ಲುಲು ಮಾಲ್ ನಲ್ಲಿ ವಿಕೃತಿ ಮೆರೆದ‌ ಅಸಾಮಿಗೆ ಯಾವ ಶಿಕ್ಷೆಯೂ ಇಲ್ಲ| ವಕೀಲರ ಜೊತೆ ಕೋರ್ಟ್ ಗೆ ಬಂದ, ಜಾಮೀನು ಪಡೆದ, ಹೋದ..!

ಸಮಗ್ರ ನ್ಯೂಸ್: ಬೆಂಗಳೂರಿನ ಲುಲು ಮಾಲ್‌ನಲ್ಲಿ ಅ.29ರ ಭಾನುವಾರ ಸಂಜೆ ಯುವತಿಯ ಹಿಂಭಾಗವನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಕಾಮುಕ ಅಶ್ವಥ‌ ನಾರಾಯಣ್ ಯಾವ ಶಿಕ್ಷೆಯೂ ಇಲ್ಲದೆ, ಪೊಲೀಸ್ ಬಂಧನದಿಂದ ರಕ್ಷಣೆ ಪಡೆದು ಮನೆಯಲ್ಲಿದ್ದಾನೆ. ಪೊಲೀಸರ ಕೈಗೆ ಸಿಗದೇ ಕೋರ್ಟ್‌ ಮುಂದೆ ಹಾಜರಾದ‌ ಕಾಮುಕ ಅಲ್ಲಿ ಸಲೀಸಾಗಿ ಜಾಮೀನು ಪಡೆದು ಮನೆಯಲ್ಲಿ ಇದ್ದಾನೆ.

Ad Widget .

ಅಕ್ಟೋಬರ್‌ 29ರ ಭಾನುವಾರ ಸಂಜೆ ವೇಳೆ 62 ವರ್ಷದ ಅಶ್ವತ್ಥನಾರಾಯಣ್ ಎನ್ನುವ ನಿವೃತ್ತ ಶಿಕ್ಷಕ ಬೇಕಂತಲೇ ಯುವತಿಯನ್ನು ಹಿಡಿದುಕೊಂಡು ಆಕೆಯ ಹಿಂಭಾಗವನ್ನು ಹಿಡಿದುಕೊಂಡು ವಿಕೃತಿಯನ್ನು ಮೆರೆದಿದ್ದನು. ಇದನ್ನು ವಿಡಿಯೋ ಮಾಡಿದ ಯುವಕ ಲುಲು ಮಾಲ್‌ನ ಮ್ಯಾನೇಜರ್‌ಗೆ ಮಾಹಿತಿ ನೀಡುವುದರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿ ವಿಕೃತಿ ಮೆರೆಯುವ ವ್ಯಕ್ತಿಗೆ ಬುದ್ಧಿ ಕಲಿಸಬೇಕೆಂದು ಆತನ ವಿಡಿಯೋ ಜಾಲತಾಣದಲ್ಲಿ ಹಂಚಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಕೆಲವು ಮಾಹಿತಿಯನ್ನು ಬರೆದುಕೊಂಡಿದ್ದನು. ಈ ವಿಡಿಯೋ ವೈರಲ್‌ ಆಗಿ ಪೊಲೀಸರವರೆಗೂ ತಲುಪಿತ್ತು. ವಿಡಿಯೋ ಪರಿಶೀಲನೆ ಮಾಡಿದ ಮಾಗಡಿ ರಸ್ತೆ ಠಾಣೆಯ ಪೊಲೀಸರು 2 ದಿನದ ಬಳಿಕ ವ್ಯಕ್ತಿಯ ಬಗ್ಗೆ ಪೂರ್ಣ ಮಾಹಿತಿ ಕಲೆ ಹಾಕಿದ್ದರು. ಆತನ ಮನೆಗೆ ಹುಡುಕಿಕೊಂಡು ಹೋದಾಗ ಆತ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದು ತಿಳಿದ ಪೊಲೀಸರು ವಾಪಸ್ಸಾಗಿದ್ದರು.

Ad Widget . Ad Widget .

ಆದರೆ ಪೊಲೀಸರು ಬಂಧಿಸುತ್ತಾರೆಂದು ಭಯದಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಅಶ್ವತ್ಥನಾರಾಯಣ ಗುರುವಾರ ಮಧ್ಯಾಹ್ನದ ವೇಳೆ ವಕೀಲರೊಂದಿಗೆ ಎಸಿಎಂಎಂ 2ರ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾನೆ. ನಂತರ, ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿ ಜಾಮೀನು ಪಡೆದಿದ್ದಾನೆ‌. ಪೊಲೀಸರಿಂದ ಬಂಧನಕ್ಕೊಳಗಾಗದೇ ಮನೆಗೆ ತೆರಳಿದ್ದಾನೆ. ಇದೀಗ ಮನೆಯಲ್ಲಿ ಆರಾಮವಾಗಿದ್ದಾನೆ.

Leave a Comment

Your email address will not be published. Required fields are marked *