Ad Widget .

ದೆಹಲಿಯಲ್ಲಿ ಮೂರು ದಿನದ ವಿಶ್ವ ಆಹಾರ ಮೇಳ/ ಇಂದು ಪ್ರಧಾನಿ ಮೋದಿ ಉದ್ಘಾಟನೆ

ಸಮಗ್ರ ನ್ಯೂಸ್: ದೆಹಲಿಯಲ್ಲಿ ಮೂರು ದಿನಗಳ ಆಯೋಜಿಸಲಾಗಿರುವ ವಿಶ್ವ ಆಹಾರ ಭಾರತ 2023 ಮೇಳವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ (ನವೆಂಬರ್ 3ರಿಂದ 5ರವರೆಗೆ) ದೆಹಲಿಯ ಪ್ರಗತಿ ಮೈದಾನದಲ್ಲಿ ಈ ಆಹಾರ ಮೇಳವನ್ನು ಆಯೋಜಿಸಲಾಗಿದೆ.

Ad Widget . Ad Widget .

ಭಾರತೀಯ ಆಹಾರ ಪದ್ಧತಿಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. 200ಕ್ಕೂ ಹೆಚ್ಚು ಬಾಣಸಿಗರು ಈ ಮೇಳದಲ್ಲಿ ಭಾಗವಹಿಸಲಿದ್ದು, ಭಾರತದ ವಿವಿಧ ಸಾಂಪ್ರದಾಯಿಕ ಪಾಕಸಂಸ್ಕøತಿಯನ್ನು ಜಗತ್ತಿಗೆ ಪರಿಚಯಿಸಲಿದ್ದಾರೆ.

Ad Widget . Ad Widget .

ಈ ಆಹಾರ ಮೇಳದಲ್ಲಿ ಸುಮಾರು 88 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, 6 ದೇಶಗಳ ಸಚಿವರು ಕೂಡ ಭಾಗವಹಿಸಲಿದ್ದಾರೆ. ವಿವಿಧ ದೇಶಗಳ 1200ಕ್ಕೂ ಹೆಚ್ಚು ಪ್ರದರ್ಶಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Leave a Comment

Your email address will not be published. Required fields are marked *