Ad Widget .

ಇಸ್ರೋ ಸಂಸ್ಥೆಯ “ಸ್ಪೇಸ್ ಆನ್ ವ್ಹೀಲ್” ಮೊಬೈಲ್ ಬಸ್ ನವೆಂಬರ್ 9 ರಂದು ಸುಳ್ಯಕ್ಕೆ ಆಗಮಿಸಲಿದೆ

ಸಮಗ್ರ ನ್ಯೂಸ್: ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋದ ಸಾಧನೆಗಳನ್ನು ಪರಿಚಯಿಸುವ “ಸ್ಪೇಸ್ ಆನ್ ವ್ಹೀಲ್” ಮೊಬೈಲ್ ಬಸ್ ನವೆಂಬರ್ 7 ರಿಂದ 9 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸಲಿದೆ.

Ad Widget . Ad Widget .

ನವೆಂಬರ್ 9 ರಂದು ಸುಳ್ಯಕ್ಕೆ ಆಗಮಿಸಿ ಸುಳ್ಯದ ಜೂನಿಯರ್ ಕಾಲೇಜಿನ (ಸರಕಾರಿ ಪದವಿ ಪೂರ್ವ ಕಾಲೇಜು) ಮೈದಾನದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವೀಕ್ಷಣೆಗೆ ಲಭ್ಯವಿದೆ. ದಕ್ಷಿಣ ಕನ್ನಡ ವಿಜ್ಞಾನ ಪ್ರತಿಷ್ಠಾನ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ಬಾಹ್ಯಾಕಾಶ ವಿಷಯಗಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Ad Widget . Ad Widget .

ಇದರಲ್ಲಿ ಚಂದ್ರಯಾನ-1, ಮಂಗಳಯಾನ, ರಾಕೆಟ್ ಉಡ್ಡಯನ ಕೇಂದ್ರ, ಸಂವಹನ ಉಪಗ್ರಹ, ಆರ್ಯಭಟ, ಭಾಸ್ಕರ ಮೊದಲಾದ ಈ ಹಿಂದಿನ ಉಪಗ್ರಹಗಳ ಮಾದರಿಗಳು, ಅದೇ ರೀತಿ ಮುಂದಿನ ಬಾಹ್ಯಾಕಾಶ ಯೋಜನೆ ಗಗನ್ ಯಾನ್ 2024ರ ಮಾದರಿಗಳು ಹಾಗೂ ಇನ್ನಿತರ ಬಾಹ್ಯಾಕಾಶ ಯೋಜನೆಗಳ ಮಾದರಿಗಳು ವೀಕ್ಷಣೆಗೆ ಲಭ್ಯವಿದೆ.

ತಾಲೂಕಿನ ಎಲ್ಲ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಡಾ. ಅನುರಾಧಾ ಕುರುಂಜಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

1 thought on “ಇಸ್ರೋ ಸಂಸ್ಥೆಯ “ಸ್ಪೇಸ್ ಆನ್ ವ್ಹೀಲ್” ಮೊಬೈಲ್ ಬಸ್ ನವೆಂಬರ್ 9 ರಂದು ಸುಳ್ಯಕ್ಕೆ ಆಗಮಿಸಲಿದೆ”

Leave a Comment

Your email address will not be published. Required fields are marked *