತನಿಖೆಯಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆದರೆ ವಿಚಾರಣೆ ವೇಳೆ ಕೊಲೆ ಮಾಡಿದ್ದು ಒಬ್ಬನೇ ಎಂಬುದು ಬಯಲಿಗೆ ಬಂದಿದೆ. ಸದ್ಯ ಆರೋಪಿ ಕಿರಣ್​ನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.

Ad Widget . Ad Widget .

ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತಿಮಾ ಮತ್ತು ಕಿರಣ್ ನಡುವೆ ಭಿನ್ನಾಭಿಪ್ರಾಯ ಬಂದಿತ್ತು. ಇದೇ ಕಾರಣಕ್ಕಾಗಿ ಡ್ರೈವರ್​ ಕಿರಣ್​ರನ್ನು ಕೆಲಸದಿಂದ ಪ್ರತಿಮಾ ತೆಗೆದಿದ್ರು. ಇದರಿಂದ ಕೋಪಗೊಂಡ ಕಿರಣ್ ಮನೆಗೆ ಬಂದು ಪ್ರತಿಮಾರನ್ನು ಕೊಲೆ ಮಾಡಿದ್ದಾನೆ. ಸದ್ಯ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿ, ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲಿಕ್ಕೆ ಪೊಲೀಸರು ಸಿದ್ದತೆ‌ ನಡೆಸುತ್ತಿದ್ದಾರೆ.

ಅಷ್ಟೆ ಅಲ್ಲದೆ ಕೊಲೆ ಮಾಡಿ ಎಸ್ಕೇಪ್ ಆಗ್ತಿದ್ದ ಅಸಾಮಿಯನ್ನು ಚಾಮರಾಜನಗರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Comment

Your email address will not be published. Required fields are marked *