Ad Widget .

ಇನ್ಮುಂದೆ ಕೈದಿಗಳನ್ನು ನೋಡ್ಬೇಕು ಅಂದ್ರೆ ಆಧಾರ್ ಕಡ್ಡಾಯ/ ಕೇಂದ್ರ ಸರ್ಕಾರದ ಸೂಚನೆ

ಸಮಗ್ರ ನ್ಯೂಸ್: ಕೈದಿಗಳು ಮತ್ತು ಕೈದಿಗಳನ್ನು ನೋಡಲು ಬರುವ ಸಂದರ್ಶಕರು ಇನ್ನು ಮುಂದೆ ಕಡ್ಡಾಯವಾಗಿ ಆಧಾರ ದೃಢೀಕರಣಕ್ಕೆ ಒಳಪಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಕೈದಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಕೈದಿಗಳಿಗೆ ಸಿಗ್ತಾ ಇರುವ ಸೌಲಭ್ಯಗಳನ್ನು ಖಾತರಿ ಪಡಿಸಿಕೊಳ್ಳಲು ಕೂಡ ಆಧಾರ್ ಅನ್ನು ಬಳಸಿಕೊಳ್ಳಬೇಕು ಎಂದು ಕೇಂದ್ರ ಹೇಳಿದೆ.

Ad Widget . Ad Widget .

ಆಧಾರ್ ದೃಢೀಕರಣಕ್ಕೆ ಸಂಬಂಧಿಸಿದ ಕಾರ್ಯವಿಧಾನವನ್ನು ಕೇಂದ್ರದ ನ್ಯಾಷನಲ್ ಇನ್‍ಫರ್ಮಟೆಕ್ಸ್ ಸೆಂಟರ್ ಮತ್ತು ಇ-ಪ್ರಿಸನ್ಸ್ ತಂಡವು ಸಿದ್ಧಪಡಿಸಿದ್ದು, ಹಳೆಯ ಮಾರ್ಗಸೂಚಿಗಳ ಜೊತೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದನ್ನು ಕೂಡ ಬಳಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.

Ad Widget . Ad Widget .

Leave a Comment

Your email address will not be published. Required fields are marked *