October 2023

ಪ್ರಧಾನಿ ಮೋದಿ ವಾಟ್ಸಾಪ್ ಯೂನಿವರ್ಸಿಟಿ ಕುಲಪತಿ – ಕೆಟಿಆರ್

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ” ವಾಟ್ಸ್ ಆ್ಯಪ್ ಯುನಿವರ್ಸಿಟಿಯ ಕುಲಪತಿ” ಎಂದು ಕರೆದ ಕೆಟಿಆರ್‌, “ಪಿಎಂ ಮೋದಿಯವರ ಬಿಜೆಪಿ ದೊಡ್ಡ ‘ಸುಳ್ಳುʼ ಮತ್ತು ‘ಮೋಸʼದ ಫ್ಯಾಕ್ಟರಿಯಾಗಿದ್ದು, ಅದು ಹಸಿ ಸುಳ್ಳುಗಳನ್ನು ಹೇಳುತ್ತದೆ. ಮೋದಿಯಂತಹ ಮೋಸಗಾರರ ಜೊತೆ ಎಂದಿಗೂ ಬೆರೆಯದ ಹೋರಾಟಗಾರ ಕೆಸಿಆರ್” ಎಂದು ಟ್ವೀಟ್‌ ಮಾಡಿದ್ದಾರೆ. “ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಪೂರ್ಣ ಸುಳ್ಳು ಹೇಳುವ ಮೂಲಕ ತಮ್ಮ ಸ್ಥಾನಮಾನದ ಬೆಲೆಯನ್ನು ಕುಗ್ಗಿಸಿಕೊಂಡಿದ್ದಾರೆ” ಎಂದು ಕೆಟಿಆರ್ ಟೀಕಿಸಿದರು. “ಮಾನಸಿಕ ಸ್ಥಿಮಿತ ಕಳೆದುಕೊಂಡು ಎನ್‌ಡಿಎ ಸೇರಲು, […]

ಪ್ರಧಾನಿ ಮೋದಿ ವಾಟ್ಸಾಪ್ ಯೂನಿವರ್ಸಿಟಿ ಕುಲಪತಿ – ಕೆಟಿಆರ್ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಿರಾಕರಿಸಿ ಹೈಕೋರ್ಟ್‌ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಎಚ್‌.ಬಿ. ಪ್ರಭಾಕರ್‌ ಶಾಸ್ತ್ರಿ, ನ್ಯಾ. ಅನಿಲ್‌ ಕೆ.ಕಟ್ಟಿ ಅವರಿದ್ದ ವಿಭಾಗೀಯ ಪೀಠವು, ಆತನ ಹತ್ಯೆ ಸಂಬಂಧ ಸಂಚಿನಲ್ಲಿ‌ ಆರೋಪಿಗಳು ಭಾಗಿಯಾದ ಆರೋಪವಿದೆ ಹೀಗಾಗಿ ಕೆ.ಇಸ್ಮಾಯಿಲ್‌ ಶಫಿ, (ಆರೋಪಿ 9), ಕೆ.ಮೊಹಮ್ಮದ್‌ ಇಕ್ಬಾಲ್‌ (ಆರೋಪಿ 10) ಹಾಗೂ ಎಂ.ಶಾಹೀದ್‌ (ಆರೋಪಿ 11) ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ ಎಂದು ಆದೇಶಿಸಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್ Read More »

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್| ಅ.5ರಿಂದ 13ರರವರೆಗೆ ತಿದ್ದುಪಡಿಗೆ ಅವಕಾಶ

ಸಮಗ್ರ ನ್ಯೂಸ್: ಬಿಪಿಎಲ್, ಎಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ ಆಹಾರ ಇಲಾಖೆ ಗುಡ್​ ನ್ಯೂಸ್​ ನೀಡಿದೆ. ಮತ್ತೆ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ ನೀಡಿದ ಆಹಾರ ಇಲಾಖೆ ಆದೇಶ ನೀಡಿದೆ. ಅ.5ರಿಂದ 13ರವರೆಗೆ ಮತ್ತೆ ತಿದ್ದುಪಡಿಗೆ ಅವಕಾಶ ನೀಡಿದೆ. ಆದರೆ, ರಾಜ್ಯದ ಎಲ್ಲಾ ಭಾಗದಲ್ಲಿ ಒಮ್ಮೆಗೆ ಅವಕಾಶ ನೀಡಿದೆ ವಿಭಾಗವಾರು ತಲಾ ಮೂರು ದಿನಗಳ ಕಾಲ ರೇಷನ್​ ಕಾರ್ಡ್​ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಆಹಾರ ಇಲಾಖೆ ಹೆಚ್ಚುವರಿ ನಿರ್ದೇಶಕ ಘ್ಯಾನೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ.

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್| ಅ.5ರಿಂದ 13ರರವರೆಗೆ ತಿದ್ದುಪಡಿಗೆ ಅವಕಾಶ Read More »

ಏಷ್ಯನ್ ಗೇಮ್ಸ್; ಜಾವಲಿನ್ ನಲ್ಲಿ ನೀರಜ್ ಗೆ ಚಿನ್ನ, ಬೆಳ್ಳಿ ಗೆದ್ದ ಕಿಶೋರ್

ಸಮಗ್ರ ನ್ಯೂಸ್: ಏಷ್ಯನ್ ಗೇಮ್ಸ್ 2023ರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನ ಮತ್ತು ಕಿಶೋರ್ ಜೇನಾ ಬೆಳ್ಳಿ ಪದಕ ಜಯಿಸಿದ್ದಾರೆ. ಜಾವೆಲಿನ್ ವಿಭಾಗದಲ್ಲಿ ಚಿನ್ನ ತಮ್ಮ ಬಳಿಯೇ ಉಳಿಸಿರುವ ನೀರಜ್, 88.88 ಮೀಟರ್ ದೂರ ಜಾವೆಲಿನ್ ಎಸೆದು ಗಮನ ಸೆಳೆದಿದ್ದಾರೆ. ನೀರಜ್‌ಗೆ ತಕ್ಕ ಪೈಪೋಟಿ ಒಡ್ಡಿದ ಭಾರತೀಯವರೇ ಆದ ಕಿಶೋರ್ ಜೇನಾ 87.54 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿ ಪದಕಕ್ಕೆ ಅರ್ಹರಾದರು. ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವೀರ ನೀರಜ್, 2018ರ

ಏಷ್ಯನ್ ಗೇಮ್ಸ್; ಜಾವಲಿನ್ ನಲ್ಲಿ ನೀರಜ್ ಗೆ ಚಿನ್ನ, ಬೆಳ್ಳಿ ಗೆದ್ದ ಕಿಶೋರ್ Read More »

ಮಲಬದ್ದತೆಯಿಂದ ಬಳಲುತ್ತಿದ್ದ ಹೆಬ್ಬಾವಿಗೆ ಶಸ್ತ್ರಚಿಕಿತ್ಸೆ| ಮಂಗಳೂರು ಯುವ ವೈದ್ಯರ ಮಹತ್ಸಾಧನೆ

ಸಮಗ್ರ ನ್ಯೂಸ್: ಬಂಟ್ವಾಳ ತಾಲೂಕಿನ ವಗ್ಗದಲ್ಲಿ ಕಾಣಸಿಕ್ಕಿರುವ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಮಂಗಳೂರಿನ ಯುವ ವೈದ್ಯರ ತಂಡವೊಂದು ಚಿಕಿತ್ಸೆ ನೀಡಿ ರಕ್ಷಿಸಿ ಮರಳಿ ಸುರಕ್ಷಿತವಾಗಿ ಬಿಟ್ಟಿದೆ. ಉರಗ ರಕ್ಷಕ ಧೀರಜ್ ನಾವೂರು ಅವರಿಗೆ‌ ಬಂಟ್ವಾಳದ ವಗ್ಗದಲ್ಲಿ ಈ ಹೆಬ್ಬಾವು ಅಸ್ವಸ್ಥ ಸ್ಥಿತಿಯಲ್ಲಿ ಕಾಣಸಿಕ್ಕಿದೆ. ಯಾರೋ ಹೊಡೆದಿದ್ದಾರೇನೋ ಅಂದುಕೊಂಡ ಅವರು ತಕ್ಷಣ ಮಂಗಳೂರಿನ ಪಶು ವೈದ್ಯೆ ಡಾ.ಯಶಸ್ವಿ ನಾರಾವಿ ಅವರಿಗೆ ಕರೆ ಮಾಡಿದ್ದಾರೆ‌. ಚಿಕಿತ್ಸೆ ನೀಡಲೆಂದು ಅವರು ಹೆಬ್ಬಾವನ್ನು ಕ್ಲಿನಿಕ್‌ಗೆ ಕರೆ ತರವಂತೆ ಸೂಚಿಸಿದ್ದಾರೆ.

ಮಲಬದ್ದತೆಯಿಂದ ಬಳಲುತ್ತಿದ್ದ ಹೆಬ್ಬಾವಿಗೆ ಶಸ್ತ್ರಚಿಕಿತ್ಸೆ| ಮಂಗಳೂರು ಯುವ ವೈದ್ಯರ ಮಹತ್ಸಾಧನೆ Read More »

ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ ಆಹಾರ ಇಲಾಖೆ

ಸಮಗ್ರ ನ್ಯೂಸ್: ಬಿಪಿಎಲ್ ಕಾರ್ಡ್ ದಾರರಿಗೆ ಆಹಾರ ಇಲಾಖೆ ಇದೀಗ ಗುಡ್​ ನ್ಯೂಸ್​ ನೀಡಿದೆ. ಹೌದು, ಬಿಪಿಎಲ್ ಕಾರ್ಡ್​ಗೆ ಫಲಾನುಭವಿ ಹೆಸರು ಸೇರ್ಪಡೆ ಮಾಡಿ, ತಿದ್ದುಪಡಿಗೆ ಅವಕಾಶ ಕೊಟ್ಟಿದ್ದು, ಅದನ್ನು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್​ ಕೇಂದ್ರಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೆ ಸರಿಪಡಿಸಿಕೊಳ್ಳಬಹುದಾಗಿದೆ. ಇದನ್ನ ಮೂರು ಹಂತಗಳಲ್ಲಿ ವಿವಿಧ ಜಿಲ್ಲೆಗಳಿಗೆ ನಿಗಧಿತ ದಿನಾಂಕವನ್ನು ಕೊಡಲಾಗಿದೆ.ಅಕ್ಟೋಬರ್​ 5 ರಿಂದ 7 ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಅವಕಾಶ ನೀಡಲಾಗಿದೆ.

ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ ಆಹಾರ ಇಲಾಖೆ Read More »

ಸೌಜನ್ಯ ಹತ್ಯಾ ಪ್ರಕರಣ| ನ್ಯಾಯಕ್ಕೆ ಆಗ್ರಹಿಸಿ‌ ಮಡಿಕೇರಿಯಲ್ಲಿ ವಾಯ್ಸ್ ಆಫ್ ಯೂತ್ ಯೂನಿಯನ್’ ವತಿಯಿಂದ ಪ್ರತಿಭಟನೆ

ಸಮಗ್ರ ನ್ಯೂಸ್: ಧರ್ಮಸ್ಥಳ ವ್ಯಾಪ್ತಿಯಲ್ಲಿ ಹನ್ನೊಂದು ವರ್ಷಗಳ ಹಿಂದೆ ನಡೆದ `ಸೌಜನ್ಯ’ ಹತ್ಯಾ ಪ್ರಕರಣದ ಮರು ತನಿಖೆ ನಡೆಸುವ ಮೂಲಕ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ವಾಯ್ಸ್ ಆಫ್ ಯೂತ್ ಯೂನಿಯನ್ ಕೊಡಗು ಜಿಲ್ಲಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಯೂನಿಯನ್‍ನ ಪದಾಧಿಕಾರಿಗಳು ಘೋಷಣೆಗಳನ್ನು ಕೂಗಿ, ಸೌಜನ್ಯ ಹತ್ಯಾ ಪ್ರಕರಣದ ಮರು ತನಿಖೆ ನಡೆಸಿ, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಯೂನಿಯನ್ ಅಧ್ಯಕ್ಷ ಕೆ.ಆರ್.ದಿನೇಶ್ ಮಾತನಾಡಿ, ಸೌಜನ್ಯಳನ್ನು

ಸೌಜನ್ಯ ಹತ್ಯಾ ಪ್ರಕರಣ| ನ್ಯಾಯಕ್ಕೆ ಆಗ್ರಹಿಸಿ‌ ಮಡಿಕೇರಿಯಲ್ಲಿ ವಾಯ್ಸ್ ಆಫ್ ಯೂತ್ ಯೂನಿಯನ್’ ವತಿಯಿಂದ ಪ್ರತಿಭಟನೆ Read More »

University of Agriculture Sciences ಧಾರವಾಡ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ| ಟೀಚರ್ ಕೆಲಸ ಮಾಡೋ ಆಸೆ ಇದೆಯಾ? ಹಾಗಿದ್ರೆ ನಾಳೆನೆ ಇಂಟರ್​ವ್ಯೂ ಅಟೆಂಡ್ ಆಗಿ❕

ಸಮಗ್ರ ಉದ್ಯೋಗ: University of Agriculture Sciences Dharwad ಖಾಲಿ ಹುದ್ದೆಗೆ ಆಹ್ವಾನಿಸುತ್ತಿದೆ. ಒಟ್ಟು 2 Assistant Professor ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅಪ್ಲೈ ಮಾಡಿ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಶಿರಸಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅಕ್ಟೋಬರ್ 5, 2023 ಅಂದರೆ ನಾಳೆ ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯುತ್ತದೆ. ಆಸಕ್ತರು ಪಾಲ್ಗೊಳ್ಳಬಹುದು. ಇನ್ನಷ್ಟು ಮಾಹಿತಿ ಇಲ್ಲಿದೆ. Job Details:ನ್ಯಾಚುರಲ್ ರಿಸೋರ್ಸ್​ ಮ್ಯಾನೇಜ್​ಮೆಂಟ್​- 1ಫಾರೆಸ್ಟ್ ಬಯಾಲಜಿ &

University of Agriculture Sciences ಧಾರವಾಡ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ| ಟೀಚರ್ ಕೆಲಸ ಮಾಡೋ ಆಸೆ ಇದೆಯಾ? ಹಾಗಿದ್ರೆ ನಾಳೆನೆ ಇಂಟರ್​ವ್ಯೂ ಅಟೆಂಡ್ ಆಗಿ❕ Read More »

ಡಿಗ್ರಿ ಪಾಸ್​ ಆಗಿದ್ಯಾ? ಹಾಗಾದ್ರೆ ಈ ಜಾಬ್​ಗೆ ಟ್ರೈ ಮಾಡಿ, ತಿಂಗಳಿಗೆ 1 ಲಕ್ಷ ಸಂಬಳ!

ಸಮಗ್ರ ಉದ್ಯೋಗ: Sports Authority of India ಹುದ್ದೆಗೆ ಆಹ್ವಾನ ಮಾಡ್ತಾ ಇದೆ. ಒಟ್ಟು 64 ಹೈ ಪರ್ಫಾರ್ಮೆನ್ಸ್​ ಅನಾಲಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 5, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇನ್ನಷ್ಟು ಮಾಹಿತಿ ನಿಮಗಾಗಿ. Job Details:ಫಿಜಿಯೋಥೆರಪಿಸ್ಟ್- 12ಸ್ಟ್ರೆಂಥ್ & ಕಂಡಿಶನಿಂಗ್ ಎಕ್ಸ್​ಪರ್ಟ್​- 28ಫಿಜಿಯಾಲಾಜಿಸ್ಟ್​- 8ಸೈಕಾಲಾಜಿಸ್ಟ್​- 4ಬಯೋಮೆಕ್ಯಾನಿಕ್ಸ್​-10ನ್ಯೂಟ್ರಿಶನಿಸ್ಟ್-1ಬಯೋಕೆಮಿಸ್ಟ್​-1 Education:ಫಿಜಿಯೋಥೆರಪಿಸ್ಟ್- ಫಿಜಿಯೋಥೆರಪಿಯಲ್ಲಿ ಪದವಿಸ್ಟ್ರೆಂಥ್ & ಕಂಡಿಶನಿಂಗ್ ಎಕ್ಸ್​ಪರ್ಟ್​- ಸ್ಪೋರ್ಟ್ಸ್​ ಕೋಚಿಂಗ್​ನಲ್ಲಿ

ಡಿಗ್ರಿ ಪಾಸ್​ ಆಗಿದ್ಯಾ? ಹಾಗಾದ್ರೆ ಈ ಜಾಬ್​ಗೆ ಟ್ರೈ ಮಾಡಿ, ತಿಂಗಳಿಗೆ 1 ಲಕ್ಷ ಸಂಬಳ! Read More »

ವಿಟ್ಲ: ಲಾರಿ ಪಲ್ಟಿ ಪ್ರಕರಣ| ಓರ್ವ ಸಾವು

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿ ಗ್ರಾನೈಟ್ ಲಾರಿ ಪಲ್ಟಿಯಾಗಿ ಗಂಭೀರ ಗಾಯಗೊಂಡ ನಾಲ್ವರಲ್ಲಿ ಓರ್ವ ಸಾವನ್ನಪ್ಪಿದ ಬಗ್ಗೆ ತಿಳಿದುಬಂದಿದೆ. ಸಾವನ್ನಪ್ಪಿದ್ದ ವ್ಯಕ್ತಿಯನ್ನು ಉತ್ತರ ಭಾರತ ಮೂಲದ ಸುಭಾಶ್ವಂದ್ರ ಎಂದು ಗುರುತಿಸಲಾಗಿದೆ. ಹರ್ಷದ್‌ ಮತ್ತು ಪವನ್‌ ಹಾಗೂ ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಾಯಗೊಂಡವರಲ್ಲಿ ಇಬ್ಬರು ಉತ್ತರ ಭಾರತದ ಮೂಲದವರು ಮತ್ತು ಇಬ್ಬರು ಮಂಗಳೂರಿನವರು ಎಂದು ಗುರುತಿಸಲಾಗಿದೆ.

ವಿಟ್ಲ: ಲಾರಿ ಪಲ್ಟಿ ಪ್ರಕರಣ| ಓರ್ವ ಸಾವು Read More »