Ad Widget .

ಸುಬ್ರಹ್ಮಣ್ಯ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ| ಆಟೋ ಡ್ರೈವರ್ ಮೇಲೆ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ವಂಚಿಸಿದ ಆರೋಪದಲ್ಲಿ ಆಟೋ ಚಾಲಕನ ವಿರುದ್ಧ ಕಡಬ ತಾಲೂಕಿನ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

ಸುಳ್ಯ ತಾಲೂಕಿನ ಬೆಳ್ಳಾರೆಯ ಆಟೋ ಚಾಲಕ ಮಹೇಶ್ ಎಂಬಾತ ಪಂಜದ ಪಿಯುಸಿ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಲಾಡ್ಜ್ ನಲ್ಲಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬುದು ವಿದ್ಯಾರ್ಥಿನಿಯ ಪೋಷಕರ ಆರೋಪ.

Ad Widget . Ad Widget .

ಪ್ರೀತಿಸುವ ನಾಟಕವಾಡಿ ಲೈಂಗಿಕವಾಗಿ ಬಳಸಿಕೊಂಡ ಆಟೋ ಚಾಲಕ ಬಳಿಕ ವಂಚನೆ ನಡೆಸಿದ್ದಾಗಿ ದೂರಲಾಗಿದೆ. ಆತ ನಿರಾಕರಿಸುವ ಕಾರಣಕ್ಕಾಗಿ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದೂ ಹೇಳಲಾಗಿದ್ದು, ಸಂತ್ರಸ್ತೆ ಅಪ್ರಾಪ್ತಳಾದ ಕಾರಣ ಫೋಕ್ಸೋ ಕಾಯ್ದೆಯಡಿ ಸುಬ್ರಹ್ಮಣ್ಯ ಠಾಣಾ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *