October 2023

ಕಟ್ಟಡ ಕಾರ್ಮಿಕರ ಸಂಘಟನೆ ವತಿಯಿಂದ ಅ. 9ರಂದು ಬೃಹತ್ ಪ್ರತಿಭಟನೆ

ಸಮಗ್ರ ನ್ಯೂಸ್: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹಲವು ಬದಲಾವಣೆಗಳು ಆಗುತ್ತಿದ್ದು ಸವಲತ್ತುಗಳನ್ನು ಕಡಿತಗೊಳಿಸುವ ಕಾರ್ಯಯೋಜನೆಯಾಗುತ್ತಿದೆ ಎಂದು ಮೂಲದಿಂದ ತಿಳಿದು ಬಂದಿದೆ. ಕಾರ್ಮಿಕರಿಗೆ ಅನ್ಯಾಯ ಎಸಗುವ ಸಕಲ ಯೋಜನೆಯು ಸಿದ್ಧವಾಗಿದೆ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಅನ್ನು ಕೂಡ ತಡೆ ಹಿಡಿದಿದೆ. ಕಟ್ಟಡ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುವ ಸಕಲ ಸಿದ್ಧತೆಯೇ ನಡೆದಿದೆ. ಆದ್ದರಿಂದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಅ. 3ರಂದು ಬೆಳಿಗ್ಗೆ ಘಂಟೆ 9.00 ಕ್ಕೆ ಸುಳ್ಯ ಖಾಸಗಿ ಬಸ್ ನಿಲ್ದಾಣದ […]

ಕಟ್ಟಡ ಕಾರ್ಮಿಕರ ಸಂಘಟನೆ ವತಿಯಿಂದ ಅ. 9ರಂದು ಬೃಹತ್ ಪ್ರತಿಭಟನೆ Read More »

ಯುವ ಸಿನಿಮಾ ಸೆಟ್​ಗೆ ನಿಖಿಲ್ ಭೇಟಿ

ಸಮಗ್ರ ನ್ಯೂಸ್: ಯುವ ರಾಜ್​ಕುಮಾರ್ ಮತ್ತು ನಿಖಿಲ್ ಕುಮಾರಸ್ವಾಮಿ ಪರಸ್ಪರ ಭೇಟಿ ಮಾಡಿ ಸಿನಿಮಾ ಇನ್ನಿತರೆ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಇಬ್ಬರ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.ಯುವ ರಾಜ್​ಕುಮಾರ್ ‘ಯುವ’ ಚಿತ್ರದ ಮೂಲಕ ಭರ್ಜರಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮೊದಲ ಸಿನಿಮಾ ಆಗಿದ್ದರೂ ಸಹ ಸ್ಟಾರ್ ನಟರ ಸಿನಿಮಾಗಳಿಗಿರುವಂತೆ ದೊಡ್ಡ ಮಟ್ಟದಲ್ಲಿ ಬಜ್ ಸೃಷ್ಠಿಯಾಗಿದೆ. ಯುವ ರಾಜ್​ಕುಮಾರ್ ಅವರ ಸಿನಿಮಾ ಸೆಟ್​ಗೆ ಸಹ ಒಬ್ಬರ ಹಿಂದೊಬ್ಬರು ಸ್ಟಾರ್ ನಟರು ಭೇಟಿ

ಯುವ ಸಿನಿಮಾ ಸೆಟ್​ಗೆ ನಿಖಿಲ್ ಭೇಟಿ Read More »

ಸುಳ್ಯ: ವಿದ್ಯುತ್ ಶಾಕ್ ಗೆ ಮಹಿಳೆ ಸಾವು

ಸಮಗ್ರ ನ್ಯೂಸ್: ವಿದ್ಯುತ್ ಶಾಕ್ ತಗುಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮರ್ಕಂಜ ಸಮೀಪದ ಬೊಮ್ಮಾರು ಬಳಿ ಸಂಭವಿಸಿದೆ. ಇಲ್ಲಿನ‌‌ ನೆಲ್ಲೂರು ಕೇಮ್ರಾಜೆ ಗ್ರಾಮದ ಬೊಮ್ಮಾರು ಬಾಬು ಕುಲಾಲ್ ಎಂಬವರ ಪತ್ನಿ ಲಲಿತಾ(55 ಪ್ರಾಯ) ಎಂಬವರೇ ಮೃತ ದುರ್ದೈವಿ. ಲಲಿತಾ ರವರು ದಿನಂಪ್ರತಿ ಮಲಗುವ ಸಮಯದಲ್ಲಿ‌ ಇನ್ವರ್ಟರ್ ಗೆ ವಿದ್ಯುತ್ ಸಂಪರ್ಕಿಸುವ ಪ್ಲಗ್ ನ್ನು ತೆಗೆದು ಮಲಗುತ್ತಿದ್ದರೆನ್ನಲಾಗಿದ್ದು, ನಿನ್ನೆ ರಾತ್ರಿಯೂ ಸುಮಾರು 10 ಗಂಟೆಯ ವೇಳೆಗೆ ಪ್ಲಗ್ ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದಿದೆ.

ಸುಳ್ಯ: ವಿದ್ಯುತ್ ಶಾಕ್ ಗೆ ಮಹಿಳೆ ಸಾವು Read More »

ಭಾರತದಲ್ಲಿ ಎಷ್ಟು ಜಾತಿಯ ಪಕ್ಷಿಗಳಿವೆ ಎಂದು ಯಾವತ್ತಾದರು ಯೋಚಿಸಿದ್ದೀರಾ?| ಹಾಗಾದ್ರೆ ಇದನ್ನು ಪೂರ್ತಿ ಓದಿ

ಸಮಗ್ರ ನ್ಯೂಸ್: ನಮ್ಮ ಸುತ್ತಮುತ್ತ ಅನೇಕ ಪಕ್ಷಿಗಳನ್ನು ನೋಡುತ್ತಲೇ ಇರುತ್ತೇವೆ. ಪ್ರಪಂಚದಾದ್ಯಂತ ವಿವಿಧ ಜಾತಿಯ ಪಕ್ಷಿಗಳು ಕಂಡುಬರುತ್ತವೆ. ಆದರೆ, ಭಾರತದಲ್ಲಿ ಎಷ್ಟು ಜಾತಿಯ ಪಕ್ಷಿಗಳು ಇರಬಹುದು ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಭಾರತದ ಝೂಲಾಜಿಕಲ್ ರ‍್ವೆ ಆಫ್ ಇಂಡಿಯಾ (ZSI) ಇತ್ತೀಚಿನ ಅಧ್ಯಯನವು ಈ ಬಗ್ಗೆ ಮಾಹಿತಿ ನೀಡಿದೆ. ಭಾರತದಲ್ಲಿ 28 ಜಾತಿಯ ಪಕ್ಷಿಗಳಿವೆ. ಝಡ್ಎಸ್ಐ ವಿಜ್ಞಾನಿ ಅಮಿತಾವ್ ಮಜುಂದಾರ್ ಅವರು, ಪ್ರಪಂಚವು 10,906 ಪಕ್ಷಿ ಪ್ರಭೇದಗಳ ಶ್ರೀಮಂತ ವೈವಿಧ್ಯತೆಯನ್ನು ಹೊಂದಿದೆ. ಅವುಗಳಲ್ಲಿ 1353 ಭಾರತದಲ್ಲಿವೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಎಷ್ಟು ಜಾತಿಯ ಪಕ್ಷಿಗಳಿವೆ ಎಂದು ಯಾವತ್ತಾದರು ಯೋಚಿಸಿದ್ದೀರಾ?| ಹಾಗಾದ್ರೆ ಇದನ್ನು ಪೂರ್ತಿ ಓದಿ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ನಕ್ಷತ್ರಗಳು ರಾಶಿಗಳು ಪ್ರಭಾವ ಬೀರುತ್ತವೆ. ಅವುಗಳ ಚಲನೆಯಿಂದಾಗಿ ನಮ್ಮ ದಿನನಿತ್ಯದ ಆಗುಹೋಗುಗಳು ಸಂಭವಿಸುತ್ತವೆ. ಈ ವಾರ ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರಿಗೆ ಅಶುಭ? ಎಂಬುದನ್ನು ತಿಳಿಯೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ 7ರಿಂದ 14ರವರೆಗಿನ ಭವಿಷ್ಯ ನೀಡಲಾಗಿದೆ. ಈ ವಾರ ದ್ವಾದಶ ರಾಶಿಗಳ ಗೋಚಾರಫಲ ಹೇಗಿರಲಿದೆ ಎಂದು ನೋಡೋಣ ಬನ್ನಿ: ಮೇಷ ರಾಶಿ:ಈ ವಾರ ನೀವು ಸೌಮ್ಯ ಸ್ವಭಾವದವರಂತೆ ತೋರುವಿರಿ. ನಿಮ್ಮ ನಡವಳಿಕೆಯು ಚರ್ಚೆಗೆ ಗ್ರಾಸವಾಗಬಹುದು. ಆರೋಗ್ಯದ ಬಗ್ಗೆ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಜಾತ್ರಾ ಸಮಯದಲ್ಲಿ ಕರ್ಕಶ ಮಾಡುವಂತಹ ಪಿಪಿಗಳನ್ನು ನಿಷೇಧ ಮಾಡುವಂತೆ ಕರವೇ ಒತ್ತಾಯ

ಸಮಗ್ರ ನ್ಯೂಸ್: ಜಾತ್ರಾ ಸಮಯದಲ್ಲಿ ಕರ್ಕಶ ಹಾಗೂ ಕಿರಿಕಿರಿ ಮಾಡುವಂತಹ ಪಿಪಿಗಳನ್ನು ನಿಷೇಧ ಮಾಡುವಂತೆ ಕರವೇ ಒತ್ತಾಯ. ಕಳೆದ ಬಾರಿ ಮಡಿಕೇರಿ ದಸರಾದ ಡಿಜೆ ಅಬ್ಬರದ ಮಧ್ಯೆ ಈ ರೀತಿಯ ಕರ್ಕಶ ಧ್ವನಿ ಮಾಡುವ ಪಿಪಿಗಳದೆ ಧ್ವನಿ ಹೆಚ್ಚಾಗಿದೆ. ಈ ಪಿಪಿಗಳ ಶಬ್ದ ಕೇಳಿ ಎಷ್ಟೋ ಜನ ಹಿಡಿ ಶಾಪ ಹಾಕುತ್ತಿರುವುದು ಕಂಡು ಬಂದಿತ್ತು. ಕೆಲವು ಮಹಿಳೆಯರು ಹಾಗೂ ಮಕ್ಕಳು ಹೋಗುವ ಸಮಯದಲ್ಲಿ ಕೆಲ ಪುಂಡ ಪೋಕರಿಗಳು ಈ ಪೀಪಿಯನ್ನು ಅವರ ಮುಖದ ಭಾಗದಲ್ಲಿ ಹಾಗೂ ಕಿವಿ

ಜಾತ್ರಾ ಸಮಯದಲ್ಲಿ ಕರ್ಕಶ ಮಾಡುವಂತಹ ಪಿಪಿಗಳನ್ನು ನಿಷೇಧ ಮಾಡುವಂತೆ ಕರವೇ ಒತ್ತಾಯ Read More »

ನಾಳೆ(ಅ.08) ಸುಳ್ಯದ ಐವರ್ನಾಡಿನಲ್ಲಿ ಸೌಜನ್ಯ ಪರ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನಾ ಸಭೆ

ಸಮಗ್ರ ನ್ಯೂಸ್: ಸೌಜನ್ಯ ಪರ ಹೋರಾಟ ಸಮಿತಿ ಐವರ್ನಾಡು ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ನಾಳೆ(ಅ.08) ಐವರ್ನಾಡಿನ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ, ತುಳು ಜಾನಪದ ವಾಗ್ಮಿ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಪ್ರಸನ್ನ ರವಿ, ಸೌಜನ್ಯಳ ತಾಯಿ ಕುಸುಮಾವತಿ, ನಿವೃತ್ತ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟನವರ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ನ್ಯಾಯಕ್ಕಾಗಿ ಸೌಜನ್ಯ ಹೋರಾಟ ಸಮಿತಿಯ ಸುಳ್ಯ

ನಾಳೆ(ಅ.08) ಸುಳ್ಯದ ಐವರ್ನಾಡಿನಲ್ಲಿ ಸೌಜನ್ಯ ಪರ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನಾ ಸಭೆ Read More »

ಮಂಗಳೂರು:ಜಿಎಸ್‌ಟಿ ಮಾಹಿತಿ ಕಾರ್ಯಾಗಾರ| ಸಂಪನ್ನ ರಾಷ್ಟ್ರ ನಿರ್ಮಾಣ ಸಹಕಾರ ಭಾರತಿ ಧ್ಯೇಯ- ಕೊಂಕೋಡಿ

ಸಮಗ್ರ ನ್ಯೂಸ್: ಪಾರದರ್ಶಿತ್ವದ ಜತೆ ಪ್ರಾಮಾಣಿಕ ಜನರ ಬಲದಿಂದ ಸಹಕಾರಿ ರಂಗವನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಕಾರ್ಯತತ್ಪರ ನಿಸ್ವಾರ್ಥ ಸಂಘಟನೆ ಸಹಕಾರ ಭಾರತಿ. ಸಹಕಾರಿ ಕ್ಷೇತ್ರದ ಸದೃಢತೆ ಮುಖೇನ ಸಂಪನ್ನ ರಾಷ್ಟ್ರ ನಿರ್ಮಾಣ ಸಹಕಾರ ಭಾರತಿಯ ಪ್ರಧಾನ ಧ್ಯೇಯ ಎಂದು ಕ್ಯಾಂಪ್ಕೋ ಮಾಜಿ ಅಧ್ಯಕ್ಷ, ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕೊಂಕೋಡಿ ಪದ್ಮನಾಭ ಹೇಳಿದರು. ಸಹಕಾರಿ ಭಾರತಿ ಮಹಾನಗರ ಜಿಲ್ಲೆ ಮಂಗಳೂರು ವತಿಯಿಂದ, ಅ.2ರಂದು ನಗರದ ಶರವು ಶ್ರೀ ಮಹಾಗಣಪತಿ ದೇಗುಲ ಬಳಿಯ ಬಾಲಂಭಟ್ ಸಭಾಂಗಣದಲ್ಲಿ ಸಂಪನ್ನಗೊಂಡ,

ಮಂಗಳೂರು:ಜಿಎಸ್‌ಟಿ ಮಾಹಿತಿ ಕಾರ್ಯಾಗಾರ| ಸಂಪನ್ನ ರಾಷ್ಟ್ರ ನಿರ್ಮಾಣ ಸಹಕಾರ ಭಾರತಿ ಧ್ಯೇಯ- ಕೊಂಕೋಡಿ Read More »

ಬೆಂಗಳೂರು: ಹೊತ್ತಿ ಉರಿದ ಪಟಾಕಿ ಅಂಗಡಿ| ಏಳು ಮಂದಿ ಸಾವು; ಐದು ಕೋಟಿಗೂ ಅಧಿಕ ನಷ್ಟ

ಸಮಗ್ರ ನ್ಯೂಸ್: ಲಾರಿಯಲ್ಲಿ ಪಟಾಕಿ ಅನ್​ಲೋಡ್ ಮಾಡುವಾಗ ಆಕಸ್ಮಿಕ ಬೆಂಕಿ ತಗುಲಿ ಪಟಾಕಿ ಅಂಗಡಿ ಹೊತ್ತಿ ಉರಿದಿದ್ದು, ಏಳು ಮಂದಿ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಶನಿವಾರ ಸಂಜೆ ವರದಿಯಾಗಿದೆ. ನವೀನ್ ಎಂಬುವರಿಗೆ ಸೇರಿದ ಪಟಾಕಿ ಮಳಿಗೆಯಲ್ಲಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಂಗಡಿಯೊಳಡೆ ಪರಿಶೀಲನೆ ನಡೆಸುವಾಗ, ಏಳು ಮೃತದೇಹಗಳು ಪತ್ತೆಯಾಗಿವೆ. ಮಳಿಗೆಯಲ್ಲಿ ಸುಮಾರು ಐದು ಕೋಟಿ ಮೌಲ್ಯದ ಪಟಾಕಿಗಳ ಸಂಗ್ರಹ ಇತ್ತು ಎನ್ನಲಾಗಿದೆ.

ಬೆಂಗಳೂರು: ಹೊತ್ತಿ ಉರಿದ ಪಟಾಕಿ ಅಂಗಡಿ| ಏಳು ಮಂದಿ ಸಾವು; ಐದು ಕೋಟಿಗೂ ಅಧಿಕ ನಷ್ಟ Read More »

ಇಸ್ರೇಲ್ ಮೇಲೆ ಹಮಾಸ್ ದಾಳಿ/ ನಾವು ಇಸ್ರೇಲ್ ಜೊತೆಗಿದ್ದೇವೆ ಎಂದ ನರೇಂದ್ರ ಮೋದಿ

ಸಮಗ್ರ ನ್ಯೂಸ್: ಇಸ್ರೇಲಿನ ಮೇಲೆ ಹಮಾಸ್ ನಡೆಸಿರುವ ಭಯೋತ್ಪಾದಕ ದಾಳಿಯಿಂದ ಆಘಾತವಾಗಿದ್ದು, ಈ ಸಂದರ್ಭದಲ್ಲಿ ಭಾರತ ಇಸ್ರೇಲಿನ ಜೊತೆಗೆ ಇರುತ್ತದೆ ಎಂದು ಭಾರತದ ಪ್ರಧಾನಿ ಮೋದಿ ಹೇಳಿದ್ದಾರೆ. ಪ್ಯಾಲೆಸ್ಟೈನ್ ನ ಸಶಸ್ತ್ರ ಗುಂಪು ಹಮಾಸ್ ಇಸ್ರೇಲಿನ ಮೇಲೆ ರಾಕೆಟ್ ದಾಳಿ ನಡೆಸಿದೆ. ಇದರಲ್ಲಿ 22 ಜನರು ಮೃತರಾಗಿದ್ದು, 500 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಇಸ್ರೇಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ನಮ್ಮ ಆಲೋಚನೆಗಳು ಮತ್ತು

ಇಸ್ರೇಲ್ ಮೇಲೆ ಹಮಾಸ್ ದಾಳಿ/ ನಾವು ಇಸ್ರೇಲ್ ಜೊತೆಗಿದ್ದೇವೆ ಎಂದ ನರೇಂದ್ರ ಮೋದಿ Read More »