ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಪ್ರಸಿದ್ಧ ಹಾಸನಾಂಬೆ ಜಾತ್ರೋತ್ಸವ ಇಂದಿನಿಂದ ಪ್ರಾರಂಭವಾಗಿದ್ದು, ನವೆಂಬರ್ 14 ರವರೆಗೆ ದೇವಿಯ ದರ್ಶನದ ವ್ಯವಸ್ಥೆ ಮಾಡಲಾಗಿದೆ. ನೈವೇದ್ಯ ಅರ್ಪಣೆಯ ಸಮಯ ಹೊರತುಪಡಿಸಿ, ದಿನದ 24 ಗಂಟೆಯೂ ದೇವಿಯ ದರ್ಶನದ ವ್ಯವಸ್ಥೆ ಇದೆ.
ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ದೇವಿ ಎಂಬುದರ ಮೂಲಕ ಹಾಸನಾಂಬೆಯು ಪ್ರಸಿದ್ಧಿ ಪಡೆದಿದ್ದು, ಈ ವರ್ಷದ ದೇವಿ ದರ್ಶನ ಇಂದಿನಿಂದ ಆರಂಭವಾಗಿದೆ. ಹಾಸನ ಜಿಲ್ಲಾಡಳಿತವು ಜಾತ್ರೋತ್ಸವಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಮೂರು ಪಾಳಿಯಲ್ಲಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ.
ವಿಐಪಿ, ವಿವಿಐಪಿ ಮತ್ತು ವಿಶೇಷ ದರ್ಶನದ ಪಾಸ್ ಮತ್ತು ಟಿಕೆಟ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಇದರ ದುರ್ಬಳಕೆ ಆಗದಂತೆ ತಡೆಯಲು ಪಾಸ್ ಮತ್ತು ಟಿಕೆಟ್‍ಗಳ ಸ್ಕ್ಯಾನ್ ಮಾಡುವ ತಂತ್ರಜ್ಞಾನ ಬಳಸಲಾಗಿದೆ.