October 2023

ಕರಾವಳಿಗರೇ ಎಚ್ಚರ… ವಾಯುಭಾರ ಕುಸಿತ, ಚಂಡಮಾರುತ ಭೀತಿ| ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಸಮಗ್ರ ನ್ಯೂಸ್: ಅರಬ್ಬಿ ಸಮುದ್ರದ ಲಕ್ಷದ್ವೀಪದ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಇದರಿಂದ ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮಂಗಳವಾರ ತಿಳಿಸಿದೆ. ಕರಾವಳಿ ಪ್ರದೇಶದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಂಗಳವಾರ ಮಧ್ಯಾಹ್ನದ ನಂತರ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಅಕ್ಟೋಬರ್ 16 ಮತ್ತು 17 ರಂದು ಸಂಜೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, […]

ಕರಾವಳಿಗರೇ ಎಚ್ಚರ… ವಾಯುಭಾರ ಕುಸಿತ, ಚಂಡಮಾರುತ ಭೀತಿ| ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ Read More »

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಗೌರವ ಡಾಕ್ಟರೇಟ್| ಬೆಂಗಳೂರು ವಿ.ವಿ ಘಟಿಕೋತ್ಸವದಲ್ಲಿ ಗೌರವಾರ್ಪಣೆ

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ. ಇಂದು(ಅಕ್ಟೋಬರ್ 17) ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 58ನೇ ವಾರ್ಷಿಕ ಘಟಿಕೋತ್ಸವದಲ್ಲಿ ದೇವೇಗೌಡ ಅವರಿಗೆ ಗೌರವ ಡಾಕ್ಟರೇಟ್ ನೀಡಿಲಾಗಿದೆ. ಇನ್ನು ದೇವೇಗೌಡ ಅವರು ಸಹ ಡಾಕ್ಟರೇಟ್ ಪದವಿ ಪಡೆದುಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ವಿದ್ಯೆ ಕಾಗದದ ಸರ್ಟಿಫಿಕೇಟ್ ಆಗಬಾರದು. ವಿದ್ಯೆ ಸಂಸ್ಕಾರವನ್ನು ಒಳಗೊಂಡಿರಬೇಕು. ಶಿಕ್ಷಣ ಪುಸ್ತಕ ಜ್ಞಾನ, ಅಕ್ಷರ

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಗೌರವ ಡಾಕ್ಟರೇಟ್| ಬೆಂಗಳೂರು ವಿ.ವಿ ಘಟಿಕೋತ್ಸವದಲ್ಲಿ ಗೌರವಾರ್ಪಣೆ Read More »

ಸುಳ್ಯ: ಕಲ್ಪಡ ಮೊವಪ್ಪೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕುಣಿತ ಭಜನೆ ಕಾರ್ಯಕ್ರಮ

ಸಮಗ್ರ ನ್ಯೂಸ್:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೊಡಿಯಾಲ ‘ಎ’ ಅಧ್ಯಕ್ಷರು ಪದಾಧಿಕಾರಿಗಳ ಸಹಕಾರದೊಂದಿಗೆ ಅ. 17ರಂದು ಕಲ್ಪಡ ಮೊವಪ್ಪೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ “ಕುಣಿತ ಭಜನೆ” ಕಾರ್ಯಕ್ರಮ ನಡೆಯಿತು. ದೇವಸ್ಥಾನ ಅರ್ಚಕ ಶಿವರಾಮ ಉಪಾಧ್ಯಯ ಅವರು ದೇವರ ಸ್ತುತಿ ಮೂಲಕ ಉದ್ಘಾಟನೆ ಮಾಡಿದರು. ಬೆಳ್ಳಾರೆ ವಲಯ ಮೇಲ್ವಿಚಾರಕ ಗೋಪಾಲಕೃಷ್ಣ ಪ್ರಸ್ತಾವಿಕ ವಾಗಿ ಮಾತನಾಡಿದರು. ತರಬೇತಿ ಪಡೆಯುವ 23 ಮಕ್ಕಳು ಭಾಗವಹಿಸಿದರು. ಈ ಸಂಧರ್ಭದಲ್ಲಿ ಕುಣಿತ ಭಜನೆ ತರಬೇತುದಾರ

ಸುಳ್ಯ: ಕಲ್ಪಡ ಮೊವಪ್ಪೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕುಣಿತ ಭಜನೆ ಕಾರ್ಯಕ್ರಮ Read More »

ಸುಬ್ರಹ್ಮಣ್ಯ: ಕಿಕು ಬೇಕ್ಸ್ ಅ.18ರಂದು ಶುಭಾರಂಭ

ಸಮಗ್ರ ನ್ಯೂಸ್: ಕಿಕು ಬೇಕ್ಸ್ ಅ.18ರಂದು ಸುಬ್ರಹ್ಮಣ್ಯದ ಕುಲ್ಕುಂದ ಶಿವಗಿರಿ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ. ಜೋಮಿನ್ ವೇಶ್ನಾಲ್ ಮಾಲಕತ್ವದ ಕಿಕು ಬೇಕ್ಸ್ ದ.ಕ. ಜಿಲ್ಲೆಯ ಮಾಜಿ ಸೈನಿಕ ಸಂಘದ ಜಿಲ್ಲಾ ಅಧ್ಯಕ್ಷ ಜೆ.ಪಿ.ಎಂ. ಚೇರಿಯನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲೆಯ ಮಾಜಿ ಸೈನಿಕ ಸಂಘದ ಗೌರವ ಅಧ್ಯಕ್ಷ ವಾಸುದೇವ ಗೌಡ ಭಾಗವಹಿಸಲಿದ್ದಾರೆ. ನೆಟ್ಟಣ ಸಂತ ಮಾರಿಯಮ್ಮನವರ ದೇವಾಲಯದ ಧರ್ಮ ಗುರು ಪ.ಪೂ. ಆದರ್ಶ ಪಿ. ಜೋಸೆಫ್ ಅವರ ಆಶೀರ್ವಚನದಲ್ಲಿ ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ತರಹದ ವಿಧ ವಿಧ

ಸುಬ್ರಹ್ಮಣ್ಯ: ಕಿಕು ಬೇಕ್ಸ್ ಅ.18ರಂದು ಶುಭಾರಂಭ Read More »

ಕೊಟ್ಟಿಗೆಹಾರ: ಲಾರಿ ಮುಖಾಮುಖಿ ಡಿಕ್ಕಿ| ಚಾಲಕರಿಗೆ ಗಂಭೀರ ಗಾಯ     

ಸಮಗ್ರ ನ್ಯೂಸ್: ಕೊಟ್ಟಿಗಾರ ಸುತ್ತಮುತ್ತ ಅ. 16ರಂದು ಮೂರು ಗಂಟೆಯಿಂದ ಮಳೆ ಹಾಗೂ ಮಂಜು ಮುಸುಕಿನ ವಾತಾವರಣದಿಂದ ಕೊಟ್ಟಿಗೆಹಾರದ ಹೋಟೆಲ್ ದರ್ಬಾರ್ ಬಳಿ ಗ್ಯಾಸ್ ಲಾರಿ ಹಾಗೂ ಎಳನೀರು ತುಂಬಿದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಎಳನೀರು ಲಾರಿ ರಸ್ತೆಗೆ ಪಲ್ಟಿಯಾಗಿದೆ.  ಮೂಡಿಗೆರೆ ಕಡೆಯಿಂದ ಎಳನೀರು ಲಾರಿ ಮಂಗಳೂರು ಕಡೆಯಿಂದ ಬರುತ್ತಿದ್ದ ಗ್ಯಾಸ್ ಲಾರಿಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎಳನೀರು ಲಾರಿ ರಸ್ತೆಗೆ ಪಲ್ಟಿಯಾಗಿ ಎಳನೀರು ರಸ್ತೆಯ ಬದಿಗೆ ಬಿದ್ದಿವೆ. ಎರಡೂ ವಾಹನದ ಚಾಲಕರಿಗೆ ಗಾಯವಾಗಿದ್ದು ಅವರನ್ನು

ಕೊಟ್ಟಿಗೆಹಾರ: ಲಾರಿ ಮುಖಾಮುಖಿ ಡಿಕ್ಕಿ| ಚಾಲಕರಿಗೆ ಗಂಭೀರ ಗಾಯ      Read More »

ಉಡುಪಿ: ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ| ಕೊಲೆ ಶಂಕೆ

ಸಮಗ್ರ ನ್ಯೂಸ್: ಉಡುಪಿಯ ಕರಾವಳಿ ಹೋಟೆಲಿನ ಆವರಣದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮೇಲ್ನೋಟಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಅಧಿಕಾರಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಕೆಎಂಸಿ ಮಣಿಪಾಲ ಹಾಗೂ ಮಂಗಳೂರಿನ ನ್ಯಾಯ ವಿಜ್ಞಾನ ಪ್ರಯೋಗಾಲಯದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹರಿತವಾದ ಆಯುಧದಿಂದ ವ್ಯಕ್ತಿಯ ಬಲ ಕೈ ಕಡಿದಿದ್ದು ತೀವ್ರ ರಕ್ತಸ್ರಾವದಿಂದ ಮೃತಪಟ್ಟಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಉಡುಪಿ ಠಾಣೆಯಲ್ಲಿ ಈ

ಉಡುಪಿ: ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ| ಕೊಲೆ ಶಂಕೆ Read More »

ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸರ್ಕಾರಿ ಉದ್ಯೋಗ ಮಾಡುವ ಕನಸು ನಿಮ್ಮದೇ? ಇಲ್ಲಿದೆ ನಿಮಗಾಗಿ ಅವಕಾಶ

ಸಮಗ್ರ ಉದ್ಯೋಗ:ಉದ್ಯೋಗ ಹುಡುಕುತ್ತಾ ಇದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಒಂದಷ್ಟು ಸಲಹೆಗಳು. ಫಾಲೋ ಮಾಡಿ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ವಿಭಾಗವಾದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC), ವಿಜ್ಞಾನಿ/ಎಂಜಿನಿಯರ್-SD ಮತ್ತು ವಿಜ್ಞಾನಿ/ಎಂಜಿನಿಯರ್-SC ಪಾತ್ರಗಳಿಗೆ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ vssc.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ISRO VSSC ನೇಮಕಾತಿಗೆ ಅರ್ಜಿಯ ಅಂತಿಮ ದಿನಾಂಕ ಜುಲೈ 21 ಆಗಿದೆ, ಇದು 61 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಜಿದಾರರು ತಮ್ಮ

ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸರ್ಕಾರಿ ಉದ್ಯೋಗ ಮಾಡುವ ಕನಸು ನಿಮ್ಮದೇ? ಇಲ್ಲಿದೆ ನಿಮಗಾಗಿ ಅವಕಾಶ Read More »

2 ಲಕ್ಷ ಸಂಬಳದ ಉದ್ಯೋಗ ಖಾಲಿ ಇದೆ! ಬೇಗ ಅರ್ಜಿ ಹಾಕಿ

ಸಮಗ್ರ ಉದ್ಯೋಗ: National Highway Authority of India ಖಾಲಿ ಹುದ್ದೆಗಳಿವೆ, ಆಸಕ್ತರು ಅರ್ಜಿ ಹಾಕಿ. ಒಟ್ಟು 1 Chief General Manager ಹುದ್ದೆ ಖಾಲಿ ಇದೆ. ಅಭ್ಯರ್ಥಿಗಳು ಆನ್​ಲೈನ್ & ಆಫ್​ಲೈನ್ ಮೂಲಕ ಅರ್ಜಿ ಹಾಕಬಹುದು. ಇನ್ನಷ್ಟು ಮಾಹಿತಿ ಇಲ್ಲಿದೆ. Education:ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿ:ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ

2 ಲಕ್ಷ ಸಂಬಳದ ಉದ್ಯೋಗ ಖಾಲಿ ಇದೆ! ಬೇಗ ಅರ್ಜಿ ಹಾಕಿ Read More »

ರಾಮನಗರಿಯಲ್ಲಿ ದೀಪೋತ್ಸವ/ ವಿಶ್ವದಾಖಲೆಯ 21 ಲಕ್ಷ ದೀಪಗಳಿಂದ ಬೆಳಗಲಿದೆ ಅಯೋಧ್ಯಾ

ದೀಪಾವಳಿಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ದೀಪೋತ್ಸವದ ಮೇಲೆ ಜಗತ್ತೇ ಕಣ್ಣು ಹಾಯಿಸುತ್ತಿದ್ದು, ಈ ಸಲ 21 ಲಕ್ಷ ದೀಪಗಳನ್ನು ಬೆಳಗಿಸಲು ಯೋಜನೆ ತಯಾರಿಸಲಾಗಿದೆ. ಇದಕ್ಕಾಗಿ 3 ಕೋಟಿ 70 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಇದು ವಿಶ್ವದಾಖಲೆಯನ್ನು ನಿರ್ಮಿಸಲಿದೆ. ಕಳೆದ ಬಾರಿ ದಾಖಲೆಯ 15 ಲಕ್ಷ ದೀಪಗಳನ್ನು ಉರಿಸಲಾಗಿದ್ದು, ಈ ಬಾರಿ ವಿಶ್ವದಾಖಲೆಯ 21 ಲಕ್ಷ ದೀಪಗಳನ್ನು ಉರಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಆರು ಭಾಗಗಳಲ್ಲಿ ದೀಪೋತ್ಸವಕ್ಕೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಸಾಮಗ್ರಿಗಳ ಖರೀದಿ ಪ್ರಕ್ರಿಯೆ ಆರಂಭಗೊಂಡಿದೆ. ಇದರ

ರಾಮನಗರಿಯಲ್ಲಿ ದೀಪೋತ್ಸವ/ ವಿಶ್ವದಾಖಲೆಯ 21 ಲಕ್ಷ ದೀಪಗಳಿಂದ ಬೆಳಗಲಿದೆ ಅಯೋಧ್ಯಾ Read More »

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ| ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸಮಗ್ರ ನ್ಯೂಸ್: ದೇಶದಲ್ಲಿ ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ್ದು, ಐವರು ಜಡ್ಜ್‌ಗಳ ಸಾಂವಿಧಾನಿಕ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಭಾರತದಲ್ಲಿ ಸಲಿಂಗ ವಿವಾಹಗಳನ್ನು ಕಾನೂನು ಬದ್ಧಗೊಳಿಸುವ ಬಗ್ಗೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಐವರು ಜಡ್ಜ್‌ಗಳ ಸಾಂವಿಧಾನಿಕ ಪೀಠವು 10 ದಿನಗಳ ವಿಚಾರಣೆಯ ನಂತರ ಈ ವರ್ಷ

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ| ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು Read More »