Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ನ5 ರಿಂದ 11 ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Ad Widget . Ad Widget .

ಮೇಷ: ಮೇಷ ರಾಶಿಯವರಿಗೆ ಸ್ವತಂತ್ರವಾಗಿ ಗುರುವಿದ್ದು, ರಾಹು ಮೀನ ರಾಶಿಗೆ ಹೋಗಿದ್ದಾನೆ. ಲಗ್ನದಲ್ಲಿ ಗುರುವಿದ್ದರೂ ನಿಮಗೆ ಮಾರ್ಗವನ್ನು ತೋರಿ ಸದೃಢವಾದ ಕಾಯ ಕೊಟ್ಟು, ಕೆಲಸಕಾರ್ಯಗಳಲ್ಲಿ ಪ್ರಗತಿಯನ್ನು ಕೊಟ್ಟು ಅನುಗ್ರಹಿಸುತ್ತಾನೆ. ಆದರೂ, ಶೇಕಡ 100ರಷ್ಟು ಕೆಲಸ, ಕಾರ್ಯಗಳಲ್ಲಿ ಜಯಗಳಿಸಲು ನಿಮ್ಮ ಒಳ್ಳೆಯ ಸಮಯಕ್ಕಾಗಿ ಮೇ 1ನೇ ತಾರಿಕಿನವರೆಗೆ ಕಾಯಬೇಕು. ನಿಮಗೆ ಗುರುವು ಒಳ್ಳೆಯ ಫಲ ತರುತ್ತಾನೆ. ದತ್ತದೇವರ ಪೂಜೆಯಿರಲಿ, ನಿತ್ಯವೂ ಮತಾ-ಪಿತಾರಿಗೆ ವಂದಿಸಿ

Ad Widget . Ad Widget .

ವೃಷಭ ರಾಶಿ:
ವೃಷಭ ರಾಶಿಯವರಿಗೆ ಗುರುವು ದ್ವಾದಶದಲ್ಲಿದ್ದು, ಮನೋವ್ಯಾಕುಲ- ಸಂಘರ್ಷವನ್ನು ತರುತ್ತಾನೆ. ಮಾಡುವ ಕೆಲಸಗಳಲ್ಲಿ ಪರಿಪೂರ್ಣತೆ ಕಾಣದೆ ನಿರಾಸೆ ಕೊಡುತ್ತಾನೆ. 10ರಲ್ಲಿ ವಕ್ರಶನಿ ಸ್ವಕ್ಷೇತ್ರದಲ್ಲಿ ಇದ್ದರೂ, ಒಳ್ಳೆಯ ಸಮಯಕ್ಕೆ ಕಾಯಬೇಕು. ಮಾಡುವ ಕೆಲಸಗಳಲ್ಲಿ ರಹಸ್ಯ ಕಾಪಾಡಿಕೊಂಡು ಗುರುಗಳ ಸಲಹೆ ಪಡೆದು ಮುಂದೆ ಸಾಗಿದರೆ, ಭಯ, ಅಪಕೀರ್ತಿ ನಿವಾರಣೆ ಆಗುತ್ತದೆ. ದಕ್ಷಿಣಾಮೂರ್ತಿ ದುರ್ಗಾದೇವಿಯನ್ನು ಪೂಜಿಸಿ, ಭಜಿಸಿ.

ಮಿಥುನ ರಾಶಿ:
ಮಿಥುನ ರಾಶಿಗೆ ಗುರುವು 11ರಲ್ಲಿ ಇದ್ದು, 9ರ ವಕ್ರಶನಿ ಸ್ವಕ್ಷೇತ್ರದಲ್ಲಿ ಇರುವುದರಿಂದ ಕೆಲಸ, ಕಾರ್ಯಗಳನ್ನು ವಿವೇಚನೆಯಿಂದ ಮಾಡಿದರೆ ಲಾಭಾಂಶ ಜಾಸ್ತಿ ಆಗಿ, ನಷ್ಟವು ಆಗದಂತೆ ನೋಡಿಕೊಳ್ಳಬಹುದು. ಬೇಡದ ಕೆಲಸಗಳಲ್ಲಿ ತೊಡಗದೆ, ಅನ್ಯರ ತಂಟೆಗೆ ಹೋಗದೆ ದೈವಶಕ್ತಿ ಕಾಪಾಡಿಕೊಂಡು ಮುಂದೆ ಸಾಗಿದರೆ, ಏಕಾದಶ ಗುರುವು ಸತ್ಪಲ ಕೊಡುತ್ತಾನೆ. ಗಣಪತಿಗೆ ನಿತ್ಯವೂ ಗರಿಕೆ-ಗಂಧದಿಂದ ಪೂಜಿಸಿ.

ಕಟಕ‌ ರಾಶಿ:
10ರ ಗುರುವು ಅಶುಭನಲ್ಲ. ಪ್ರಾರ್ಥನೆ ಇದ್ದರೆ ಅವನೇ ಶುಭಗ್ರಹನಾಗುತ್ತಾನೆ. ವಕ್ರಗತಿಯಲ್ಲಿ ಶನಿ ಇರುವುದರಿಂದ ನೀವು ಕಟಕ ರಾಶ್ಯಾಧಿಪತಿ ಚಂದ್ರಾಂಶದಲ್ಲಿ ದತ್ತದೇವರನ್ನು ಪ್ರಾರ್ಥಿಸುವುದರಿಂದ ಏನನ್ನೂ ಪಡೆಯಬಹುದು. 4, 5, 6 ನಿಮಗೆ ಶುಭದಿನಗಳಾಗಿದ್ದು, ನಿಮ್ಮ ಕೆಲಸಗಳಲ್ಲಿ ಪ್ರಗತಿಯಿಂದ ಮುಂದುವರಿದು ಸಿದ್ಧಿಯನ್ನು ಪಡೆಯಬಹುದು.

ಸಿಂಹ ರಾಶಿ:
ಆಕಾಶವು ಎಷ್ಟು ಶುಭ್ರವೋ ಅದೇ ರೀತಿ ಗುರು 9ರಲ್ಲಿ ಶುಭಕಾರಕನು. ಯಾವುದೇ ಅಡೆತಡೆ ಇಲ್ಲದೆ ಕೀರ್ತಿ, ಧನ, ಸಂಪತ್ತು ಗಳಿಸುವ ಸಮಯ. 7ನೇ ಮನೆಯ ಶನಿಯು ಸ್ವಕ್ಷೇತ್ರದಲ್ಲಿ ಇರುವುದರಿಂದ ಗ್ರಹಚಕ್ರ ಸರಿಯಾಗಿಲ್ಲದಿದ್ದರೂ, ಸತ್ಯ-ಧರ್ಮದಲ್ಲಿ ನಡೆದರೆ ಅನೇಕ ವಿಚಾರಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಗಣಪತಿ, ದುರ್ಗೆಯನ್ನು, ಸ್ಕಂದನನ್ನು ಪೂಜಿಸಿ, ಆನಂದವಾಗಿ ಸಾಗಿರಿ.

ಕನ್ಯಾ‌ ರಾಶಿ:
ಈ ರಾಶಿಯವರಿಗೆ ಗುರು 8ರಲ್ಲಿ ವಕ್ರಗತಿಯಲ್ಲಿ ಇರುವುದರಿಂದ ಕಾಲವು ಕೈಗೂಡಿ ಬಂದಿಲ್ಲ. ಗುರುಬಲ-ದೈವಬಲ ಕಡಿಮೆಯಾಗಿ ಅತಿಯಾದ ಸಮಸ್ಯೆ-ಒತ್ತಡವೂ ಇರುತ್ತದೆ. 6ರ ಶನಿಯು ಮಾಡಿದ ಕೆಲಸಕ್ಕೆ ತಕ್ಕನಾದ ಧನವನ್ನು, ಪ್ರಗತಿಯನ್ನು ತರುತ್ತಾನೆ. ಗುರುವಿನ ಕೃಪೆಗೆ ಸಾಂಬಸದಾಶಿವನನ್ನು ಪೂಜಿಸಿ, ಶುಭವನ್ನು ಪಡೆಯಿರಿ. ದೇವಾಲಯದಲ್ಲೋ-ಮನೆಯಲ್ಲೋ ಕುಳಿತು ಶಿವಸಹಸ್ರನಾಮ ಪಾರಾಯಣ ಮಾಡಿದರೆ ಒಳ್ಳೆಯದಾಗುತ್ತದೆ.

ತುಲಾ ರಾಶಿ:
ಏಕಾಗ್ರತೆಯಿಂದ ಇಷ್ಟದೇವ ಸಹಿತ ಕುಲದೇವರನ್ನು ಪೂಜಿಸಿ. ಸಾಧಕರಾಗಿ ಬದುಕಿ. ಇನ್ನು ಅಧಿಕಾರವನ್ನು 7ನೇ ಮನೆ ಗುರುವು ನೀಡುತ್ತಾನೆ. ರಾಹು ಬಲಾಢ್ಯನಾಗಿದ್ದು, ನಿಮಗೆ ಧನ-ಸಂಪತ್ತು ಬಂದು ಸೇರುತ್ತದೆ. ನಿಮ್ಮ ಕುಲಗುರುಗಳನ್ನು ಪೂಜಿಸಿ, ಭಜಿಸಿ. ಎಲ್ಲವೂ ಒಳ್ಳೆಯದೇ ನಡೆಯುತ್ತದೆ.

ವೃಶ್ಚಿಕ ರಾಶಿ:
ಚೇಳು ವಿಷವಾಗಿದ್ದರೂ, ಮನುಷ್ಯನು ಸುಖ-ದುಃಖವನ್ನು, ಕಹಿ-ಸಿಹಿಯನ್ನು ಕತ್ತಲು-ಬೆಳಕನ್ನು ಎಲ್ಲವೂ ಒಂದೇ ಸಮನಾಗಿ ಕಾಣಬೇಕು. ಶನಿಯು ಸ್ವಕ್ಷೇತ್ರದಲ್ಲಿ ಇರುವುದರಿಂದ ನಿಮಗೆ ಬರಬೇಕಾದ ಧನ ತಂದು ಸೇರಿಸುತ್ತಾನೆ. ಯಾವ ಮನುಷ್ಯನೂ ಮಳೆ ಬಂದರೆ ಸಮುದ್ರ ತುಂಬಿತು ಎಂದು ಹೇಳುವುದಿಲ್ಲ. ಹಣ ಬಂದು ಸೇರುವುದು ನ.15ರ ನಂತರ. ಲಕ್ಷ್ಮೀ-ನಾರಾಯಣ ಸಹಿತ ಲಕ್ಷ್ಮೀ ನರಸಿಂಹನನ್ನು ಪೂಜಿಸಿ.

ಧನುಸ್ಸು ರಾಶಿ:
ಈ ರಾಶಿಯವರಿಗೆ ಗುರುವು ಪಂಚಮದಲ್ಲಿದ್ದು, ವಕ್ರ ಮನುಷ್ಯರ ಸಹವಾಸ ದೂರವಾಗಿದೆ. ನೀವು ದೈವವನ್ನು ನಂಬಿ ನಡೆದರೆ ಕೆಲಸಗಳು ಕೈಗೂಡಿ, ಶನಿ ವಕ್ರತ್ವವನ್ನು ದಾಟಿದಂತೆ ಯಶಸ್ಸು, ಧೈರ್ಯ, ಕೀರ್ತಿ, ಲಾಭ ಪ್ರಾಪ್ತಿಯಾಗಿ ರಾಜಮಾರ್ಗದಲ್ಲಿ, ರಾಜಗಾಂಭೀರ್ಯದಲ್ಲಿ ಗಜಾನನನಂತೆ ನಡೆಯುವಿರಿ. ಸುಖವಾಗಿ ಬಾಳಿರಿ. ಆರೋಗ್ಯವಂತರಾಗಿ.

ಮಕರ ರಾಶಿ:
ಗ್ರಹಣ ಕಾಲ ಕಳೆದು ಶೇಕಡ 60 ಒಳ್ಳೆಯ ಫಲವಿದೆ. ಶನಿಸಂಚಾರದ ಕಡೆಯ ಭಾಗದಲ್ಲಿದ್ದು, ಶನಿಯ ಪ್ರಾರ್ಥನೆ ಇರಬೇಕು. ಈಶ್ವರನ ಅನುಗ್ರಹ ಸಂಪಾದಿಸಿಕೋಳ್ಳಬೇಕು. ಸೋಮವಾರ ಶಿವಪೂಜೆಯನ್ನು ಮಾಡಿರಿ. ಸುಖವನ್ನು ಸಂಪಾದಿಸುವ ಕಾಲವಿದು.

ಕುಂಭ ರಾಶಿ: ಈ ರಾಶಿಗೆ ಶನಿಯು ಸ್ವಕ್ಷೇತ್ರದಲ್ಲಿ ಇದ್ದು, ಯಾವ ಕೇಡನ್ನು ಉಂಟುಮಾಡನು. ಗುರುವು ಅನುಗ್ರಹ ಕೊಡಲು ಸಶಕ್ತನಾಗಿದ್ದು, ದ್ವಿತೀಯ ರಾಹುವಿನಿಂದ ಮನೆಯಲ್ಲಿ ಕಲಹಗಳು, ವಿನಾಕಾರಣ ಮಾತಿಗೆ-ಮಾತು ಬೆಳೆದು ಸಮಯ ಮತ್ತು ಮನಸ್ಸನ್ನು ಹಾಳುಮಾಡುತ್ತದೆ. ಮನಕಾರಕ ಚಂದ್ರನನ್ನು ತೃಪ್ತಿಪಡಿಸಬೇಕಾದರೆ ಉಮಾಮಹೇಶ್ವರ ವ್ರತವನ್ನು ಮಾಡಿ. ಉಮಾ ಮಹೇಶ್ವರ ವ್ರತಕಥೆಯನ್ನು ಓದಿ.

ಮೀನ ರಾಶಿ:
ಸಂನ್ಯಾಸಿಗಳು, ಸೈನಿಕರು ಶುದ್ಧವಾಗಿದ್ದು, ಶುದ್ಧಾತ್ಮದಿಂದ ದೇಶಸೇವೆ-ಈಶಸೇವೆ ಎಂದು ಭಾವಿಸುವಂತೆ ಅದೇ ನಿಮಗೆ ಮಾದರಿಯಾಗಲಿ. ಶಿಸ್ತಿನಿಂದ ಜೀವನವನ್ನು ನಡೆಸಿಕೊಂಡು ಹೋದರೆ, ಬಂದ ಹಣವನ್ನು ಲೆಕ್ಕಾಚಾರ ಮಾಡಿ ಖರ್ಚು ಮಾಡಿದರೆ ಯಾವ ಕೊರತೆಯೂ ಆಗುವುದಿಲ್ಲ. ಶನಿಯು 12ರಲ್ಲಿ ಇರುವುದರಿಂದ ಯಾರು ಏನು ಬೇಕಾದರೂ ಹೇಳಿದರು ಜಾಣಕಿವುಡನ್ನು ಪ್ರದರ್ಶಿಸಿ. ಜೀವನವನ್ನು ಗೆದ್ದರೆ ಈ ಸಮಯದಲ್ಲಿ ನಿಮ್ಮನ್ನು ಹಿಡಿಯುವವರು ಯಾರೂ ಇಲ್ಲ. ಅನಂತವಾಗಿ ಕೊಡುವ ಅನಂತ ಪದ್ಮನಾಭ ವ್ರತಕಥೆಯನ್ನು ಓದಿರಿ. ಗೋಧಿ- ಬೆಲ್ಲ ದಾನ ಮಾಡಿ.

Leave a Comment

Your email address will not be published. Required fields are marked *