ಸಮಗ್ರ ನ್ಯೂಸ್: ಚೀನಾದ ಹಾಂಗೌಜ್ ನಲ್ಲಿ ನಡೆದಿದ್ದ ಪ್ಯಾರ ಒಲಂಪಿಕ್ ಕ್ರೀಡಾಕೂಟದಲ್ಲಿ 1500 ಮೀಟರ್ ಓಟವನ್ನು 5.21 ಸೆಕೆಂಡ್ ಗೆ ಓದಿದ್ದ ರಕ್ಷಿತಾ ರಾಜು ಅವರಿಗೆ ಪ್ರಧಾನಿ ಮೋದಿ ಶ್ಲಾಘನೆ.

ಪ್ಯಾರ ಒಲಿಂಪಿಕ್ ನಲ್ಲಿ ಭಾಗವಹಿಸಿದ್ದ ಕ್ರೀಡಾ ಪಟುಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪ್ಯಾರ ಒಲಿಂಪಿಕ್ ನಲ್ಲಿ ಚಿನ್ನ ಗೆದ್ದ ಮೂಡಿಗೆರೆ ತಾಲೂಕಿನ ಗುಡ್ನಳ್ಳಿ ಸಮೀಪದ ಅಂಧ ಯುವತಿ ರಕ್ಷಿತಾ ರಾಜು ಅವರು ನರೇಂದ್ರ ಮೋದಿ ಅವರಿಗೆ ಚೀನಾದಿಂದ ತಂದಿದ್ದ ಟಿಟ್ಟರ್ ಗಿಫ್ಟ್ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಟಿಟ್ಟರ್ ಗೈಡ್ ಜೊತೆ ಸಮಯೋಚಿತವಾಗಿ ಓಡಲು ಸಹಾಯ ಮಾಡುತ್ತದೆ.

ರಕ್ಷಿತಾಳಿಂದ ಉಡುಗೆರೆ ಸ್ವೀಕರಿಸಿದ ಪ್ರಧಾನಿ ಸಂತಸಪಟ್ಟು ಮುಂದೆಯೂ ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನ ಗೆಲ್ಲುವಂತೆ ಹಾರೈಸಿದ್ದಾರೆ. ಇವರು ಕಳೆದ ವರ್ಷ ಪ್ಯಾರಿಸ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ 5ನೇ ಸ್ಥಾನ ಪಡೆದಿದ್ದರು.