Ad Widget .

ಮಂಗಳೂರು: ಶ್ರೀನಿವಾಸ್ ಮೆಡಿಕಲ್ ಕಾಲೇಜು, ರೋಟರಿ ಕ್ಲಬ್ ಡೌನ್ ಟೌನ್ ಮಂಗಳೂರು ಇವರ ಸಹಯೋಗದಲ್ಲಿ ಬ್ರಹತ್ ರಕ್ತದಾನ ಶಿಬಿರ

ಸಮಗ್ರ ನ್ಯೂಸ್: ಪ್ರಾಥಮಿಕ ಅರೋಗ್ಯ ಕೇಂದ್ರ ಬೋಂದೆಲ್, ಹಳೆ ವಿದ್ಯಾರ್ಥಿ ಸಂಘ ಕರಂಬಾರು, ಶ್ರೀನಿವಾಸ್ ಮೆಡಿಕಲ್ ಕಾಲೇಜು, ರೋಟರಿ ಕ್ಲಬ್ ಡೌನ್ ಟೌನ್ ಮಂಗಳೂರು ಇವರ ಸಹಯೋಗದೊಂದಿಗೆ ಬ್ರಹತ್ ರಕ್ತದಾನ ಶಿಬಿರವು ಆ.31 ರಂದು ಕರಂಬಾರು ಸರಕಾರಿ ಶಾಲಾ ಸಭಾಂಗಣದಲ್ಲಿ ನಡೆಯಿತು.

Ad Widget . Ad Widget .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ ವಹಿಸಿದ್ದರು. ಕಾರ್ಯಕ್ರಮವನ್ನು ರೋಟರಿ ಕ್ಲಬ್ ಡೌನ್ ಟೌನ್ ಮಂಗಳೂರು ಅಧ್ಯಕ್ಷ ಗಣೇಶ್ ಪ್ರಭು ಉದ್ಘಾಟಿಸಿದರು. ಪ್ರಾಥಮಿಕ ಅರೋಗ್ಯ ಕೇಂದ್ರ ಬೋಂದೆಲ್ ನ ಆರೋಗ್ಯಧಿಕಾರಿ ಡಾI ಸವಿತಾ ಎಸ್. ಜಿ ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿ, ರಕ್ತದಾನ ಶ್ರೇಷ್ಠ ದಾನ, ಎಲ್ಲರೂ ರಕ್ತದಾನ ಮಾಡಿ ಜೀವ ದಾನ ಮಾಡಿ. ರಕ್ತದಾನ ಮಾಡುದರಿಂದ ಅರೋಗ್ಯಕ್ಕೆ ಒಳ್ಳೆಯದು. ಕರಂಬಾರು ಶಾಲಾಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಪಾತ್ರ ಮಹತ್ತರವಾದದ್ದು ಎಂದು ಹೇಳಿದರು.

Ad Widget . Ad Widget .

ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಡೌನ್ ಟೌನ್ ಮಂಗಳೂರು ಇದರ ಕಾರ್ಯದರ್ಶಿ ಉಮೇಶ್ ಗಟ್ಟಿ, ಶ್ರೀನಿವಾಸ್ ಮೆಡಿಕಲ್ ಕಾಲೇಜ್ ನ ಮೈಕ್ರೋ ಬಯಲಾಜಿ ಯ ಮುಖ್ಯಸ್ಥ ಡಾI ಪವನ್ ಚಂದ್, ಶ್ರೀನಿವಾಸ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನ ಮೆಡಿಕಲ್ ಆಫೀಸರ್ ಡಾI ಮಧುಕರ್, ಕರಂಬಾರು ಶಾಲಾ ಮುಖ್ಯ ಶಿಕ್ಷಕಿ ಉಷಾಕಿರಣ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕರಂಬಾರು ಇದರ ಅಧ್ಯಕ್ಷ ಲಕ್ಷ್ಮಣ್ ಬಂಗೇರ, ಶ್ರೀ ದೇವಿ ಭಜನಾ ಮಂದಿರ ಕೆಂಜಾರು ಕರಂಬಾರು ಇದರ ಅಧ್ಯಕ್ಷ ಶೇಖರ್ ಪೂಜಾರಿ, ಯುವವಾಹಿನಿ ಕರಂಬಾರು ಕೆಂಜಾರು ಅಧ್ಯಕ್ಷ ಭರತೇಶ್ ಪೂಜಾರಿ, ನವಶಕ್ತಿ ಸೇವಾ ಸಂಘ ಮರವೂರು ಇದರ ಅಧ್ಯಕ್ಷ ಉಮೇಶ್ ಶೆಟ್ಟಿ, ತುಳುನಾಡ ತುಳುವೆರ ತುಡರ್ ಫ್ರೆಂಡ್ಸ್ ಕರಂಬಾರು ಅಧ್ಯಕ್ಷ ಸುಧೀರ್ ಪೂಜಾರಿ, ಸ್ವಸ್ತಿಕ್ ಫ್ರೆಂಡ್ಸ್ ಕೆಂಜಾರು ಅಧ್ಯಕ್ಷ ಶಿವಪ್ರಸಾದ್ ಪೂಜಾರಿ ಉಪಸ್ಥಿತರಿದ್ದರು.

ರಾಕೇಶ್ ಕುಂದರ್ ನಿರೂಪಿದರು, ನವೀನ್ ಚಂದ್ರ ಸಾಲ್ಯಾನ್ ಸ್ವಾಗತಿಸಿದರು, ಪ್ರವೀಣ್ ಆಚಾರ್ಯ ವಂದಿಸಿದರು. ಬೋಂದೆಲ್ ಅರೋಗ್ಯ ಕೇಂದ್ರದಿಂದ ಸಾಂಕ್ರಾಮಿಕವಲ್ಲದ ರೋಗ, ಅಯುಷ್ಮಾನ್ ಭಾರತ್ ವಿಷಯದ ಬಗ್ಗೆ ಕ್ಯಾಂಪ್ ನಲ್ಲಿ ತಿಳಿಸಲಾಯಿತು.

Leave a Comment

Your email address will not be published. Required fields are marked *