October 2023

ಹುಲಿ ಉಗುರು ಲಾಕೆಟ್ ಪ್ರಕರಣ| ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಜಾಮೀನು

ಸಮಗ್ರ ನ್ಯೂಸ್: ಹುಲಿ ಉಗುರು ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ಬೆಂಗಳೂರಿನ 2 ನೇ ಎಸಿಜೆಎಂ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, 4 ಸಾವಿರ ಭದ್ರತಾ ನಗದು ಅಥವಾ ಒಬ್ಬರ ಶ್ಯೂರಿಟಿ ನೀಡುವಂತೆ ಸೂಚಿಸಿ ಜಾಮೀನು ನೀಡಿದೆ. ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಜಾಮೀನು ಅರ್ಜಿ ವಿಚಾರಣೆ ನಿನ್ನೆಗೆ […]

ಹುಲಿ ಉಗುರು ಲಾಕೆಟ್ ಪ್ರಕರಣ| ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಜಾಮೀನು Read More »

ದಂಡ ಸಂಹಿತೆ ಬದಲಾವಣೆ/ ಶೀಘ್ರವೇ ಸಂಸತ್ತಿನಲ್ಲಿ ಅಂಗೀಕಾರ

ಸಮಗ್ರ ನ್ಯೂಸ್: ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳಿಗೆ ಬದಲಾಗಿ ಭಾರತೀಯ ನ್ಯಾಯ ಸಂಹಿತೆ ಮಸೂದೆ -2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆ – 2023 ಮತ್ತು ಭಾರತೀಯ ಸಾಕ್ಷ್ಯ ಮಸೂದೆ-2023 ಗಳಿಗೆ ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಶೀಘ್ರದಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಬ್ರಿಟಿಷರ ಕಾಲದಲ್ಲಿ ಜಾರಿಗೆ ತಂದಿದ್ದ ಕಾನೂನು ವ್ಯವಸ್ಥೆಯನ್ನು ಭಾರತ ತ್ಯಜಿಸುತ್ತಿದೆ. ಹೊಸ ಮಸೂದೆಗಳು ಜನರ ಹಕ್ಕುಗಳನ್ನು ರಕ್ಷಿಸುವ

ದಂಡ ಸಂಹಿತೆ ಬದಲಾವಣೆ/ ಶೀಘ್ರವೇ ಸಂಸತ್ತಿನಲ್ಲಿ ಅಂಗೀಕಾರ Read More »

ಉತ್ತರಕನ್ನಡ: ಇನ್ಸ್ಟಾಗ್ರಾಮ್ ಸ್ನೇಹಿತನ ಕಿರುಕುಳ| ಯುವತಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಇನ್‌ಸ್ಟಾಗ್ರಾಮ್ ಮೂಲಕ ಯುವಕನೊಬ್ಬನೊಂದಿಗೆ ಸ್ನೇಹ ಬೆಳೆಸಿದ ಸ್ನೇಹ ಪ್ರೀತಿಗೆ ತಿರುಗಿ, ಬಳಿಕ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಮೃತ ಯುವತಿಯನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣ ಸಮೀಪದ ಹಾಡವಳ್ಳಿ ಗ್ರಾಮದ ನೇತ್ರಾ ಗೋವಾಲಿ (24) ಎಂದು ಗುರುತಿಸಲಾಗಿದೆ. ಮೃತ ಯುವತಿಯ ತಂದೆ ಆಕೆಯ ಇನ್‌ಸ್ಟಾಗ್ರಾಮ್ ಸ್ನೇಹಿತ ಗೋವರ್ಧನ ಮೊಗೇರ ಎಂಬವರ ವಿರುದ್ಧ ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆತನ

ಉತ್ತರಕನ್ನಡ: ಇನ್ಸ್ಟಾಗ್ರಾಮ್ ಸ್ನೇಹಿತನ ಕಿರುಕುಳ| ಯುವತಿ ಆತ್ಮಹತ್ಯೆ Read More »

ಅಮೃತಾ ಪ್ರೇಮ್ ನಟಿಸಿರುವ ಟಗರು ಪಲ್ಯ ಚಿತ್ರ ರಾಜ್ಯದಾದ್ಯಂತ ರಿಲೀಸ್

ಸಮಗ್ರ ಸಮಾಚಾರ: ಅಮೃತಾ ಪ್ರೇಮ್‌ ಹಾಗೂ ನಾಗಭೂಷಣ್‌ ನಟನೆಯ ಟಗರು ಪಲ್ಯ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರವನ್ನು ನಟ ಧನಂಜಯ್‌ ನಿರ್ಮಿಸಿದ್ದು ಉಮೇಶ್‌ ಕೃಪ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಹಲವಾರು ಸಿನಿಮಾ ನಟ,ನಟಿಯರಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತರಕ ಕಾರ್ತಿಕ್‌ ಗೌಡ, ”45 ದಿನಗಳ ಮುನ್ನವೇ ಟಗರು ಪಲ್ಯ ಚಿತ್ರವನ್ನು ನನಗೆ ತೋರಿಸಿದ್ದರು. ಬಡವ ರಾಸ್ಕಲ್ ಕೂಡಾ ರಿಲೀಸ್‌ಗೆ‌ ಮುನ್ನ 2-3 ತಿಂಗಳ ಮೊದಲೇ ತೋರಿಸಿದ್ದರು. ಟಗರು ಪಲ್ಯ ಎಲ್ಲರೂ ಮೆಚ್ಚುವಂತ

ಅಮೃತಾ ಪ್ರೇಮ್ ನಟಿಸಿರುವ ಟಗರು ಪಲ್ಯ ಚಿತ್ರ ರಾಜ್ಯದಾದ್ಯಂತ ರಿಲೀಸ್ Read More »

ಈ ಹಣ್ಣಿನ ಜ್ಯೂಸ್ ಇಂದ ಇಷ್ಟಲ್ಲಾ ಪ್ರಯೋಜನಗಳಿದೆಯ? ವೈದ್ಯರು ಏನು ಸಲಹೆ ನೀಡುತ್ತಾರೆ?

ಕೆಂಪಗಿನ ಈ ದಾಳಿಂಬೆ ಹಣ್ಣು ರುಚಿಯಲ್ಲಿ ಬೆಸ್ಟ್‌ ಅಂತಾ ಅನಿಸಿಕೊಳ್ಳುವುದರ ಜೊತೆಗೆ ಆರೋಗ್ಯ ಪ್ರಯೋಜನಗಳಿಗೂ ಹೆಸರುವಾಸಿಯಾಗಿದೆ.ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತದೆ ಅಂತ ಈ ವಿಡಿಯೋ ದಲ್ಲಿ ನೋಡಿ. ದಾಳಿಂಬೆ ರಸವು ಉರಿಯೂತದ ಗುಣಲಕ್ಷಣಗಳನ್ನು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ, ಇದು ಕ್ಯಾನ್ಸರ್ ಸೇರಿ ಇತರ ಪರಿಸ್ಥಿತಿಗಳನ್ನು ತಡೆಯಲು ಸಹಾಯ ಮಾಡುತ್ತದೆ.ಮಿತವಾಗಿ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಹೃದ್ರೋಗವನ್ನು ದೂರವಿಡಬಹುದು ಎಂದು ತಜ್ಞರು ಹೇಳುತ್ತಾರೆ. ಇದು ಹೃದಯದ ಆರೋಗ್ಯಕ್ಕೆ ಸಹಾಯ ಮಾಡುವ ಪಾಲಿಫಿನಾಲಿಕ್ ಸಂಯುಕ್ತಗಳನ್ನು ಒಳಗೊಂಡಿದ್ದು,ಹೃದಯದ ಆರೋಗ್ಯವನ್ನು

ಈ ಹಣ್ಣಿನ ಜ್ಯೂಸ್ ಇಂದ ಇಷ್ಟಲ್ಲಾ ಪ್ರಯೋಜನಗಳಿದೆಯ? ವೈದ್ಯರು ಏನು ಸಲಹೆ ನೀಡುತ್ತಾರೆ? Read More »

ಪದವೀಧರ ಶಿಕ್ಷಕರ ನೇಮಕಾತಿ ಇಂದಿನಿಂಲೇ ಆರಂಭ! 13,500 ದೈಹಿಕ ಶಿಕ್ಷಕರ ನೇಮಕಾತಿಯು ಇದೆ

ಹೈಕೋರ್ಟ್ ಆದೇಶದಂತೆ ರಾಜ್ಯದ ಸರ್ಕಾರಿ ಶಾಲೆಗಳ 6 ರಿಂದ 8 ನೇ ತರಗತಿವರೆಗಿನ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪುನಾರಂಭಿಸಿದೆ. ಕಳೆದ ಮಾರ್ಚ್‌ನ ಪ್ರಕಟಿಸಿದ್ದ 1:1 ಅನುಪಾತದ ಮುಖ್ಯ ಆಯ್ಕೆ ಪಟ್ಟಿಯಲ್ಲಿ ಕೌನ್ಸೆಲಿಂಗ್ ಗೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ (ಅ‌.19) ಪ್ರಕಟಿಸುವುದಾಗಿ ತಿಳಿಸಿದೆ. ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ 371 ಜೆಗೆ ಸಂಬಂಧಿಸಿದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಮತ್ತು ಬಿಬಿಎಂಪಿ ವ್ಯಾಪ್ತಿಯ ಶೇ.8 ರಷ್ಟು ಹುದ್ದೆಗಳಿಗೆ ಸಂಬಂಧಿಸಿದ ಬೆಂಗಳೂರು

ಪದವೀಧರ ಶಿಕ್ಷಕರ ನೇಮಕಾತಿ ಇಂದಿನಿಂಲೇ ಆರಂಭ! 13,500 ದೈಹಿಕ ಶಿಕ್ಷಕರ ನೇಮಕಾತಿಯು ಇದೆ Read More »

ಚಿಕ್ಕಮಗಳೂರು: ಈ ಮೂರು ದಿನ ಮುಳ್ಳಯ್ಯನ ಗಿರಿ ಪ್ರವಾಸಕ್ಕೆ ಜಿಲ್ಲಾಡಳಿತ ನಿರ್ಬಂಧ

ಸಮಗ್ರ ನ್ಯೂಸ್: ಚಿಕ್ಕಮಗಳೂರಿನಲ್ಲಿರುವ ಪ್ರವಾಸಿಗರ ನೆಚ್ಚಿನ ತಾಣ ಮುಳ್ಳಯ್ಯನಗಿರಿ, ದತ್ತ ಬೆಟ್ಟಕ್ಕೆ ನವೆಂಬರ್ 4 ರಿಂದ 3 ದಿನ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ದತ್ತಮಾಲಾ ಅಭಿಯಾನ ಹಿನ್ನೆಲೆ ನವೆಂಬರ್ 4 ರಿಂದ 6 ವರೆಗೆಗೆ ದತ್ತಪೀಠ, ಮಾಣಿಕ್ಯಧಾರ, ಸೀತಾಳಯ್ಯನಗಿರಿ, ಮಾಣಿಕ್ಯಧಾರ, ಗಾಳಿಕೆರೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅ.30 ರಿಂದ ನ.5 ರವರೆಗೆ ದತ್ತಮಾಲಾ ಅಭಿಯಾನ ನಡೆಯಲಿದ್ದು, ಸಾವಿರಾರು ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಚಿಕ್ಕಮಗಳೂರು: ಈ ಮೂರು ದಿನ ಮುಳ್ಳಯ್ಯನ ಗಿರಿ ಪ್ರವಾಸಕ್ಕೆ ಜಿಲ್ಲಾಡಳಿತ ನಿರ್ಬಂಧ Read More »

ಧರ್ಮಸ್ಥಳ ದೇವಸ್ಥಾನ ನಿಯಮಗಳಡಿ ನೋಂದಣಿಯಾಗಿಲ್ಲ| ಆಡಳಿತ ಮಂಡಳಿ ವಿರುದ್ದ ಕ್ರಮಕ್ಕೆ ಒತ್ತಾಯ

ಸಮಗ್ರ ನ್ಯೂಸ್: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ನೋಂದಣಿಯೇ ಆಗಿಲ್ಲ ಎಂಬುದು ಆರ್‌ ಟಿಐನಡಿ ಬಹಿರಂಗಗೊಂಡಿದ್ದು, ಹೀಗಾಗಿ ಧರ್ಮಸ್ಥಳ ಮಂಜುನಾಥೇಶ್ವರ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ʼನೈಜ ಹೋರಾಟಗಾರರ ವೇದಿಕೆʼ ಒತ್ತಾಯಿಸಿದೆ. ಈ ಸಂಬಂಧ ದಕ್ಷಿಣ‌ ಕನ್ನಡ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿರುವ ʼನೈಜ ಹೋರಾಟಗಾರರ ವೇದಿಕೆʼಯ ಹೆಚ್ ಎಂ ವೆಂಕಟೇಶ್ , ಲೋಕೇಶ್ ಬಿಎಸ್, ಹಂದ್ರಾಳ್

ಧರ್ಮಸ್ಥಳ ದೇವಸ್ಥಾನ ನಿಯಮಗಳಡಿ ನೋಂದಣಿಯಾಗಿಲ್ಲ| ಆಡಳಿತ ಮಂಡಳಿ ವಿರುದ್ದ ಕ್ರಮಕ್ಕೆ ಒತ್ತಾಯ Read More »

ಸುಳ್ಯ ಮೂಲದ ಉದ್ಯಮಿಯ ಪತ್ನಿ ಬೆಂಗಳೂರಿನಲ್ಲಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಸುಳ್ಯ ಮೂಲದ ಉದ್ಯಮಿಯೋರ್ವರ ಪತ್ನಿ ಬೆಂಗಳೂರಿನಲ್ಲಿ ಆತ್ಮಹತ್ಯೆ ಗೆ ಶರಣಾದ ಘಟನೆ ಅ.26 ರಂದು ಬೆಂಗಳೂರಿನಲ್ಲಿ ನಡೆದಿದೆ. ಕನಕಮಜಲು ಗ್ರಾಮದ , ಪ್ರಸ್ತುತ ಬೆಂಗಳೂರಿನಲ್ಲಿ ಡೈರಿ ರೀಚ್ ಐಸ್ ಕ್ರೀಂನ ಉದ್ಯಮಿಯಾಗಿರುವ ಗಿರಿಯಪ್ಪ ಗೌಡ ಅವರ ಪುತ್ರ ರಾಜೇಶ್ ಇವರ ಪತ್ನಿ ಐಶ್ವರ್ಯ(26) ಆತ್ಮಹತ್ಯೆಗೆ ಶರಣಾದವರು. ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಸುಬ್ರಹ್ಮಣ್ಯ ಗೌಡ ಹಾಗೂ ಉಷಾ ದಂಪತಿಯ ಪುತ್ರಿಯಾದ ಐಶ್ವರ್ಯ ಅವರನ್ನು ರಾಜೇಶ್ ಅವರಿಗೆ ಸುಮಾರು 4 ವರ್ಷದ ಹಿಂದೆ ಮದುವೆ ಮಾಡಿ

ಸುಳ್ಯ ಮೂಲದ ಉದ್ಯಮಿಯ ಪತ್ನಿ ಬೆಂಗಳೂರಿನಲ್ಲಿ ಆತ್ಮಹತ್ಯೆ Read More »

ಮಂಗಳೂರು: ಹಳಿಯಲ್ಲಿ ಮೃತದೇಹ ಮಹಜರು ವೇಳೆ ಧಾವಿಸಿ ಬಂದ‌ ರೈಲು| ಪೊಲೀಸರು ಪ್ರಾಣಾಪಾಯದಿಂದ ಜಸ್ಟ್ ಮಿಸ್!!

ಸಮಗ್ರ ನ್ಯೂಸ್: ಮಂಗಳೂರು ಹೊರವಲಯದ‌ ಮುಲ್ಕಿ ಕುಬೆವೂರು ರೈಲು ಸೇತುವೆ ಬಳಿ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಮೃತದೇಹ ಪತ್ತೆಯಾದ ಬಗ್ಗೆ ಮೂಲ್ಕಿ ಠಾಣೆಯ ಪೊಲೀಸ್‌ ಸಿಬ್ಬಂದಿ ಮಹಜರು ನಡೆಸುವಾಗ ರೈಲೊಂದು ಧಾವಿಸಿ ಬಂದಿದ್ದು, ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಮೂಲ್ಕಿ ರೈಲು ನಿಲ್ದಾಣದ ಸಿಬ್ಬಂದಿ ಕುಮಾರ್ ಅವರ ಪುತ್ರ ವಿಶ್ಲೇಷ್ (26) ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಮಾಹಿತಿ ಪಡೆದ ಮೂಲ್ಕಿ ಠಾಣೆಯ ಎಎಸ್‌ಐ ಸಂಜೀವ, ಚಂದ್ರಶೇಖರ, ಶಂಕರ, ಬಸವರಾಜ್

ಮಂಗಳೂರು: ಹಳಿಯಲ್ಲಿ ಮೃತದೇಹ ಮಹಜರು ವೇಳೆ ಧಾವಿಸಿ ಬಂದ‌ ರೈಲು| ಪೊಲೀಸರು ಪ್ರಾಣಾಪಾಯದಿಂದ ಜಸ್ಟ್ ಮಿಸ್!! Read More »