October 2023

ಡಿಗ್ರೀ ಪಾಸ್​ ಆಗಿದ್ರೆ ಸಾಕು, ಮ್ಯಾನೇಜರ್​ ಪೋಸ್ಟ್​ಗೆ ಅಪ್ಲೇ ಮಾಡಬಹುದು!

ಸಮಗ್ರ ಉದ್ಯೋಗ: BOB Financial Solutions Limited ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ಝೋನಲ್ ರಿಲೇಶನ್​ಶಿಪ್ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ. ಅಕ್ಟೋಬರ್ 7, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಉದ್ಯೋಗದ ಬಗ್ಗೆ ಕಂಪ್ಲೀಟ್​ ಡೀಟೇಲ್ಸ್​ ಇಲ್ಲಿದೆ ನೋಡಿ. Education: ಬ್ಯಾಂಕ್ ಆಫ್ ಬರೋಡಾ ಫೈನಾನ್ಶಿಯಲ್ ಸೊಲ್ಯೂಷನ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, […]

ಡಿಗ್ರೀ ಪಾಸ್​ ಆಗಿದ್ರೆ ಸಾಕು, ಮ್ಯಾನೇಜರ್​ ಪೋಸ್ಟ್​ಗೆ ಅಪ್ಲೇ ಮಾಡಬಹುದು! Read More »

ಧರ್ಮಸ್ಥಳ: ರೈಸ್ ಆಯಿಲ್ ಪ್ಲೋರ್ ಮಿಲ್ಸ್ ನ ಕಾರ್ಮಿಕ ಶವವಾಗಿ ಪತ್ತೆ| ತಿಂಗಳ ಹಿಂದೆ ನಡೆದ ಸಾವಿನ ಸುತ್ತ ಅನುಮಾನದ ಹುತ್ತ

ಸಮಗ್ರ ನ್ಯೂಸ್: ಧರ್ಮಸ್ಥಳದ ರೈಸ್ ಆಯಿಲ್ ಫ್ಲೋರ್ ಮಿಲ್ಸ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣಪ್ಪ ಸಫಲ್ಯ (60ವ) ಎಂಬವರ ಮೃತದೇಹ ಅ.3 ರಂದು ರೈಸ್ ಮಿಲ್ ನ ಹಿಂಬದಿಯಲ್ಲಿ ನೀರು ತುಂಬಿಸಿಟ್ಟಿರುವ ದೊಡ್ಡ ಗಾತ್ರದ ಸ್ಟೀಲ್ ಪಾತ್ರೆಯ ಒಳಗೆ ನೀರಿನಲ್ಲಿ ಕವುಚಿ ತೇಲಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮೃತರ ಪುತ್ರ ವಿನಯ್ ಕುಮಾರ್ ರವರ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಕೃಷ್ಣಪ್ಪ ಸಫಲ್ಯ ರವರು ರೈಸ್

ಧರ್ಮಸ್ಥಳ: ರೈಸ್ ಆಯಿಲ್ ಪ್ಲೋರ್ ಮಿಲ್ಸ್ ನ ಕಾರ್ಮಿಕ ಶವವಾಗಿ ಪತ್ತೆ| ತಿಂಗಳ ಹಿಂದೆ ನಡೆದ ಸಾವಿನ ಸುತ್ತ ಅನುಮಾನದ ಹುತ್ತ Read More »

ಕಡಬ: ದೈವಾರಾಧನೆಯ ನರ್ತನ ಪ್ರದರ್ಶನ ಮೆರವಣಿಗೆಗಳಲ್ಲಿ ಪ್ರದರ್ಶಿಸಿಸುವುದು ತರವಲ್ಲ: ಕಿಟ್ಟು ಕಲ್ಲುಗುಡ್ಡೆ

ಸಮಗ್ರ ನ್ಯೂಸ್:ನಮ್ಮ ಧಾರ್ಮಿಕ ಆಚರಣೆಯ ಮೆರವಣಿಗೆಗಳಲ್ಲಿ ದೈವಾರಾಧನೆಯ ನರ್ತನ ಪ್ರದರ್ಶನ ಮಾಡುವುದು ಸರಿಯಲ್ಲ ಇದರ ಬಗ್ಗೆ ಜನರಿಗೆ ತಿಳವಳಿಕೆ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಕಡಬ ತಾಲೂಕಿನ ನಲಿಕೆ ಸಮಾಜ ಸೇವಾ ಸಂಘದ ದೈವಾರಾಧನ ಸಮಿತಿಯ ಅಧ್ಯಕ್ಷ ಕಿಟ್ಟು ಕಲ್ಲುಗುಡ್ಡೆ ಹೇಳಿದರು. ಅ.5 ರಂದು ಕಡಬದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದೈವಗಳ ನರ್ತನವು ದೈವದ ಕೊಡಿಮರದಡಿಯಲ್ಲೇ ನಡೆಯಬೇಕು ಹೊರತು ಹಾದಿಬೀದಿಯಲ್ಲಿ ನಡೆಯಬಾರದು ಎಂದರು. ತುಳುನಾಡಿನಲ್ಲಿ ದೈವಾರಧನೆ ಮಾಡುವಾಗ ಅದಕ್ಕೆ 16 ಕಟ್ಟಲೆ ಎನ್ನುವ ನಿಯಮವಿದೆ, ಸಿಕ್ಕಸಿಕ್ಕವರು ದೈವ ನರ್ತನ

ಕಡಬ: ದೈವಾರಾಧನೆಯ ನರ್ತನ ಪ್ರದರ್ಶನ ಮೆರವಣಿಗೆಗಳಲ್ಲಿ ಪ್ರದರ್ಶಿಸಿಸುವುದು ತರವಲ್ಲ: ಕಿಟ್ಟು ಕಲ್ಲುಗುಡ್ಡೆ Read More »

ಯಾವುದೇ ‌ಕಾರಣಕ್ಕೆ ಹೊಸ ಮದ್ಯದಂಗಡಿಗೆ ಲೈಸೆನ್ಸ್ ಕೊಡಲ್ಲ – ಸಿಎಂ

ಸಮಗ್ರ ನ್ಯೂಸ್: ಉಚಿತ ಯೋಜನೆಗಳಿಂದಾಗಿ ಸಾವಿರಾರು ಕೋಟಿ ವ್ಯಯವಾಗುತ್ತಿದೆ. ಈ ನಷ್ಟ ಸರಿದೂಗಿಸಲು, ಗ್ರಾಮ ಪಂಚಾಯತ್‌ಗೆ ಒಂದರಂತೆ ಬಾರ್‌ ತೆರೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಆದ್ರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳನ್ನು ಯಾವ ಕಾರಣಕ್ಕೂ ತೆರೆಯೋದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವುದಕ್ಕೆ ಮಹಿಳೆಯರ ವಿರೋಧವಿದೆ. ಹೀಗಾಗಿ ಸರ್ಕಾರಕ್ಕೆ ಹಣಕಾಸಿನ ಕೊರತೆ ಇದ್ದರೂ ಕೂಡಾ

ಯಾವುದೇ ‌ಕಾರಣಕ್ಕೆ ಹೊಸ ಮದ್ಯದಂಗಡಿಗೆ ಲೈಸೆನ್ಸ್ ಕೊಡಲ್ಲ – ಸಿಎಂ Read More »

ಧ್ರುವ ಸರ್ಜಾ ಬರ್ತ್ ಡೇಗೆ ಜೋಗಿ ಪ್ರೇಮ್ ಸ್ಪೆಷಲ್ ಗಿಫ್ಟ್‌

ಸಮಗ್ರ ನ್ಯೂಸ್: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಜನ್ಮ ದಿನಕ್ಕೆ ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ. ಇಡೀ ಫ್ಯಾನ್ಸ್ ಖುಷಿ ಆಗಿದ್ದಾರೆ. ಮಾರ್ಟಿನ್ ಡೈರೆಕ್ಟರ್ ಎ.ಪಿ.ಅರ್ಜುನ್ ಕೂಡ ತಮ್ಮ ಕಡೆಯಿಂದಲೂ ಒಂದು ಸಿಡಿಪಿ ಮಾಡಿ ಹಾಕಿದ್ದಾರೆ. ಇದರ ಜೊತೆಗೆ ಜೋಗಿ ಪ್ರೇಮ್ ಕೂಡ ಒಂದು ಪ್ಲಾನ್ ಮಾಡಿದ್ದಾರೆ. ಈ ಪ್ಲಾನ್ ಕೆಡಿ ಸಿನಿಮಾಕ್ಕೆ ಸಂಬಂಧಿಸಿದ್ದೇ ಆಗಿದೆ. ಈ ಮೂಲಕ ತಮ್ಮ ನಾಯಕ ನಟನಿಗೆ ಜೋಗಿ ಪ್ರೇಮ್ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಜೋಗಿ ಪ್ರೇಮ್ ತಮ್ಮ

ಧ್ರುವ ಸರ್ಜಾ ಬರ್ತ್ ಡೇಗೆ ಜೋಗಿ ಪ್ರೇಮ್ ಸ್ಪೆಷಲ್ ಗಿಫ್ಟ್‌ Read More »

ಟೀಚರ್​ ಜಾಬ್​ ಖಾಲಿ ಇದೆ. 40,000 ಸಂಬಳ! ಈಗಲೇ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: University of Agriculture Sciences Dharwad ಹೈರಿಂಗ್​ ಮಾಡ್ತಾ ಇದೆ. ಗುತ್ತಿಗೆ ಆಧಾರದ ಮೇಲೆ ಅಕೌಂಟೆನ್ಸಿ ವಿಭಾಗದಲ್ಲಿ ಶಿಕ್ಷಕ ಹುದ್ದೆಗೆ ನೇಮಕಾತಿ ನಡೆಸಲಾಗುತ್ತಿದೆ. ಆಸಕ್ತರು ಈಗಲೇ ಅಪ್ಲೈ ಮಾಡಿ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಧಾರವಾಡದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. Education: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂ.ಕಾಂ, ಪಿಎಚ್​.ಡಿ ಪೂರ್ಣಗೊಳಿಸಿರಬೇಕು. Age: ಕೃಷಿ ವಿಜ್ಞಾನ

ಟೀಚರ್​ ಜಾಬ್​ ಖಾಲಿ ಇದೆ. 40,000 ಸಂಬಳ! ಈಗಲೇ ಅಪ್ಲೈ ಮಾಡಿ Read More »

ಸಿಕ್ಕಿಂ ಪ್ರವಾಹಕ್ಕೆ ಸಿಲುಕಿ 21 ಮಂದಿ ಸಾವು/ 118 ಮಂದಿ ನಾಪತ್ತೆ

ಸಮಗ್ರ ನ್ಯೂಸ್: ಸಿಕ್ಕಿಂನ ತೀಸ್ತಾ ನದಿಯ ಪ್ರವಾಹಕ್ಕೆ ಸಿಲುಕಿ ಬಲಿಯಾದವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಇದರಲ್ಲಿ ಏಳು ಯೋಧರು ಸೇರಿದ್ದಾರೆ. ಪ್ರವಾಹಕ್ಕೆ ಸಿಲುಕಿರುವ 118 ಜನರು ಇನ್ನೂ ಕೂಡ ಪತ್ತೆಯಾಗಿಲ್ಲ. ಪ್ರವಾಹಕ್ಕೆ ಸಿಲುಕಿ 23 ಸೈನಿಕರು ನಾಪತ್ತೆಯಾಗಿದ್ದು, ಅದರಲ್ಲಿ 7 ಜನರ ಮೃತದೇಹ ಸಿಕ್ಕಿದೆ. ಇನ್ನುಳಿದ 16 ಜನ ಯೋಧರು ಇನ್ನೂ ಪತ್ತೆಯಾಗಿಲ್ಲ. ಸೇನೆ ಮತ್ತು ವಾಯುಪಡೆಯ ಮೂಲಕ ಎಲ್ಲರನ್ನೂ ಸ್ಥಳಾಂತರ ಮಾಡುತ್ತಿದ್ದೇವೆ ಎಂದು ಸಿಕ್ಕಿಂನ ಮುಖ್ಯ ಕಾರ್ಯದರ್ಶಿ ವಿಜಯ್ ಭೂಷಣ್ ಪಾಠಕ್ ಹೇಳಿದ್ದಾರೆ.

ಸಿಕ್ಕಿಂ ಪ್ರವಾಹಕ್ಕೆ ಸಿಲುಕಿ 21 ಮಂದಿ ಸಾವು/ 118 ಮಂದಿ ನಾಪತ್ತೆ Read More »

KSRTC ಬಸ್ ಏರಿ ‘ಮಂಕಿ’ ಜಾಲಿ ರೈಡ್

ಸಮಗ್ರ ನ್ಯೂಸ್: ಕಾಂಗ್ರೆಸ್ ಗ್ಯಾರಂಟಿಯ ಶಕ್ತಿ ಯೋಜನೆಯನ್ನು ಎಲ್ಲಾ ಮಹಿಳೆಯರು ಬಳಸಿಕೊಳ್ಳುತ್ತಿರುವುದಂತು ನಿಜ, ಅದರಂತೆ ಇಂದು ಫ್ರೀ ಬಸ್ ನಲ್ಲಿ ಕೋತಿಯೊಂದು ಪ್ರಯಾಣ ಆರಂಭಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ. ಅಂದಹಾಗೇ ಈ ದೃಶ್ಯ ಕಂಡುಬಂದಿದ್ದು ಹಾವೇರಿ ಜಿಲ್ಲೆಯಲ್ಲಿ. ಹಾವೇರಿಯಿಂದ – ಹಿರೇಕೆರೂರ ವರೆಗೂ ಮಂಗನ ಪ್ರಯಾಣ ಮುಂದುವರೆದಿತ್ತು. ಅಂದರೆ ಸುಮಾರು 30 ಕಿ.ಮೀಟರ್ ದೂರದಷ್ಟು ಕೋತಿ ಟ್ರಾವಲಿಂಗ್ ಮಾಡಿದೆ. https://www.instagram.com/reel/CyDN8jSreyb/?igshid=MzRlODBiNWFlZA== ಜನರಿಂದ ತುಂಬಿ ತುಳುಕುತ್ತಿದ್ದ ಬಸ್ ನಲ್ಲಿ ಭಯವಿಲ್ಲದೆ ಕೋತಿ ಪ್ರಯಾಣ ಮಾಡಿದ್ದು, ಬಸ್

KSRTC ಬಸ್ ಏರಿ ‘ಮಂಕಿ’ ಜಾಲಿ ರೈಡ್ Read More »

ಶಾಲೆಗಳು ವ್ಯವಹಾರ ಕೇಂದ್ರಗಳಲ್ಲ- ಹೈಕೋರ್ಟ್| ಕೊಠಡಿ, ಮೈದಾನ ವಿನಾಯ್ತಿ ಕೋರಿದ ಶಾಲೆಗೆ ಚಾಟಿ

ಸಮಗ್ರ ನ್ಯೂಸ್: ಸರಿಯಾದ ಕೊಠಡಿ ವ್ಯವಸ್ಥೆ, ಕ್ರೀಡಾ ಮೈದಾನ, ಪ್ರಯೋಗಾಲಯ ಹಾಗೂ ಅಗ್ನಿ ಸುರಕ್ಷತಾ ಕ್ರಮಗಳಿಲ್ಲದಿದ್ದರೂ ಶಾಲೆ ಯನ್ನು ಮೇಲ್ದರ್ಜೆಗೇರಿಸಲು ಅನುಮತಿ ನೀಡಲು ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡುವಂತೆ ಕೋರಿದ್ದ ಎರಡು ಖಾಸಗಿ ಶಾಲೆಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಶಾಲೆಗಳನ್ನು ವ್ಯವಹಾರ ಕೇಂದ್ರವನ್ನಾಗಿಸಲು ಸಾಧ್ಯವಿಲ್ಲ. ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯದೆ ಶಾಲೆ ನಡೆಸಿ, ಅಪ್ರಾಪ್ತ ಮಕ್ಕಳ ಜೀವದ ಜೊತೆಗೆ ಚೆಲ್ಲಾಟವಾಡಲು ಅವಕಾಶ ನೀಡುವುದಿಲ್ಲ ಎಂದು ಕೆಂಡಕಾರಿದೆ. ಖಾಸಗಿ ಶಾಲೆಯೊಂದು ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ

ಶಾಲೆಗಳು ವ್ಯವಹಾರ ಕೇಂದ್ರಗಳಲ್ಲ- ಹೈಕೋರ್ಟ್| ಕೊಠಡಿ, ಮೈದಾನ ವಿನಾಯ್ತಿ ಕೋರಿದ ಶಾಲೆಗೆ ಚಾಟಿ Read More »

ಎರಡು ಸಾವಿರ ನೋಟು ಬದಲಾವಣೆಗೆ ನಾಳೆ(ಅ.07) ಕೊನೇ ದಿನ|

ಸಮಗ್ರ ನ್ಯೂಸ್: 2,000 ರೂ.ಗಳ ನೋಟುಗಳನ್ನು ಇತರ ನೋಟುಗಳೊಂದಿಗೆ ಠೇವಣಿ ಮಾಡುವ ಅಥವಾ ವಿನಿಮಯ ಮಾಡಲು (ಅ.07) ನಾಳೆ ಕೊನೆಯ ದಿನವಾಗಿದೆ. ಮೇ 19ರಂದು ಈ ಬಗ್ಗೆ ಆರ್‌ಬಿಐ ಸುತ್ತೋಲೆ ಹೊರಡಿಸಿ ಸೆ.30ರೊಳಗೆ ನೋಟು ವಿನಿಮಯ ಮಾಡಿಕೊಳ್ಳುವಂತೆ ಮುನ್ಸೂಚನೆ ಕೊಟ್ಟಿದ್ದು, ಬಳಿಕ ಒಂದು ವಾರದ ಮಟ್ಟಿಗೆ ವಿಸ್ತರಿಸಿತ್ತು. ಅಕ್ಟೋಬರ್ 8ರ ನಂತರ 2 ಸಾವಿರ ರೂ ನೋಟುಗಳನ್ನು ಸ್ವೀಕರಿಸಿ ಅವುಗಳನ್ನು ಗ್ರಾಹಕರ ಖಾತೆಗೆ ಜಮೆ ಮಾಡುವುದು ಅಥವಾ ಬೇರೆ ಮುಖಬೆಲೆ ನೋಟುಗಳ ಜತೆ ವಿನಿಮಯ ಮಾಡುವುದನ್ನು ಬ್ಯಾಂಕುಗಳು

ಎರಡು ಸಾವಿರ ನೋಟು ಬದಲಾವಣೆಗೆ ನಾಳೆ(ಅ.07) ಕೊನೇ ದಿನ| Read More »