October 2023

ಶಿವಮೊಗ್ಗದಲ್ಲಿ ಕಲ್ಲುತೂರಾಟ; ಸೆಕ್ಷನ್ ಜಾರಿ| ತಿಳಿಯಾದ ಪರಿಸ್ಥಿತಿ

ಸಮಗ್ರ ನ್ಯೂಸ್: ಶಿವಮೊಗ್ಗದಲ್ಲಿ ಈದ್​ ಮಿಲಾದ್ ಪ್ರಯುಕ್ತ ನಡೆದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಗಿಗುಡ್ಡ ಪ್ರದೇಶದಲ್ಲಿ 144 ಸೆಕ್ಷನ್‌ ಜಾರಿ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಇಲ್ಲಿನ ರಾಗಿಗುಡ್ಡ-ಶಾಂತಿನಗರ ಪ್ರದೇಶದಲ್ಲಿ ಭಾನುವಾರ ಕಟೌಟ್ ವಿಚಾರದಲ್ಲಿ ಉಂಟಾದ ವಾಗ್ವಾದ ಹಿಂಸೆಗೆ ತಿರುಗಿದೆ. ಈ ವೇಳೆ ಹಿಂದೂ ಸಮುದಾಯದ 6ಕ್ಕೂ ಹೆಚ್ಚು ಮನೆಗಳು ಹಾಗೂ ವಾಹನಗಳ ಮೇಲೆ ಗುಂಪೊಂದು ಕಲ್ಲು ತೂರಾಟ […]

ಶಿವಮೊಗ್ಗದಲ್ಲಿ ಕಲ್ಲುತೂರಾಟ; ಸೆಕ್ಷನ್ ಜಾರಿ| ತಿಳಿಯಾದ ಪರಿಸ್ಥಿತಿ Read More »

ಅರಣ್ಯ ಇಲಾಖೆ ವತಿಯಿಂದ ಚಾರ್ಮಾಡಿ ಘಾಟ್ ನಲ್ಲಿ ಸ್ವಚ್ಚತಾ ಕಾರ್ಯ

ಸಮಗ್ರ ನ್ಯೂಸ್: ಮೂಡಿಗೆರೆ ಅರಣ್ಯ ಇಲಾಖೆಯ ವತಿಯಿಂದ ಚಾರ್ಮಾಡಿ ಘಾಟ್ ವಲಯದ ಮಲಯ ಮಾರುತ ಗಡಿ ಭಾಗದವರೆಗೆ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು. ಮೂಡಿಗೆರೆ ವಲಯ ಅರಣ್ಯ ಅಧಿಕಾರಿ ಚರಣ್ ಕುಮಾರ್ ಮಾತನಾಡಿ ‘ಪ್ರತಿ ವರ್ಷ ಅಕ್ಟೋಬರ್ 1 ರಿಂದ 7ರವರೆಗೆ ವನ್ಯ ಜೀವಿ ಸಪ್ತಾಹವನ್ನು ಇಲಾಖೆ ವತಿಯಿಂದ ಆಚರಿಸುತ್ತೇವೆ. ಈ ವರ್ಷವೂ ನಮ್ಮ ಎಲ್ಲಾ ಸಿಬ್ಬಂದಿಗಳ ಜೊತೆಗೆ ಚಾರ್ಮಾಡಿ ರಸ್ತೆ ಭಾಗದಲ್ಲಿ ಬಿದ್ದ ಪ್ಲಾಸ್ಟಿಕ್ ಮತ್ತಿತರ ಕಸಗಳನ್ನು ಹೆಕ್ಕಿ ಸ್ವಚ್ಚತಾ ಆಂದೋಲನ ಮಾಡುತ್ತಿದ್ದೇವೆ.

ಅರಣ್ಯ ಇಲಾಖೆ ವತಿಯಿಂದ ಚಾರ್ಮಾಡಿ ಘಾಟ್ ನಲ್ಲಿ ಸ್ವಚ್ಚತಾ ಕಾರ್ಯ Read More »

ಇಂದು ಗಾಂಧಿ ಜಯಂತಿ ಆಚರಣೆ/ ಸ್ವರಾಜ್ಯದ ಎಪ್ಪತ್ತೈದರ ಹೊತ್ತಿನಲ್ಲಿ ಗಾಂಧಿಯ ಹಿಂದ್ ಸ್ವರಾಜ್‍ನ ನೆನಪು

ಸಮಗ್ರ ನ್ಯೂಸ್: ಭಾರತದ ಸ್ವರಾಜ್ಯದ ಕನಸು ನನಸಾಗಿ ಎಪ್ಪತ್ತೈದು ವರ್ಷಗಳು ಕಳೆದಿವೆ. ಬ್ರಿಟಿಷ್ ವಸಾಹತುಶಾಹಿ ಆಡಳಿತ ವ್ಯವಸ್ಥೆ ಮರೆಯಾಗಿ ಏಳು ದಶಕಗಳು ಕಳೆದುಹೋಗಿವೆ. ಭಾರತೀಯರ ಸ್ವರಾಜ್ಯದ ಪರಿಕಲ್ಪನೆ ತನ್ನದೇ ಹಾದಿಯಲ್ಲಿ ಸಾಗಿಬಂದರೂ, ಅದರಲ್ಲಿ ಬ್ರಿಟಿಷರು ತಮ್ಮ ಛಾಯೆಯನ್ನು ಒಂದಿಷ್ಟು ಉಳಿಸಿಕೊಳ್ಳುವಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ. ಆಡಳಿತದಲ್ಲಿ ಭಾರತೀಯರು ಪಾಲ್ಗೊಂಡರು ಕೂಡ, ಸಂಪೂರ್ಣ ಭಾರತೀಯತೆ ಕಾಣಸಿಗಲಿಲ್ಲ ಎಂಬುದಂತೂ ಸತ್ಯ. ಗಾಂಧೀಜಿಯ ಕನಸಿನ ಸ್ವರಾಜ್ಯ ಸ್ವತಂತ್ರ ಭಾರತದಲ್ಲಿ ಮರೆಯಾಯಿತು. ಗಾಂಧಿಯವರ ಹಿಂದ್ ಸ್ವರಾಜ್‍ನ ಪರಿಕಲ್ಪನೆಗಳು ಭಾರತ ಸ್ವರಾಜ್ಯವಾದಾಗ ಕಳೆದುಹೋಯಿತು. ಈ ಎಪ್ಪತ್ತೈದು

ಇಂದು ಗಾಂಧಿ ಜಯಂತಿ ಆಚರಣೆ/ ಸ್ವರಾಜ್ಯದ ಎಪ್ಪತ್ತೈದರ ಹೊತ್ತಿನಲ್ಲಿ ಗಾಂಧಿಯ ಹಿಂದ್ ಸ್ವರಾಜ್‍ನ ನೆನಪು Read More »

ಏಷ್ಯನ್ ಗೇಮ್ಸ್ ನಲ್ಲಿ ಮುಂದುವರಿದ ಭಾರತೀಯರ ಚಿನ್ನದ ಬೇಟೆ| ತಜೀಂದರ್, ಅವಿನಾಶ್ ಗೆ ಪದಕ

ಸಮಗ್ರ ನ್ಯೂಸ್: 19ನೇ ಆವೃತ್ತಿಯ ಏಷ್ಯನ್​ ಗೇಮ್ಸ್​​ನಲ್ಲಿ ಭಾರತ ಚಿನ್ನದ ಬೇಟೆ ಮುಂದುವರೆಸಿದೆ. ಭಾನುವಾರ ನಡೆದ ವಿಶ್ವಚಾಂಪಿಯನ್ ಶಿಪ್​ನ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಓಟಗಾರ ಅವಿನಾಶ್ ಸೇಬಲ್ ಚಿನ್ನ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಮತ್ತೊಂದೆಡೆ ತಜಿಂದರ್ ಪಾಲ್ ಸಿಂಗ್ ತೂರ್ ಪುರುಷರ ಶಾಟ್​ಪುಟ್​ನಲ್ಲಿ ಸ್ವರ್ಣಕ್ಕೆ ಮುತ್ತಿಕ್ಕುವ ಮೂಲಕ ಸತತ 2ನೇ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ದಾಖಲೆಯ ಸ್ವರ್ಣ ಗೆದ್ದ ಸೇಬಲ್:ಏಷ್ಯನ್ ಗೇಮ್ಸ್​ನಲ್ಲಿ ತನ್ನ ಅಥ್ಲೆಟಿಕ್ಸ್ ಅಭಿಯಾನ ಆರಂಭಿಸಿದ ಭಾರತಕ್ಕೆ ಟ್ರ್ಯಾಕ್

ಏಷ್ಯನ್ ಗೇಮ್ಸ್ ನಲ್ಲಿ ಮುಂದುವರಿದ ಭಾರತೀಯರ ಚಿನ್ನದ ಬೇಟೆ| ತಜೀಂದರ್, ಅವಿನಾಶ್ ಗೆ ಪದಕ Read More »

ಕಡಬ: ಸ್ಕೂಟರ್ ಡಿಕ್ಕಿ; ಪಾದಚಾರಿ ಮಹಿಳೆ ಸಾವು

ಸಮಗ್ರ ನ್ಯೂಸ್:- ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿ ಆ .1 ರಂದು ರಾತ್ರಿ ನಡೆದಿದೆ. ಮೃತ ಮಹಿಳೆ ಮರ್ಧಾಳ ನಿವಾಸಿ ದಿವಂಗತ ಅಬೂಬಕ್ಕರ್ ಎಂಬವರ ಪತ್ನಿ ಅವ್ವಮ್ಮ ಎಂದು ತಿಳಿದಿದ್ದು, ಇವರು ಭಾನುವಾರ ರಾತ್ರಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಸ್ಕೂಟರ್ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರ ಗಾಯಗೊಂಡ ಮಹಿಳೆಯನ್ನು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ

ಕಡಬ: ಸ್ಕೂಟರ್ ಡಿಕ್ಕಿ; ಪಾದಚಾರಿ ಮಹಿಳೆ ಸಾವು Read More »

FOOD RECIPE|ಕ್ಯಾರೆಟ್ ಹಲ್ವಾ ಮಾಡೋದು ಹೇಗೆ? | ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಸುಲಭವಾಗಿ ಮನೆಯಲ್ಲೇ ರುಚಿಕರವಾಗಿ ಕ್ಯಾರೆಟ್ ಹಲ್ವಾ ಮಾಡಬಹುದು. ಬೇಕಾಗುವ ಪದಾರ್ಥಗಳು:- 1 ಕೆಜಿ ಕ್ಯಾರೆಟ್, ¼ ಕಪ್ ತುಪ್ಪ, 10 ಗೋಡಂಬಿ , 10 ಬಾದಾಮಿ, 3 ಕಪ್ ಹಾಲು, ¾ ಕಪ್ ಸಕ್ಕರೆ, ½ ಕಪ್ ಖೋಯಾ / ಮಾವಾ, ¼ ಟೀಸ್ಪೂನ್ ಏಲಕ್ಕಿ ಪುಡಿ. ಮಾಡುವ ವಿಧಾನ:- ಮೊದಲಿಗೆ ಕ್ಯಾರೆಟ್ ಸಿಪ್ಪೆ ತೆಗೆದು ನುಣ್ಣಗೆ ತುರಿ ಮಾಡಿ ಪಕ್ಕಕ್ಕೆ ಇರಿಸಿ. ಸಾಂಪ್ರದಾಯಿಕವಾಗಿ, ಹಲ್ವಾ ತಯಾರಿಸಲು ಡೆಲ್ಹಿ ಕ್ಯಾರೆಟ್ ಅನ್ನು ಬಳಸಲಾಗುತ್ತದೆ. ದೊಡ್ಡ

FOOD RECIPE|ಕ್ಯಾರೆಟ್ ಹಲ್ವಾ ಮಾಡೋದು ಹೇಗೆ? | ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಅಹಿಂಸೆ,‌ಏಕತೆ ಎಂಬ ಗಾಂಧಿತತ್ವದ ಪಾಲಕರಾಗೋಣ

ಸಮಗ್ರ ನ್ಯೂಸ್: ಗಾಂಧಿ ಜಯಂತಿ ಜಯಂತಿಯ ಸಂದರ್ಭದಲ್ಲಿ, ನಾವು ಭಾರತದ ಇತಿಹಾಸದಲ್ಲಿ ಅತ್ಯುನ್ನತ ವ್ಯಕ್ತಿ ಮತ್ತು ಶಾಂತಿ ಮತ್ತು ಅಹಿಂಸೆಯ ಜಾಗತಿಕ ಸಂಕೇತವಾದ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಲು ಸೇರುತ್ತೇವೆ. ಅಕ್ಟೋಬರ್ 2, 1869 ರಂದು ಜನಿಸಿದ ಗಾಂಧೀಜಿ ಅವರು ಸತ್ಯ, ಅಹಿಂಸೆ ಮತ್ತು ನಾಗರಿಕ ಅಸಹಕಾರದ ಬಗ್ಗೆ ಅಚಲವಾದ ಬದ್ಧತೆಯ ಮೂಲಕ ನಮ್ಮ ದೇಶವನ್ನು ಸ್ವಾತಂತ್ರ್ಯದತ್ತ ಕೊಂಡೊಯ್ದರು. ಅವರ ಜೀವನ ಸರಳತೆಯ ದಾರಿದೀಪವಾಗಿದ್ದು, ಶಾಂತಿಯುತ ಮಾರ್ಗಗಳ ಮೂಲಕ ಮಹತ್ತರವಾದ ಬದಲಾವಣೆಯನ್ನು ಸಾಧಿಸಬಹುದು ಎಂದು ಅವರು ಸಾಬೀತುಪಡಿಸಿದರು.

ಅಹಿಂಸೆ,‌ಏಕತೆ ಎಂಬ ಗಾಂಧಿತತ್ವದ ಪಾಲಕರಾಗೋಣ Read More »

ಮಂಗಳೂರು: ಮಹೇಶ್ ಖಾಸಗಿ ಬಸ್ ಗಳ ಮಾಲೀಕ ಪ್ರಕಾಶ್ ಆತ್ಮಹತ್ಯೆಗೆ ಶರಣು

ಸಮಗ್ರ ನ್ಯೂಸ್: ಮಂಗಳೂರಿನ ಖಾಸಗಿ ಬಸ್ ಕ್ಷೇತ್ರದಲ್ಲಿ ಬಹಳಷ್ಟು ಹೆಸರುವಾಸಿಯಾದ ಮಹೇಶ್ ಬಸ್ ಮಾಲಕ ತಾನು ವಾಸಿಸುವ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಮಹೇಶ್ ಬಸ್ ಮಾಲೀಕ ಜಯರಾಮ ಶೇಖ ಎಂಬವರ ಪುತ್ರ ಪ್ರಕಾಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಖಾಸಗಿ ಬಸ್ ಕ್ಷೇತ್ರದಲ್ಲಿ ತುಳುನಾಡಿನಲ್ಲಿ ಹೆಸರುವಾಸಿಯಾದ ಮಹೇಶ್ ಬಸ್ ನೂರಾರು ಬಸ್ ಗಳನ್ನು ಹೊಂದಿದೆ. ಅವರು ಕದ್ರಿ ಕಂಬಳ ಸಮೀಪ ಇರುವ ಮೊರಿಸ್ಕಾ ಅಪಾರ್ಟ್ ಮೆಂಟ್ ನಿಂದ ನೇಣು ಬಿಗಿದು ಆತ್ಮಹತ್ಯೆಗೈದುಕೊಂಡಿದ್ದಾರೆ.

ಮಂಗಳೂರು: ಮಹೇಶ್ ಖಾಸಗಿ ಬಸ್ ಗಳ ಮಾಲೀಕ ಪ್ರಕಾಶ್ ಆತ್ಮಹತ್ಯೆಗೆ ಶರಣು Read More »

ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವ ವೇಳೆ ಮಗುವಿಗೆ ದಿಢೀರ್ ಉಸಿರಾಟ ಸ್ಥಗಿತ| ಮರುಜೀವ ನೀಡಿದ ವೈದ್ಯ, ಐಎಎಸ್ ಅಧಿಕಾರಿ

ಸಮಗ್ರ ನ್ಯೂಸ್: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ಅದರಲ್ಲಿ ಪ್ರಯಾಣಿಸುತ್ತಿದ್ದ ಐಎಎಸ್ ಅಧಿಕಾರಿ ಹಾಗೂ ವೈದ್ಯರೊಬ್ಬರು ಚಿಕಿತ್ಸೆ ನೀಡಿ ಮರುಜೀವ ನೀಡಿದ ಘಟನೆ ರಾಂಚಿ-ದೆಹಲಿ ನಡುವಿನ ವಿಮಾನದಲ್ಲಿ ನಡೆದಿದೆ. ರಾಂಚಿಯಿಂದ ಮಗುವನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಈ ಘಟನೆ ನಡೆದಿದೆ. ವಿಮಾನ ಹಾರಾಟದಲ್ಲಿದ್ದಾಗ ಮಗು ತೀವ್ರ ಉಸಿರಾಟದ ತೊಂದರೆ ಅನುಭವಿಸಿದೆ. ಈ ವೇಳೆ ಮಗುವಿನ ತಾಯಿ ಅಳಲು ಆರಂಭಿಸಿದ್ದಾರೆ. ವಿಮಾನದ ಸಿಬ್ಬಂದಿ ವಿಚಾರ

ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವ ವೇಳೆ ಮಗುವಿಗೆ ದಿಢೀರ್ ಉಸಿರಾಟ ಸ್ಥಗಿತ| ಮರುಜೀವ ನೀಡಿದ ವೈದ್ಯ, ಐಎಎಸ್ ಅಧಿಕಾರಿ Read More »

ಕಾವೇರಿ ವಿವಾದ| ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ನಟ ಪ್ರೇಮ್

ಸಮಗ್ರ ನ್ಯೂಸ್: ಕಾವೇರಿ ನದಿ ನೀರಿಗಾಗಿ ನಡೆದ ಕರ್ನಾಟಕ ಬಂದ್ ನಲ್ಲಿ ಭಾಗಿಯಾಗಿದ್ದ ನಟ ನೆನಪಿರಲಿ ಪ್ರೇಮ್, ಇಂದು(ಅ.1) ಪತ್ರ ಚಳವಳಿಯಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಕರೆಕೊಟ್ಟಿದ್ದ ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆಯಿರಿ ಚಳವಳಿಯಲ್ಲಿ ಭಾಗಿಯಾಗಿ, ತಮ್ಮ ರಕ್ತದಲ್ಲಿ ಪ್ರೇಮ್ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಕನ್ನಡ ನೆಲ-ಜಲ ವಿಷಯದಲ್ಲಿ ಹೋರಾಡಲು ಪ್ರೇಮ್ ಯಾವತ್ತಿಗೂ ಮುಂದಾಗಿದ್ದು, ಅನೇಕ ಹೋರಾಟಗಳಲ್ಲೂ ಅವರು ಭಾಗಿಯಾಗಿದ್ದಾರೆ. ಇದೀಗ ರಕ್ತದಲ್ಲಿ ಪತ್ರ ಬರೆದು, ಆ ಪತ್ರವನ್ನು ಪ್ರಧಾನಿ ಕಳುಹಿಸಿದ್ದಾರೆ. ಕಾವೇರಿ ವಿಷಯದಲ್ಲಿ ಮಧ್ಯಸ್ತಿಕೆ

ಕಾವೇರಿ ವಿವಾದ| ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ನಟ ಪ್ರೇಮ್ Read More »