ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಗೆ ವೇದಿಕೆ ಸಿದ್ಧವಾಗಿದ್ದು, ಇದೀಗ ಕರ್ನಾಟಕದ ಕಾಂಗ್ರೆಸ್ ನಾಯಕರು ಮತ್ತು ಸಚಿವರುಗಳು ತೆಲಂಗಾಣದತ್ತ ಮುಖ ಮಾಡಿದ್ದಾರೆ. ಎಐಸಿಸಿ ನೂರಕ್ಕೂ ಅಧಿಕ ಕಾಂಗ್ರೆಸ್ ನಾಯಕರನ್ನು ಚುನಾವಣಾ ಪ್ರಚಾರಕ್ಕೆ ನೇಮಿಸಿದೆ.
ಕೆಪಿಸಿಸಿ ಅಧ್ಯಕ್ಷರು ಮತ್ತು ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಈಗಾಗಲೇ ತೆಲಂಗಾಣದಲ್ಲಿ ಪ್ರಚಾರ ಆರಂಭಿಸಿದ್ದು, ಇದೀಗ ಎಐಸಿಸಿ ಕ್ಲಸ್ಟರ್ ಉಸ್ತುವಾರಿಗಳಾಗಿ, ಸಚಿವರಾದ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಬಿ. ನಾಗೇಂದ್ರ, ಜಮೀರ್ ಅಹ್ಮದ್ ಖಾನ್, ಶಿವರಾಜ್ ಎಸ್ ತಂಗಡಗಿ, ಪ್ರಿಯಾಂಕ್ ಖರ್ಗೆ, ಎಂ ಸಿ ಸುಧಾಕರ್, ಎಸ್ ಪಿ ಪಾಟೀಲ್, ಕೆ ಎಚ್ ಮುನಿಯಪ್ಪ ಕೃಷ್ಣ ಬೈರೇಗೌಡ ನೇಮಕಗೊಂಡಿದ್ದಾರೆ.
ಇವರ ಜೊತೆಗೆ ಕಾಂಗ್ರೆಸ್‍ನ 58 ಹಿರಿಯ ನಾಯಕರು, 35 ಶಾಸಕರು ಮತ್ತು 13 ವಿಧಾನ ಪರಿಷತ್‍ನ ಸದಸ್ಯರನ್ನು ವಿವಿಧ ಹಂತದ ಚುನಾವಣಾ ಉಸ್ತುವಾರಿಗಳಾನ್ನಾಗಿ ನೇಮಕ ಮಾಡಲಾಗಿದೆ.