54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ/ ಪ್ರದರ್ಶನ ಕಾಣಲಿರುವ ಕನ್ನಡದ ಕಾಂತಾರ
ಸಮಗ್ರ ನ್ಯೂಸ್: ಕರಾವಳಿಯ ದೈವಾರಾಧನೆಯನ್ನು ಆಧಾರವಾಗಿಟ್ಟುಕೊಂಡು ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾ ವಿಶ್ವಾದ್ಯಾಂತ ಜನಮನ್ನಣೆ ಗಳಿಸಿ. ಇದೀಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಗೋವಾದಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರ ಪ್ರದರ್ಶನ ಕಾಣಲಿದೆ. ವಿಭಿನ್ನ ಕಥಾಹಂದರವನ್ನು ಇಟ್ಟುಕೊಂಡು ತಯಾರಾಗಿದ್ದ ಕಾಂತಾರ, ರಿಷಭ್ ಶೆಟ್ಟಿಯ ಅದ್ಭುತ ನಟನೆಯ ಮೂಲಕ ಜನರ ಮನಗೆದ್ದಿತು. ಇದೀಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ
54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ/ ಪ್ರದರ್ಶನ ಕಾಣಲಿರುವ ಕನ್ನಡದ ಕಾಂತಾರ Read More »