Ad Widget .

ಚಿಕ್ಕಮಗಳೂರು ನಗರಸಭೆ ಅಧ್ಯಕ್ಷನ ಕೆಳಗಿಳಿಸಲು‌ SDPI‌ ಜೊತೆ ಬಿಜೆಪಿ ಹೊಂದಾಣಿಕೆ!!

ಸಮಗ್ರ ನ್ಯೂಸ್: ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ ಸದಸ್ಯರು ಎಸ್‌ಡಿಪಿಐ ಬೆಂಬಲ ಪಡೆದುಕೊಂಡಿದ್ದಾರೆ. ನಗರಸಭೆ ಅಧ್ಯಕ್ಷರ ವಿರುದ್ಧ ಬಿಜೆಪಿ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಜೆಡಿಎಸ್ ಸದಸ್ಯರು ಇದೇ ತಿಂಗಳು 10ರಂದು ಅವಿಶ್ವಾಸ ಮಂಡನೆಗೆ ಸಿದ್ಧತೆ ನಡೆಸಿದ್ದು, ಈ ಅವಿಶ್ವಾಸ ಮಂಡನೆಗೆ ಎಸ್ಡಿಪಿಐನ ಸದಸ್ಯರು ಸಹಿ ಹಾಕಿರುವುದು ಸದ್ಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Ad Widget . Ad Widget .

ಮಾಜಿ ಸಚಿವ ಸಿ.ಟಿ.ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಸ್ಥಳೀಯ ಬಿಜೆಪಿ ನಾಯಕರು ಎಸ್ಡಿಪಿಐ ಜೊತೆ ಕೈ ಜೋಡಿಸಲು ಮುಂದಾಗಿದ್ದಾರೆ. ಹಾಲಿ ನಗರಸಭಾಧ್ಯಕ್ಷ ವೇಣುಗೋಪಾಲ್ ಅವರನ್ನು ಕೆಳಗಿಳಿಸಲು ಬದ್ಧವೈರಿಗಳ ಜೊತೆಯಲ್ಲಿ ಕೈ ಜೋಡಿಸಲು ಕಮಲ ನಾಯಕರು ಮುಂದಾಗಿದ್ದಾರೆ. ಚಿಕ್ಕಮಗಳೂರು ನಗರಸಭೆ 35 ವಾರ್ಡ್ಗಳನ್ನು ಹೊಂದಿದ್ದು, ಕಳೆದ ನಗರಸಭೆ ಚುನಾವಣೆಯಲ್ಲಿ ಬಿಜೆಪಿಯ 18 ಸದಸ್ಯರು, ಜೆಡಿಎಸ್ 3, ಎಸ್ಡಿಪಿಐ 1 ಹಾಗೂ ಕಾಂಗ್ರೆಸ್ನ 13 ಸದಸ್ಯರು ಆಯ್ಕೆಯಾಗಿದ್ದರು. ಸರಳ ಬಹುಮತದೊಂದಿಗೆ ಬಿಜೆಪಿ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿದಿತ್ತು. ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ(ಬಿ) ಮೀಸಲಾಗಿದ್ದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಆಂತರಿಕ ಒಪ್ಪಂದದಂತೆ ಮೊದಲ ಎರಡೂವರೆ ವರ್ಷಗಳ ಅವಧಿಗೆ ಬಿಜೆಪಿ ಮುಖಂಡ ಹಾಗೂ ನಗರಸಭೆ ಸದಸ್ಯ ವರಸಿದ್ದಿ ವೇಣುಗೋಪಾಲ್ ಅವರನ್ನು ನಗರಸಭೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಈ ವೇಳೆ ಜೆಡಿಎಸ್ನ ಮೂವರು ಸದಸ್ಯರು ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಅವರಿಗೆ ಬೆಂಬಲ ನೀಡಿದ್ದರು. ಎರಡನೇ ಅವಧಿಗೆ ಬಿಜೆಪಿ ನಗರಾಧ್ಯಕ್ಷ ಹಾಗೂ ಕೋಟೆ ವಾರ್ಡ್ನ ಮಧುಕುಮಾರ್ ರಾಜ್ ಅರಸ್ ಅವರನ್ನು ನಗರಸಭೆ ಅಧ್ಯಕ್ಷರನ್ನಾಗಿ ಮಾಡಲು ಬಿಜೆಪಿ ಪಕ್ಷದ ಮುಖಂಡರು ಆಂತರಿಕ ಒಪ್ಪಂದ ಮಾಡಿಕೊಂಡಿದ್ದರು.

Ad Widget . Ad Widget .

ನಗರಸಭೆ ಹಾಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಮ್ಮ ಅಧಿಕಾರವಧಿ ಮುಗಿದ ಸಂದರ್ಭದಲ್ಲಿ ರಾಜೀನಾಮೆ ನೀಡಿ ನಂತರ ಪಕ್ಷದ ಆಂತರಿಕ ಒಪ್ಪಂದ ಮೀರಿ, ಪಕ್ಷ ಮುಖಂಡರ ಸೂಚನೆ ಧಿಕ್ಕರಿಸಿ ರಾಜೀನಾಮೆಯನ್ನು ಹಿಂಪಡೆದಿದ್ದರು, ಎರಡನೇ ಬಾರಿಗೆ ರಾಜೀನಾಮೆ ನೀಡಿದ್ದ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಮತ್ತೆ ಪಕ್ಷದ ಮುಖಂಡರ ಸೂಚನೆ ಮೀರಿ ರಾಜೀನಾಮೆ ಹಿಂಪಡೆದು ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದ್ದರು. ಈ ಕಾರಣಕ್ಕೆ ಬಿಜೆಪಿ ಜಿಲ್ಲಾ ಮುಖಂಡರು ಹಾಗೂ ಬಿಜೆಪಿ ಪಕ್ಷದ ನಗರಸಭೆ ಸದಸ್ಯರು ಸಭೆ ನಡೆಸಿ ವರಸಿದ್ದ ವೇಣುಗೋಪಾಲ್ ವಿರುದ್ಧ ಶಿಸ್ತು ಕ್ರಮಕೈಗೊಂಡು ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದರು. ಇದಕ್ಕೂ ಜಗ್ಗದ ವೇಣುಗೋಪಾಲ್ ನಗರಸಭೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದರು.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಗರಸಭೆ ಆಡಳಿತ ಮಂಡಳಿ ಸದಸ್ಯರು ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ನಿರ್ಣಯಿಸಿದ್ದು, ಅವಿಶ್ವಾಸ ಮಂಡನೆ ನಿರ್ಣಯಕ್ಕೆ ಬಿಜೆಪಿ ಪಕ್ಷದ 17 ಸದಸ್ಯರೂ ಸೇರಿದಂತೆ ಜೆಡಿಎಸ್ನ 3 ಹಾಗೂ ಎಸ್ಡಿಪಿಐನ ಓರ್ವ ಸದಸ್ಯೆ ಸಹಿ ಹಾಕಿದ್ದು, ನವೆಂಬರ್ 10ಕ್ಕೆ ಅವಿಶ್ವಾಸ ಮಂಡನೆಗೆ ದಿನಾಂಕ ನಿಗದಿಯಾಗಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ನಡೆಸಿದ ಸಭೆಯಲ್ಲಿ 17 ಮಂದಿ ಬಿಜೆಪಿ ಸದಸ್ಯರು, ಜೆಡಿಎಸ್ ಪಕ್ಷ ಮೂವರು ಸದಸ್ಯರು, ಎಸ್ ಡಿ ಪಿ ಐ ಸದಸ್ಯರು ಕೂಡ ಭಾಗಿಯಾಗಿದ್ದರು. ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ನಿರ್ಣಯ ಸೇರಿದಂತೆ ಸಭೆಯಲ್ಲಿ ಎಸ್ಡಿಪಿಐ ಸದಸ್ಯ ಭಾಗಿಯಾಗಿರುವುದು ಜಿಲ್ಲಾದ್ಯಾಂತ ಚರ್ಚೆಗೆ ಕಾರಣವಾಗಿದೆ.

Leave a Comment

Your email address will not be published. Required fields are marked *