Ad Widget .

ಐಶ್ವರ್ಯ ಆತ್ಮಹತ್ಯೆ ಪ್ರಕರಣ| 10 ಆರೋಪಿಗಳ ಪೈಕಿ ಐವರು ಅರೆಸ್ಟ್

ಸಮಗ್ರ ನ್ಯೂಸ್: ಡೈರಿ ರಿಚ್ ಐಸ್​ ಕ್ರೀಂ ಕಂಪನಿ ಮಾಲೀಕನ ಸೊಸೆ ಸೂಸೈಡ್​ ಪ್ರಕರಣ ಸಂಬಂಧ ಪೊಲೀಸರು 10 ಆರೋಪಿಗಳ ಪೈಕಿ ಐವರನ್ನು ಬಂಧಿಸಿದ್ದಾರೆ. ಗೋವಿಂದರಾಜನಗರ ಪೊಲೀಸರು ಅತ್ತೆ-ಮಾವ, ಗಂಡ, ಮೈದುನ ಸೇರಿ ಐವರನ್ನು ಬಂಧಿಸಿದ್ದಾರೆ.

Ad Widget . Ad Widget .

ಐಶ್ವರ್ಯಾ ಚಿಕ್ಕಪ್ಪ ಓಂಪ್ರಕಾಶ್, ಚಿಕ್ಕಮ್ಮ ಶಾಲಿನಿ ವಿದೇಶಲ್ಲಿದ್ದಾರೆ. ಸೋದರತ್ತೆ ಗೀತಾ, ಸೋದರ ಮಾವ ರವೀಂದ್ರಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಪೊಲೀಸರು ಪ್ಲಾನ್​ ಮಾಡಿ ಐವರನ್ನು ಅರೆಸ್ಟ್ ಮಾಡಿದ್ದಾರೆ.

Ad Widget . Ad Widget .

ಐಶ್ವರ್ಯಾ ಆತ್ಮಹತ್ಯೆ ಸುದ್ದಿ ತಿಳಿದ ತಕ್ಷಣ ಗಂಡನ ಫ್ಯಾಮಿಲಿ ಎಸ್ಕೇಪ್​ ಆಗಿದ್ದರು. ಗೋವಾ, ಮುಂಬೈಗೆ ಎಸ್ಕೇಪ್​​ ಆಗಿ ಮೋಜು-ಮಸ್ತಿ ಮಾಡ್ತಿದ್ದರು. ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡು ಗೋವಾದ ಕ್ಯಾಸಿನೋದಲ್ಲಿದ್ದರು. ಪೊಲೀಸರು 3 ದಿನಗಳ ಮೊಬೈಲ್​ CDR ಪರಿಶೀಲನೆ ಮಾಡಿ ಬೆನ್ನತ್ತಿದ್ದರು. ಗಂಡನ ಮನೆಯವರು ಗೋವಾದ ಎರಡು ರೆಸಾರ್ಟ್​ಗಳಲ್ಲಿ ಸ್ಟೇ ಆಗಿದ್ದರು. ಪೊಲೀಸರು ಕ್ಯಾಸಿನೋದಲ್ಲಿದ್ದಾಗಲೇ ಐವರನ್ನೂ ಅರೆಸ್ಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *