October 2023

ಇಸ್ರೇಲ್-ಹಮಾಸ್ ಸಂಘರ್ಷ| ತೈಲ ಮಾರುಕಟ್ಟೆ ಮೇಲೆ ಕರಿನೆರಳು

ಸಮಗ್ರ ನ್ಯೂಸ್: ಪ್ರಸ್ತುತ ಇಸ್ರೇಲ್ ಮತ್ತು ಹಮಾಸ್‌ನಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಕಚ್ಛಾ ತೈಲ ಬೆಲೆಗಳ ಮೇಲೆ ವ್ಯಾಪಕವಾದ ಪರಿಣಾಮ ಬೀರಿದೆ. ಇಳಿಕೆ ಹಾದಿಯಲ್ಲಿದ್ದ ಕಚ್ಚಾ ತೈಲ ದರದ ಮೇಲೆ ಯುದ್ಧದ ಕರಿನೆರಳು ಬಿದ್ದಿದೆ. ಇಸ್ರೇಲ್ ಮತ್ತು ಹಮಾಸ್ ಉಗ್ರರ ಮಧ್ಯೆ ನಡೆಯುತ್ತಿರುವ ಯುದ್ಧವು ಸಾವು, ನೋವುಗಳ ಜೊತೆಗೆ ಅನೇಕ ನಷ್ಟಗಳನ್ನು ಉಂಟು ಮಾಡಿದೆ. ರಾಷ್ಟ್ರ-ರಾಷ್ಟ್ರಗಳ ನಡುವೆ ನಡೆಯುವ ಈ ವಿದ್ಯಮಾನ ಆ ದೇಶದ ಒಳಗೆ ಅಲ್ಲದೇ ಜಾಗತಿಕವಾಗಿ ಕೂಡ ಪರಿಣಾಮ ಬೀರುತ್ತದೆ. ಇದೊಂದು ಸಾಮಾನ್ಯ ಸಂಗತಿಯಾಗಿದೆ. ಅದರಲ್ಲೂ […]

ಇಸ್ರೇಲ್-ಹಮಾಸ್ ಸಂಘರ್ಷ| ತೈಲ ಮಾರುಕಟ್ಟೆ ಮೇಲೆ ಕರಿನೆರಳು Read More »

ಚಿಕ್ಕಮಗಳೂರು : ಪತ್ನಿಯ ಶೀಲ ಶಂಕಿಸಿ ಪತಿಯಿಂದ ಪತ್ನಿ ಕೊಲೆ

ಸಮಗ್ರನ್ಯೂಸ್: ಕುಡಿದ ಮತ್ತಿನಲ್ಲಿ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಶಂಕಿಸಿ ಪತಿಯೇ ಪತ್ನಿಯನ್ನ ಕೊಲೆಗೈದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ಅ.14 ರಂದು ನಡೆದಿದೆ. ಮೃತಳನ್ನ 40 ವರ್ಷದ ಪದ್ಮಾಕ್ಷಿ ಎಂದು ಗುರುತಿಸಲಾಗಿದ್ದು, ಕಿರಗುಂದ ಗ್ರಾಮದ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಚಂದ್ರ ಹಾಗೂ ಪದ್ಮಾಕ್ಷಿ ದಂಪತಿ ಮಧ್ಯೆ ಕುಡಿತ ಹಾಗೂ ಪದ್ಮಾಕ್ಷಿಯ ಅನೈತಿಕ ಸಂಬಂಧದ ಬಗ್ಗೆ ಗಲಾಟೆ ನಡೆಯುತ್ತಲೇ ಇತ್ತು. ಕಳೆದ ರಾತ್ರಿ ಕಂಠ ಪೂರ್ತಿ ಕುಡಿದು ಬಂದ ಪತಿ ಚಂದ್ರ ಪತ್ನಿ

ಚಿಕ್ಕಮಗಳೂರು : ಪತ್ನಿಯ ಶೀಲ ಶಂಕಿಸಿ ಪತಿಯಿಂದ ಪತ್ನಿ ಕೊಲೆ Read More »

ಚುನಾವಣಾ ಬಾಂಡ್/ ರಾಜಕೀಯ ಪಕ್ಷಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್

ಸಮಗ್ರ ನ್ಯೂಸ್: ದೇಶಾದ್ಯಂತ ತೀವ್ರ ವಿವಾದ, ಚರ್ಚೆಗೆ ಗ್ರಾಸವಾಗಿರುವ ಚುನಾವಣಾ ಬಾಂಡ್‌ ಪ್ರಕರಣಗಳ ವಿಚಾರಣೆಯನ್ನು,ಪಂಚ ರಾಜ್ಯಗಳಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಮೊದಲೇ ಸುಪ್ರೀಂ ಕೋರ್ಟ್‌ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ (Constitution Bench) ವರ್ಗಾಯಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್‌ 31ರಂದು ನಡೆಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಚುನಾವಣಾ ಬಾಂಡ್ ಯೋಜನೆಯನ್ನು 2017ರಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಹಣಕಾಸು ಕಾಯ್ದೆ ಹಾಗೂ

ಚುನಾವಣಾ ಬಾಂಡ್/ ರಾಜಕೀಯ ಪಕ್ಷಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ Read More »

ಗೆಸ್ಟ್​ ಫ್ಯಾಕಲ್ಟಿ ಹುದ್ದೆಗಳು ಖಾಲಿ ಇವೆ, ಇವತ್ತೇ ಲಾಸ್ಟ್​ ಡೇಟ್​

ಸಮಗ್ರ ಉದ್ಯೋಗ: Employees State Insurance Corporation Karnatakaನಲ್ಲಿ ಹುದ್ದೆಗಳು ಖಾಲಿ ಇವೆ. ಒಟ್ಟು 4 Guest Faculty​ ಖಾಲಿ ಇವೆ. ಕಲಬುರಗಿಯಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಂಕ್ಷಿಗಳಿಗೆ ಇದೊಂದು ಒಳ್ಳೆಯ ಅವಕಾಶ. ಅಕ್ಟೋಬರ್ 16, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಇನ್ನಷ್ಟು ಉದ್ಯೋಗದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.Education:ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂ.ಎಸ್ಸಿ, ಎಂ.ಎ, ಬಿ.ಎಡ್, ಎಂ.ಎಡ್

ಗೆಸ್ಟ್​ ಫ್ಯಾಕಲ್ಟಿ ಹುದ್ದೆಗಳು ಖಾಲಿ ಇವೆ, ಇವತ್ತೇ ಲಾಸ್ಟ್​ ಡೇಟ್​ Read More »

ಸಿಎಂ ಸಿದ್ದರಾಮಯ್ಯ ಕಲೆಕ್ಷನ್ ಮಾಸ್ಟರ್| ಬಿಜೆಪಿಯಿಂದ ಟೀಕಾಸ್ತ್ರ…

ಸಮಗ್ರ ನ್ಯೂಸ್: ಸಿಎಂ ಸಿದ್ದರಾಮಯ್ಯರನ್ನು ಕಲೆಕ್ಷನ್ ಮಾಸ್ಟರ್ ಎಂದು ಟೀಕಿಸಿ ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದೆ ಹಾಗೂ ಸಿಎಂ ಸಿದ್ದರಾಮಯ್ಯರ ಮತ್ತೊಂದು ಪೋಸ್ಟರ್ ರಿಲೀಸ್ ಮಾಡಿದೆ. ಕಲೆಕ್ಷನ್ ಮಾಸ್ಟರ್ ಎಂದು ಬರೆದಿರುವ ಬಜೆಟ್ ಸೂಟ್ ಕೇಸ್ ಹಿಡಿದುಕೊಂಡ ಸಿದ್ದರಾಮಯ್ಯ ಚಿತ್ರವನ್ನು ಬಿಜೆಪಿ ಪೋಸ್ಟ್ ಮಾಡಿದೆ. ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇಹಂತದ ₹1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು? ತೆಲಂಗಾಣ ಕಾಂಗ್ರೆಸ್ಗೆ ₹300 ಕೋಟಿ ಮಿಜೋರಾಂ ಕಾಂಗ್ರೆಸ್ಗೆ ₹100 ಕೋಟಿ ಛತ್ತಿಸ್ಗಢ ಕಾಂಗ್ರೆಸ್ಗೆ

ಸಿಎಂ ಸಿದ್ದರಾಮಯ್ಯ ಕಲೆಕ್ಷನ್ ಮಾಸ್ಟರ್| ಬಿಜೆಪಿಯಿಂದ ಟೀಕಾಸ್ತ್ರ… Read More »

ಇಸ್ರೇಲ್ – ಹಮಾಸ್ ಕದನ/ ಸಂತ್ರಸ್ತರನ್ನು ಭೇಟಿಯಾದ ನೆತನ್ಯಾಹು

ಸಮಗ್ರ ನ್ಯೂಸ್: ಗಾಜಾದಲ್ಲಿ ಬಂಧನಕ್ಕೊಳದಾವರ ಬಗ್ಗೆ ಸರ್ಕಾರವು ನಿರ್ಲಕ್ಷಿಸಿದೆ ಎಂಬ ಟೀಕೆಗಳು ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದ್ದಾರೆ. ಹಮಾಸ್ ಉಗ್ರರ ದಾಳಿಯಿಂದಾಗಿ 1300ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಅನೇಕರು ಗಾಯಗೊಂಡಿದ್ದಾರೆ. ಅದಲ್ಲದೇ ಅನೇಕ ಮಂದಿಯನ್ನು ಹಮಾಸ್ ಉಗ್ರರು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಇವರನ್ನು ಇಸ್ರೇಲ್ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಟೀಕೆಗಳು ಕೇಳಿ ಬಂದಿತ್ತು. ಇಂತಹ ಸಂದರ್ಭದಲ್ಲಿ ನೆತನ್ಯಾಹು ಮೊದಲ ಬಾರಿಗೆ ಸಂತ್ರಸ್ತರನ್ನು ಭೇಟಿಯಾಗಿದ್ದಾರೆ. ಭಾನುವಾರ ಸಂಜೆ ಇಸ್ರೇಲಿ ಒತ್ತೆಯಾಳುಗಳ

ಇಸ್ರೇಲ್ – ಹಮಾಸ್ ಕದನ/ ಸಂತ್ರಸ್ತರನ್ನು ಭೇಟಿಯಾದ ನೆತನ್ಯಾಹು Read More »

ಜಾಗತಿಕ ಸಮಯ ಪಾಲನೆ/ ಕೆಂಪೇಗೌಡ ವಿಮಾನ ಮೇಲ್ದಾಣಕ್ಕೆ ಅಗ್ರಸ್ಥಾನ

ಸಮಗ್ರ ನ್ಯೂಸ್: ಜಾಗತಿಕ ಮಟ್ಟದ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಾಗತಿಕ ಸಮಯ ಪಾಲನೆಯ ವಿಷಯದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಮೂರು ತಿಂಗಳಲ್ಲಿ ಸಾಲೇಕ್ ಸಿಟಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಿನ್ನಿಯಾಪೊಲೀಸ್ ಸೆಂಟ್ ಪಾಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲ್‌ಡೊರಾಡೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಾಗತಿಕವಾಗಿ ಉನ್ನತ ಸ್ಥಾನದಲ್ಲಿವೆ. ವಿಮಾನಗಳ ಆನ್ ಟೈಮ್ ನಿರ್ಗಮನ ಜುಲೈನಲ್ಲಿ ಶೇ. 87.51, ಆಗಸ್ಟ್‌ನಲ್ಲಿ ಶೇ.

ಜಾಗತಿಕ ಸಮಯ ಪಾಲನೆ/ ಕೆಂಪೇಗೌಡ ವಿಮಾನ ಮೇಲ್ದಾಣಕ್ಕೆ ಅಗ್ರಸ್ಥಾನ Read More »

ಪುತ್ತೂರು: ಈಜಲು ಹೋಗಿ ಕಣ್ಮರೆಯಾಗಿದ್ದ ಬಾಲಕ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಸ್ನೇಹಿತರೊಂದಿಗೆ ಹೊಳೆಗೆ ಈಜಲು ಇಳಿದ ವೇಳೆ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದ ಕೆಯ್ಯೂರು ಗ್ರಾಮದ ಎರಕ್ಕಲದ ಬಾಲಕನ ಮೃತದೇಹ ಇಂದು(ಅ16) ಬೆಳಗ್ಗೆ ಪತ್ತೆಯಾಗಿದೆ. ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಹಾಜಿ ಎಂಬವರ ಪುತ್ರ ತಸ್ಲೀಮ್ (17) ಮೃತ ಬಾಲಕ. ಇವರು ಸುಳ್ಯದ ಅರಂತೋಡಿನಲ್ಲಿರುವ ತನ್ನ ಅಜ್ಜಿ ಮನೆಯಲ್ಲಿದ್ದು, ಅಲ್ಲಿಂದ ಪಿಯು ಕಾಜೇಜಿಗೆ ಹೋಗುತ್ತಿದ್ದರು. ಕಾಲೇಜಿಗೆ ರಜೆ ಇದ್ದ ಕಾರಣ ಮನೆಗೆ ಬಂದಿದ್ದರು ಎನ್ನಲಾಗಿದೆ. ತಸ್ಲೀಮ್ ರವಿವಾರ ಸಂಜೆ ಸ್ನೇಹಿತರೊಂದಿಗೆ ಎರಕ್ಕಲ ಸಮೀಪದ ಗೌರಿ ಹೊಳೆಗೆ ಈಜಲು

ಪುತ್ತೂರು: ಈಜಲು ಹೋಗಿ ಕಣ್ಮರೆಯಾಗಿದ್ದ ಬಾಲಕ ಶವವಾಗಿ ಪತ್ತೆ Read More »

ಟೀಚಿಂಗ್​ ಹುದ್ದೆ ಖಾಲಿ ಇದೆ, ಬೇಗ ಅಪ್ಲೇ ಮಾಡಿ!

ಸಮಗ್ರ ಉದ್ಯೋಗ: University of Agriculture Sciences Dharwad ಖಾಲಿ ಇರೋ ಹುದ್ದೆಗೆ ಉದ್ಯೋಗಿಗಳನ್ನು ಆಹ್ವಾನಿಸುತ್ತಿದೆ. ಗುತ್ತಿಗೆ ಆಧಾರದ ಮೇಲೆ ಅಕೌಂಟೆನ್ಸಿ ವಿಭಾಗದಲ್ಲಿ ಶಿಕ್ಷಕ ಹುದ್ದೆಗೆ ನೇಮಕಾತಿ ನಡೆಸುತ್ತಾರೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಧಾರವಾಡದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಉದ್ಯೋಗದ ಕುರಿತಾಗಿ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ. Age:ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ Education:ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಅಧಿಸೂಚನೆ

ಟೀಚಿಂಗ್​ ಹುದ್ದೆ ಖಾಲಿ ಇದೆ, ಬೇಗ ಅಪ್ಲೇ ಮಾಡಿ! Read More »

ಮಡಿಕೇರಿ ದಸರಾ : ಮುಖವಾಡ ಮತ್ತು ಕರ್ಕಶ ಶಬ್ದ ಮಾಡುವ ತುತ್ತೂರಿ (ಪೀಪಿ) ಗಳಿಗೆ ಕಡಿವಾಣ

ಸಮಗ್ರ ನ್ಯೂಸ್: ಮುಖವಾಡ ಮತ್ತು ಕರ್ಕಷ ಧ್ವನಿ ಹೊರಡಿಸುವ ಎಲ್ಲಾ ಮಾದರಿಯ ತುತ್ತೂರಿ (ಪಿಪಿ) ಗಳನ್ನು ಈ ಬಾರಿ ಮಡಿಕೇರಿ ದಸರಾದಲ್ಲಿ ನಿಷೇಧಿಸಲಾಗಿದೆ. ಅದನ್ನು ಬಳಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮುಖವಾಡ ಮತ್ತು ಕರ್ಕಶ ಧ್ವನಿಯ ತುತ್ತೂರಿ( ಪಿಪಿ) ಗಳನ್ನು ಬಳಸುವವರ ವಿರುದ್ಧ ದಂಡ ವಿಧಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ. ಇದಲ್ಲದೇ ಇವುಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ತೆರವು ಮಾಡುವಂತೆಯೂ ಪೊಲೀಸರಿಗೆ ತಿಳಿಸಲಾಗಿದೆ ಎಂದು ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ

ಮಡಿಕೇರಿ ದಸರಾ : ಮುಖವಾಡ ಮತ್ತು ಕರ್ಕಶ ಶಬ್ದ ಮಾಡುವ ತುತ್ತೂರಿ (ಪೀಪಿ) ಗಳಿಗೆ ಕಡಿವಾಣ Read More »