October 2023

ತಮಿಳುನಾಡು: ಕಂದಕಕ್ಕೆ ಉರುಳಿದ ಬಸ್| 8 ಮಂದಿ ಸಾವು| ಹಲವರು ಗಂಭೀರ

ಸಮಗ್ರ ನ್ಯೂಸ್: ತಮಿಳುನಾಡಿನ ಕೂನೂರು ಬಳಿಯ ಮರಪಾಲಂ ಬಳಿ ಬಸ್ ಕಮರಿಗೆ ಬಿದ್ದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡ ಆಘಾತಕಾರಿ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ 55 ಜನರು ಪ್ರಯಾಣಿಸುತ್ತಿದ್ದ ಬಸ್ಸು 100 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಈ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಕೊಯಮತ್ತೂರು ವಲಯದ ಪೊಲೀಸ್ […]

ತಮಿಳುನಾಡು: ಕಂದಕಕ್ಕೆ ಉರುಳಿದ ಬಸ್| 8 ಮಂದಿ ಸಾವು| ಹಲವರು ಗಂಭೀರ Read More »

ಮೈಸೂರು: ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲು

ಸಮಗ್ರ ನ್ಯೂಸ್: ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲಾದ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ನಡದಿದೆ. ಘಟನೆಯಲ್ಲಿ ಮಹಮ್ಮದ್ ಕಪೀಲ್ (42), ಶಾವರ ಭಾನು (35), ಶಾಹೀರಾ ಭಾನು (20)ಮೃತಪಟ್ಟಿದ್ದಾರೆ. ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಮಗಳನ್ನು ಕಾಪಾಡಲು ಹೋಗಿ ಅಪ್ಪ, ಅಮ್ಮ ಹಾಗೂ ಪುತ್ರಿ ಮೂವರೂ ಸಾವನ್ನಪ್ಪಿದ್ದಾರೆ. ನುಗು ಜಲಾಶಯದ (Nugu Reservoir) ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ಘಟನೆ ನಡೆದಿದೆ. ಶಾಹೀರಾ

ಮೈಸೂರು: ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲು Read More »

ಪೋಲೀಸ್ ಕಾರಿನ ಮೇಲೆ ಏರಿ ಮಹಿಳೆಯ ಡ್ಯಾನ್ಸ್| ರೀಲ್ಸ್ ಗಾಗಿ ಅನುಮತಿ ಕೊಟ್ಟ ಅಧಿಕಾರಿ ಅಮಾನತು

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣದಲ್ಲಿ (Social Media) ರೀಲ್ಸ್‌ ಹವಾ ಜಾಸ್ತಿಯಾಗಿದ್ದು, ಹೆಚ್ಚಿನ ವೀವ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡಲು ಶುರು ಮಾಡಿದ್ದಾರೆ. ಪಂಜಾಬ್‌ನಲ್ಲಿ ಮಹಿಳೆಯೊಬ್ಬಳು ರೀಲ್ಸ್‌ಗಾಗಿ ಪೊಲೀಸ್‌ (Punjab Police) ವಾಹನ ಬಳಸಿಕೊಂಡಿದ್ದಾಳೆ. ಪಾಯಲ್‌ ಪರಮ್‌ ಎಂಬ ಮಹಿಳೆ ತನ್ನ ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಾಗಿ ಪೊಲೀಸ್‌ ವಾಹನವನ್ನು ಬಳಸಿಕೊಂಡಿದ್ದಾಳೆ. ಈ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಪೊಲೀಸ್‌ ವಾಹವನ್ನು ರೀಲ್ಸ್‌ ಮಾಡಲು ಅನುಮತಿ ನೀಡಿದ್ದ ಜಲಂಧರ್‌ ಪೊಲೀಸ್‌ ಠಾಣೆಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೋಲೀಸ್ ಕಾರಿನ ಮೇಲೆ ಏರಿ ಮಹಿಳೆಯ ಡ್ಯಾನ್ಸ್| ರೀಲ್ಸ್ ಗಾಗಿ ಅನುಮತಿ ಕೊಟ್ಟ ಅಧಿಕಾರಿ ಅಮಾನತು Read More »

ಮಡಿಕೇರಿ: ಆಹಾರ ಪದಾರ್ಥ ವ್ಯರ್ಥ ಮಾಡಬೇಡಿ ಶಾಸಕ ಡಾ.ಮಂತರ್ ಗೌಡ

ಸಮಗ್ರ ನ್ಯೂಸ್: ಆಹಾರ ಪದಾರ್ಥಗಳನ್ನು ಎಂದಿಗೂ ವ್ಯರ್ಥ ಮಾಡದೇ ಅಗತ್ಯಕ್ಕೆ ತಕ್ಕಷ್ಟು ಸೇವಿಸಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಸೆ.30 ರಂದು ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಆಹಾರ ನಷ್ಟ ಮತ್ತು ತ್ಯಾಜ್ಯ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಕಿವಿಮಾತು ಹೇಳಿದರು. ಕೊಡಗು ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ (ಗ್ರಾ.)ವತಿಯಿಂದ ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಆಹಾರ ನಷ್ಟ ಮತ್ತು ತ್ಯಾಜ್ಯ ಜಾಗೃತಿ ದಿನಾಚರಣೆ ಕಾರ್ಯಕ್ರಮದ ಸಿಗ್ನೇಚರ್ ಕ್ಯಾಂಪೇನ್‍ನಲ್ಲಿ ಸಹಿ ಮಾಡಿ,

ಮಡಿಕೇರಿ: ಆಹಾರ ಪದಾರ್ಥ ವ್ಯರ್ಥ ಮಾಡಬೇಡಿ ಶಾಸಕ ಡಾ.ಮಂತರ್ ಗೌಡ Read More »

ಮನೆಕಟ್ಟುವವರಿಗೆ ಶಾಕ್| ಸಿಮೆಂಟ್ ದರದಲ್ಲಿ ಭಾರೀ ಹೆಚ್ಚಳ ಸಾಧ್ಯತೆ

ಸಮಗ್ರ ನ್ಯೂಸ್: ಸಿಮೆಂಟ್‌ ದರವು ಅಕ್ಟೋಬರ್‌ 1ರಿಂದ ಮತ್ತೆ ಏರಿಕೆಯಾಗಲಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ದಕ್ಷಿಣ ವಲಯದಲ್ಲಿ ಚೀಲವೊಂದಕ್ಕೆ 30ರಿಂದ 40 ರೂ. ಏರಿಕೆಯಾಗಲಿದ್ದರೆ, ಉತ್ತರ ವಲಯದಲ್ಲಿ 10 ರಿಂದ 20 ರೂ. ಏರಿಕೆಯಾಗುವ ಸಂಭವವಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಕಳೆದ ಒಂದು ತಿಂಗಳಲ್ಲಿ ಸಿಮೆಂಟ್‌ ದರ ಶೇ. 12ರಿಂದ 13ರಷ್ಟು ಹೆಚ್ಚಾಗಿದೆ. ಭಾರತದಾದ್ಯಂತ ಸಿಮೆಂಟ್‌ನ ಸರಾಸರಿ ಬೆಲೆ ಪ್ರಸ್ತುತ ಪ್ರತಿ 50 ಕೆಜಿ ಚೀಲಕ್ಕೆ 382 ರೂ.ಗೆ ತಲುಪಿದೆ. ಈಶಾನ್ಯ ಭಾಗಗಳಲ್ಲಿ ಸಿಮೆಂಟ್‌

ಮನೆಕಟ್ಟುವವರಿಗೆ ಶಾಕ್| ಸಿಮೆಂಟ್ ದರದಲ್ಲಿ ಭಾರೀ ಹೆಚ್ಚಳ ಸಾಧ್ಯತೆ Read More »

ಕೊಟ್ಟಿಗೆಹಾರ: ಹಿಟ್ ಆ್ಯಂಡ್ ರನ್| ವ್ಯಕ್ತಿ ಗಂಭೀರ ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಸಮೀಪದ ಬಣಕಲ್ ಪೇಟೆಯಲ್ಲಿ ಮೂಡಿಗೆರೆಯಿಂದ ಕೊಟ್ಟಿಗೆಹಾರ ಕಡೆಗೆ ಸಾಗುತ್ತಿದ್ದ ಅಪರಿಚಿತ ಜಿಪ್ಸಿ ವಾಹನ ವ್ಯಕ್ತಿಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಹೋಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.ವಿನಯ್ ಎಂಬ ಯುವಕ ಗಾಯಾಳಾದ ವ್ಯಕ್ತಿ. ಘಟನೆಯ ಹಿನ್ನಲೆ: ಬಣಕಲ್ ಸಮೀಪದ ಮತ್ತಿಕಟ್ಟೆಯಿಂದ ಬಿ.ಎಸ್ ರಕ್ಷಿತ್ ಅವರ ಬೈಕ್ನಲ್ಲಿ ವಿನಯ್ ಸೇರಿ ಅಂಗಡಿ ದಿನಸಿ ತರಲು ಬಣಕಲ್ ಗೆ ಬಂದಿದ್ದರು. ಬೈಕನ್ನು ಆಲಂ ಸೂಪರ್ ಮಾರ್ಕೆಟ್ ಬಳಿ ನಿಲ್ಲಿಸಿ ಇತರ ವಸ್ತುಗಳನ್ನು ಖರೀದಿಸಲು ರಾತ್ರಿ 8ಗಂಟೆ

ಕೊಟ್ಟಿಗೆಹಾರ: ಹಿಟ್ ಆ್ಯಂಡ್ ರನ್| ವ್ಯಕ್ತಿ ಗಂಭೀರ ಆಸ್ಪತ್ರೆಗೆ ದಾಖಲು Read More »

ದ್ವಾದಶ ರಾಶಿಗಳ ವಾರಭವಿಷ್ಯ (ಅ.01 ರಿಂದ 07ರವರೆಗೆ)

ಸಮಗ್ರ ನ್ಯೂಸ್: ಅಕ್ಟೋಬರ್ ತಿಂಗಳ ಮೊದಲ ವಾರ ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ: ಮೇಷ ರಾಶಿ:ಈ ವಾರ ಒಂದಿಷ್ಟು ಶುಭಫಲಗಳು ನಿಮಗೆ ಇರಲಿವೆ. ವಾರದ ಮಧ್ಯದಲ್ಲಿ ಕುಜನು ಮಿತ್ರಕ್ಷೇತ್ರಕ್ಕೆ ಬರಲಿದ್ದು ಸಪ್ತಮಕ್ಕೆ ಬರಲಿದ್ದಾನೆ. ಪ್ರೇಮಿಗಳಿಗೆ ಇದು ಸಕಾಲವಾಗಿದ್ದು. ಪ್ರೀತಿಯನ್ನು ಹೇಳಿಕೊಳ್ಳಭುದಾಗಿದೆ. ಈ ವಾರ ಏಕಾದಶದ ಶನಿಯಿಂದ ಶುಭವಾರ್ತೆಯನ್ನು ಪಡೆಯುವಿರಿ. ಈ ಸಮಯದಲ್ಲಿ ನೀವು ಸೂಕ್ತ ನಿರ್ಧಾರವನ್ನು ಪಡೆದು ಉತ್ತಮ ಗುರಿ ತಲುಪಬಹುದು. ಕೀರ್ತಿಯೂ ನಿಮ್ಮದಾಗಲಿದೆ. ಹಿತ ಶತ್ರುಗಳ ಮಾತಿಗೆ ಮರುಳಾಗಬಹುದು, ಸ್ವಲ್ಪ ಜಾಗರೂಕರಾಗಿರಿ. ಸುಬ್ರಹ್ಮಣ್ಯನ

ದ್ವಾದಶ ರಾಶಿಗಳ ವಾರಭವಿಷ್ಯ (ಅ.01 ರಿಂದ 07ರವರೆಗೆ) Read More »

ಕೆಎಸ್ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ

ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯು ಸೆ. 13ರಂದು ನಡೆಯಿತು. ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸುಹಾಸ್ ಎಂ.ಜಿ. (ತೃತೀಯ ಬಿ ಕಾಂ) ಉಪಾಧ್ಯಕ್ಷರಾಗಿ ಪೂಜಾ ಎಂ.(ತೃತೀಯ ಬಿ ಕಾಂ) ಕಾರ್ಯದರ್ಶಿಯಾಗಿ ಕೌಶಿಕ್ ಕೆ.ವಿ. (ದ್ವಿತೀಯ ಬಿ ಕಾಂ) ಇವರು ಆಯ್ಕೆಯಾದರು. ವಿದ್ಯಾರ್ಥಿ ಸಂಘದ ಅಧಿಕಾರಿ ಪ್ರಸಾದ್ ಎನ್. ಸಹಾಯಕ ಅಧಿಕಾರಿ ರಾಮ್ ಪ್ರಸಾದ್ ಮತ್ತು ಪ್ರಮೀಳಾ ಅವರು ಚುನಾವಣೆಯನ್ನು ನಡೆಸಿದರು. ಆಯ್ಕೆಯಾದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಅಭಿನಂದಿಸಿದರು.

ಕೆಎಸ್ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ Read More »

ಕೊಟ್ಟಿಗೆಹಾರ: ಉತ್ತಮ ಸಾರ್ವಜನಿಕ ಸೇವೆ, ಜನಸ್ನೇಹಿ ಆಡಳಿತ| ಜಾವಳಿ ಗ್ರಾ.ಪಂ.ಗೆ ಪ್ರಥಮ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರದ ಗರಿ

ಸಮಗ್ರ ನ್ಯೂಸ್: ಬಾಳೂರು ಹೋಬಳಿಯ ಜಾವಳಿ ಗ್ರಾ.ಪಂ.ಗೆ ಜನಸ್ನೇಹಿ ಆಡಳಿತ, ಸಮಗ್ರ ಗ್ರಾಮಾಭಿವೃದ್ದಿ, ನರೇಗಾ ಸಮರ್ಪಕ ಬಳಕೆಯಿಂದ ಜಾವಳಿ ಗ್ರಾ.ಪಂ.ಗೆ ಗಾಂಧಿ ಗ್ರಾಮದ ಪುರಸ್ಕಾರದ ಗರಿ ಲಭಿಸಿದೆ. ಜಾವಳಿ ಹೇಮಾವತಿ ನದಿಯ ಉಗಮಸ್ಥಾನ. ಹೇಮೆಯ ಮಡಿಲಲ್ಲಿ ಈ ಗ್ರಾಮ ಶೋಭಿಸುತ್ತಿದೆ. ಸರ್ಕಾರದ ಅನುದಾನಗಳನ್ನು ಹಸಿರು ತಾಣದಲ್ಲಿ ಸಮರ್ಪಕವಾಗಿ ಬಳಸಿ ಸೌಲಭ್ಯದಿಂದ ಜನ ವಂಚಿತರಾಗಬಾರದೆಂಬ ಉತ್ತಮ ಉದ್ದೇಶದಿಂದ ಜಾವಳಿ ಗ್ರಾಮ ಸಂಪತ್ಬರಿತವಾಗಿ ಬೆಳೆಯಲು ಸಹಕಾರಿಯಾಗಿದೆ. ಕಳೆದ ವರ್ಷ ನೆರೆಯ ಗ್ರಾಮ ಸುಂಕಸಾಲೆ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರ

ಕೊಟ್ಟಿಗೆಹಾರ: ಉತ್ತಮ ಸಾರ್ವಜನಿಕ ಸೇವೆ, ಜನಸ್ನೇಹಿ ಆಡಳಿತ| ಜಾವಳಿ ಗ್ರಾ.ಪಂ.ಗೆ ಪ್ರಥಮ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರದ ಗರಿ Read More »

HEALTH TIPS| ಬೆಳಗ್ಗೆ ಖಾಲಿ ಹೊಟ್ಟೆಗೆ ನಿಂಬೆ ರಸ ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಎಂದಾದರು ಯೋಚಿಸಿದ್ದೀರಾ? ಹಾಗಿದ್ರೆ ಇದನ್ನು ಪೂರ್ತಿ ಓದಿ..!

ಸಮಗ್ರ ನ್ಯೂಸ್:ಸಾಮಾನ್ಯವಾಗಿ ಹಿಂದಿನ ಕಾಲದಿಂದಲೂ ತಟ್ಟೆಯಲ್ಲಿ ಊಟದೊಂದಿಗೆ ನಿಂಬೆ ಹಣ್ಣಿನ ತುಂಡುಗಳನ್ನು ಇಡುವುದು ರೂಢಿ. ಹೆಚ್ಚಾಗಿ ಮಾಂಸಾಹಾರ ಖಾದ್ಯಗಳಲ್ಲಿ ನಿಂಬೆ ಹಣ್ಣು ಇಲ್ಲದೆ ಊಟ ಮಾಡುವುದು ತುಂಬಾ ವಿರಳ. ನಿಂಬೆ ರಸವನ್ನು ಬೆಳಗ್ಗೆ ನೀರಿನೊಂದಿಗೆ ಬೆರಸಿ ಕುಡಿಯಲಾಗುತ್ತದೆ. ಯಾಕಿರಬಹುದು ಎಂದು ಎಂದಾದರು ಯೋಚಿಸಿದ್ದೀರಾ? ಹಾಗೊಂದು ವೇಳೆ ಯೋಚನೆ ಮಾಡಿದರೆ ನಿಂಬೆ ಹಣ್ಣಿನಲ್ಲಿ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಇವೆಯೇ ಎಂದು ನಿಮಗೆ ಆಶ್ವರ್ಯವಾಗುವುದರಲ್ಲಿ ಅನುಮಾನವಿಲ್ಲ. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಅನ್ನೋ ರೀತಿ ನಿಂಬೆ ಹಣ್ಣಿನ ಗಾತ್ರ ಚಿಕ್ಕದಾದರೂ

HEALTH TIPS| ಬೆಳಗ್ಗೆ ಖಾಲಿ ಹೊಟ್ಟೆಗೆ ನಿಂಬೆ ರಸ ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಎಂದಾದರು ಯೋಚಿಸಿದ್ದೀರಾ? ಹಾಗಿದ್ರೆ ಇದನ್ನು ಪೂರ್ತಿ ಓದಿ..! Read More »