ಸಮಗ್ರ ನ್ಯೂಸ್:ಮೃತಪಟ್ಟ ಸಂಬಂಧಿಯ ಅಂತಿಮ ದರ್ಶನಕ್ಕೆಂದು ಬರುತ್ತಿದ್ದ ಕಾರು ಅಪಘಾತಕ್ಕಿಡಾಗಿ ಓರ್ವ ಸಾವನಪ್ಪಿ, ನಾಲ್ವರು ಗಾಯಗೊಂಡಿರುವ ದಾರುಣ ಬೆಂಗಳೂರು ಬಳಿಯ ಬಿಡದಿಯಲ್ಲಿ ನಡೆದಿದೆ.
ಕಳೆದ ಭಾನುವಾರ ಕಾಣೆಯಾಗಿದ್ದ
ಸುಂಟಿಕೊಪ್ಪ ಸಮೀಪದ ಸೆವೆಂತ್
ಮೇಲ್ ನಿವಾಸಿ ಪೌಲ್ ಡಿಸೋಜ ಅವರ ಮೃತ ದೇಹ ನ. 2ರಂದು ಬೆಳಗ್ಗೆ ಕೆರೆಯಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆದು ಅಂತ್ಯ ಸಂಸ್ಕಾರದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿತ್ತು. ಈ ನಡುವೆ ಬೆಂಗಳೂರಿನಲ್ಲಿ ನೆಲೆಸಿರುವ ಇವರ ಅಣ್ಣನ ಮಕ್ಕಳು ಸಾವಿನ ಸುದ್ದಿ ಅರಿತು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿದ್ದರು. ದುರಾದೃಷ್ಟಕ್ಕೆ ಇವರು ಪ್ರಯಾಣಿಸುತ್ತಿದ್ದ ಕಾರು ಬೆಂಗಳೂರು ಬಳಿಯ ಬಿಡದಿಯಲ್ಲಿ ಡಿವೈಡರ್ ಗೆ ಅಪ್ಪಳಿಸಿ ಮಗುಚಿಕೊಂಡಿದೆ.
ಪರಿಣಾಮ ಕಾರಿನಡಿಯಲ್ಲಿ ಸಿಲುಕಿ ಪೌಲ್ ಡಿಸೋಜರವರ ಅಣ್ಣನ ಮಗ ಸಿಲ್ವಿನ್ ಡಿಸೋಜ ಅವರು ಕೊನೆಯುಸಿರೆಳೆದಿದ್ದಾರೆ. ಪ್ರವೀಣ್ ಡಿಸೋಜ, ವನಿಷಾ ಡಿಸೋಜ ಹಾಗೂ ಕಾರಿನಲ್ಲಿದ್ದ ಇನ್ನಿಬ್ಬರು ಗಾಯಗೊಂಡು ಅಲ್ಲಿನ ಅಕ್ಷಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೆಡೆ ಪೌಲ್ ಡಿಸೋಜ ಅವರ ಅಕಾಲಿಕ ಸಾವಿನಿಂದ ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದ್ದು, ಇನ್ನೊಂದೆಡೆ ಅದೇ ಕುಟುಂಬದ ಇನ್ನೋರ್ವ ವಾಹನ ಅಪಘಾತದಲ್ಲಿ ಸಾವಿಗೀಡಾಗಿರುವುದು ವಿಧಿಯ ಕ್ರೂರ ಅಟ್ಟಹಾಸಕ್ಕೆ ಶಾಪ ಹಾಕುವತಾಗಿದೆ.