October 2023

ಉಡುಪಿ: ಸ್ನಾನಕ್ಕೆ ನದಿಗೆ ತೆರಳಿದ್ದ ಇಬ್ಬರು ನೀರುಪಾಲು

ಸಮಗ್ರ ನ್ಯೂಸ್: ನದಿಗೆ ಸ್ನಾನಕ್ಕೆಂದು ಹೋದ ಇಬ್ಬರು ನೀರು ಪಾಲಾದ ಘಟನೆ ಉಡುಪಿಯ ಹೆಬ್ರಿ ಸಮೀಪದ ಕಬ್ಬಿನಾಲೆ ಮತ್ತಾವು ಎಂಬಲ್ಲಿ ಅ. 21ರಂದು ನಡೆದಿದೆ. ಕರ್ಜೆ ನಿವಾಸಿ ಉಮೇಶ್ ಶೆಟ್ಟಿ (48) ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿ ಚಾರ ಹುರ್ತುರ್ಕೆ ನಿವಾಸಿ ಪ್ರಸ್ತುತ್ ಹೆಗ್ಡೆ (21) ಅ. 21ರಂದು ಸಂಜೆ 3 ಗಂಟೆಗೆ ಸ್ನಾನಕ್ಕೆ ಹೋದವರು ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಸ್ನಾನಕ್ಕೆ ನದಿಗೆ ತೆರಳಿದ್ದ ಇಬ್ಬರು ನೀರುಪಾಲು Read More »

ಸರ್ಕಾರಿ ಕೆಲಸ ಹುಡುಕುತ್ತಾ ಇರುವವರಿಗೆ ಗುಡ್ ನ್ಯೂಸ್! ಬೇಗ ಜಾಬ್ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: Karnataka Health Promotion Trust ಹುದ್ದೆಗೆ ಆಹ್ವಾನಿಸುತ್ತಿದೆ. ಒಟ್ಟು 1 ಬ್ಲಾಕ್​ ಕೋಆರ್ಡಿನೇಟರ್​ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ. ಇ-ಮೇಲ್ ಮಾಡುವ ಮೂಲಕ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಬಹುದು. ಇನ್ನಷ್ಟು ಮಾಹಿತಿ ನಿಮಗಾಗಿ. Education:ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. Salary: ತಿಳಿಸಿಲ್ಲ Job place:ತುಮಕೂರು

ಸರ್ಕಾರಿ ಕೆಲಸ ಹುಡುಕುತ್ತಾ ಇರುವವರಿಗೆ ಗುಡ್ ನ್ಯೂಸ್! ಬೇಗ ಜಾಬ್ ಅಪ್ಲೈ ಮಾಡಿ Read More »

ಮಡಿಕೇರಿ ದಸರಾ|ಅಲಂಕಾರ ಸ್ಪರ್ಧೆ

ಸಮಗ್ರ ನ್ಯೂಸ್: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಈ ಬಾರಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ಈಗಾಗಲೇ ಮಡಿಕೇರಿ ದಸರಾ ಅಲಂಕಾರ ಸಮಿತಿ ವತಿಯಿಂದ ರಂಗೋಲಿ ಸ್ಪರ್ಧೆಯ ತೀರ್ಪುಗಾರಿಕೆ ಹಾಗೂ ಮನೆಗಳಲ್ಲಿ ಗೊಂಬೆ ಜೋಡಣೆಯ ತೀರ್ಪುಗಾರಿಕೆ ಮುಗಿದಿದ್ದು ಇವುಗಳ ಬಹುಮಾನವನ್ನು ಆಯುಧ ಪೂಜೆಯ ದಿನದಂದು ಘೋಷಣೆ ಮಾಡಲಾಗುವುದು. ಆಯುಧ ಪೂಜೆ ದಿನವಾದ ಅ. 23ರಂದು ಅಲಂಕೃತ ವಾಹನಗಳು ಸಂಜೆ 6:30 ಗಂಟೆ ಒಳಗೆ ಗಾಂಧಿ ಮೈದಾನಕ್ಕೆ ಬರಬೇಕು ತೀರ್ಪುಗಾರರು ಸ್ಥಳಕ್ಕೆ ಆಗಮಿಸಿ ಆಕರ್ಷಕ ವಾಹನಗಳನ್ನು ಬಹುಮಾನಕ್ಕಾಗಿ ವಿವಿಧ ವಿಭಾಗಗಳಲ್ಲಿ ಆಯ್ಕೆಮಾಡಲಾಗಿದೆ.

ಮಡಿಕೇರಿ ದಸರಾ|ಅಲಂಕಾರ ಸ್ಪರ್ಧೆ Read More »

ಶಿವಮೊಗ್ಗ ಜಿಲ್ಲಾ ಪಂಚಾಯತ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಹೈರಿಂಗ್ ಮಾಡ್ತಾ ಇದೆ, ಬೇಗ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: Shivamogga Zilla Panchayat ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 16 ಡೇಟಾ ಎಂಟ್ರಿ ಆಪರೇಟರ್, ಟೆಕ್ನಿಷಿಯನ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 3, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು. ಹುದ್ದೆಯ ಮಾಹಿತಿ:ಡೇಟಾ ಎಂಟ್ರಿ ಆಪರೇಟರ್ – 3ಟೆಕ್ನಿಷಿಯನ್ ಅಸಿಸ್ಟೆಂಟ್ (ಫಾರೆಸ್ಟ್ರಿ)- 4ಟೆಕ್ನಿಷಿಯನ್ ಅಸಿಸ್ಟೆಂಟ್ (ಅಗ್ರಿಕಲ್ಚರ್)- 3ಟೆಕ್ನಿಷಿಯನ್ ಅಸಿಸ್ಟೆಂಟ್ (ಹಾರ್ಟಿಕಲ್ಚರ್)- 4ಟೆಕ್ನಿಷಿಯನ್ ಅಸಿಸ್ಟೆಂಟ್

ಶಿವಮೊಗ್ಗ ಜಿಲ್ಲಾ ಪಂಚಾಯತ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಹೈರಿಂಗ್ ಮಾಡ್ತಾ ಇದೆ, ಬೇಗ ಅಪ್ಲೈ ಮಾಡಿ Read More »

ಪುತ್ತೂರು: MLA ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ| ಪುತ್ತಿಲ ಪರಿವಾರದ ಮುಖಂಡ ರಾಜಶೇಖರ ವಿರುದ್ಧ FIR

ಸಮಗ್ರ ನ್ಯೂಸ್: ಬಿಜೆಪಿಯಲ್ಲಿ ಎಂ. ಎಲ್. ಎ. ಟಿಕೆಟ್ ಕೊಡಿಸುವುದಾಗಿ ಸಿ. ಶಿವಮೂರ್ತಿ ಎಂಬ ವ್ಯಕ್ತಿಗೆ ನಂಬಿಸಿ, ರಾಜ್ ಶೇಖರ್ ತನ್ನ ಖಾತೆಗೆ ಎರಡು ಕೋಟಿಗೂ ಅಧಿಕ ಹಣ ವರ್ಗಾವಣೆ ಮಾಡಿಸಿಕೊಂಡು, ಸುಮಾರು ಒಟ್ಟು 2.50 ಕೋಟಿ ರೂಪಾಯಿ ವಂಚನೆ ಮಾಡಿದ ಬಗ್ಗೆ ವಿಜಯನಗರ ಪೋಲೀಸರಿಗೆ ಈಗ ದೂರು ನೀಡಿದ್ದಾರೆ. ಹಾಗೂ ಬೆಂಗಳೂರಿನ‌ಲ್ಲಿ ಪೋಲೀಸ್ ಮಹಾನಿರ್ದೇಶಕರು, ಸನ್ಮಾನ್ಯ ಮುಖ್ಯಮಂತ್ರಿಗಳಿಗೂ ದೂರು ನೀಡಿದ್ದಾರೆ. ಸಿದ್ದಲಿಂಗಪ್ಪ ಎಂಬ ವ್ಯಕ್ತಿಗೆ ವಿಜಯನಗರ ಜಿಲ್ಲೆಯ ಹರಿಗಬೊಮ್ಮನ ಹಳ್ಳಿಯ ಎಂಬ‌ ಮೀಸಲು ವಿಧಾನಸಭಾ ಕ್ಷೇತ್ರದ

ಪುತ್ತೂರು: MLA ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ| ಪುತ್ತಿಲ ಪರಿವಾರದ ಮುಖಂಡ ರಾಜಶೇಖರ ವಿರುದ್ಧ FIR Read More »

ಸುಳ್ಯ: ಕನಕಮಜಲು ಸ್ವರ್ಣ ಮಹಿಳಾ ಮಂಡಲದ ಆಶ್ರಯದಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ

ಸಮಗ್ರ ನ್ಯೂಸ್: ಸುಳ್ಯದ ಕನಕಮಜಲು ಸ್ವರ್ಣ ಮಹಿಳಾ ಮಂಡಲ ಇದರ ಆಶ್ರಯದಲ್ಲಿ ಕನಕಮಜಲು ಶ್ರೀ ಆತ್ಮರಾಮ ಭಜನಾ ಮಂದಿರದ ಸಭಾಭವನದಲ್ಲಿ ಅ. 21 ರಂದು ಆರೋಗ್ಯ ಅರಿವು ಕಾರ್ಯಕ್ರಮ ನಡೆಯಿತು. ಸುಳ್ಯ ವಿಧಾನಸಭಾ ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಸ್ವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕುಸುಮ ಶೇಷಪ್ಪ ಅಡ್ಕಾರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನಕಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದ ಉಗ್ಗಮೂಲೆ, ಸುಳ್ಯ ಆರೋಗ್ಯ ಇಲಾಖೆ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ.

ಸುಳ್ಯ: ಕನಕಮಜಲು ಸ್ವರ್ಣ ಮಹಿಳಾ ಮಂಡಲದ ಆಶ್ರಯದಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ Read More »

Health Tips|ಆರೋಗ್ಯಕರ ಸೌತೆಕಾಯಿ ಜ್ಯೂಸ್ ಮಾಡೋದು ಹೇಗೆ? ಇದರಿಂದ ಆಗುವ ಪ್ರಯೋಜನಗಳೇನು?

ಸಮಗ್ರ ನ್ಯೂಸ್: ಸೌತೆಕಾಯಿ ರಸದ ಸರಿಯಾದ ಪ್ರಯೋಜನವನ್ನು ಪಡೆಯಲು, ನೀವು ಅರ್ಧ ಇಂಚಿನ ಶುಂಠಿ, ನಿಂಬೆರಸ, ಒಂದು ಹಿಡಿಯಷ್ಟು ಕೊತ್ತಂಬರಿ ಸೊಪ್ಪು, ಒಂದು ಹಿಡಿಯಷ್ಟು ಪುದೀನಾ, ರುಚಿಗೆ ತಕ್ಕಂತೆ ಉಪ್ಪು, ಒಂದು ಚಮಚ ಜೇನುತುಪ್ಪ ಮತ್ತು ಎರಡು ಕಪ್ ನೀರು ಸೇರಿಸಿ ಮಿಕ್ಸ್ ಮಾಡಬೇಕು. ಹೀಗೆ ಮಾಡಿದ ಆರೋಗ್ಯಕರ ಸೌತೆಕಾಯಿ ಜ್ಯೂಸ್ ಅನ್ನು ಕುಡಿದರೆ ನಿಮ್ಮ ಆರೋಗ್ಯದಲ್ಲಿ ಉತ್ತಮ ಲಾಭವನ್ನು ಕಾಣಬಹುದು. ಇದರಿಂದ ದೇಹವು ಹೈಡ್ರೇಟ್ ಆಗಿ ಉಳಿಯುತ್ತದೆ ಮತ್ತು ನಿಮ್ಮ ಚರ್ಮವೂ ಹೊಳೆಯುತ್ತದೆ. ಈ ಜ್ಯೂಸ್

Health Tips|ಆರೋಗ್ಯಕರ ಸೌತೆಕಾಯಿ ಜ್ಯೂಸ್ ಮಾಡೋದು ಹೇಗೆ? ಇದರಿಂದ ಆಗುವ ಪ್ರಯೋಜನಗಳೇನು? Read More »

ದ್ವಾದಶ ‌ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಅಕ್ಟೋಬರ್ 22ರಿಂದ 28ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ. ಮೇಷ: ಆಶ್ವೀಜ ಮಾಸ ಶುಕ್ಲ ಪಕ್ಷವು ಆರಂಭವಾಗಿ ಸಪ್ತರಾತ್ರಿಗಳು ಕಳೆದು, ದುರ್ಗಾಷ್ಟಮಿ, ಮಹಾನವಮಿ, ದಶಮಿಯೊಂದಿಗೆ ಶರನ್ನವರಾತ್ರಿ ಸಂಪನ್ನಗೊಳ್ಳುತ್ತದೆ. ಅಷ್ಟಮಿ, ನವಮಿ, ಚತುರ್ದಶಿಯು ದೇವಿ ಆರಾಧನೆಗೆ ಅತ್ಯುತ್ತಮ ಕಾಲವೆಂದು ಶಾಸ್ತ್ರಗಳು ಹೇಳುತ್ತವೆ. ದುರ್ಗಾಪೂಜೆ, ಹವನ, ನವಮಿಯಂದು ಚಂಡಿಕಾ ಪಾರಾಯಣ ಮಾಡಿ. ದೈವಭಕ್ತಿಯಿಂದ ಒಳ್ಳೆಯ ಕಾಲ ಮೂಡಿಬರುತ್ತದೆ. ಅಶ್ವಿನಿ ನಕ್ಷತ್ರದವರು ಹೆಚ್ಚಿನ ದೈವಭಕ್ತಿ, ಶ್ರದ್ಧೆಯಿಂದ

ದ್ವಾದಶ ‌ರಾಶಿಗಳ ವಾರಭವಿಷ್ಯ Read More »

ನವರಾತ್ರಿ ನವದುರ್ಗೆ| ದುರ್ಗಾಷ್ಟಮಿ ದಿನ ಮಹಾಗೌರಿ ಪೂಜೆ ಹೇಗೆ?| ಆರಾಧನೆ, ಮಹತ್ವದ ಬಗ್ಗೆ ತಿಳಿಯೋಣ…

ಸಮಗ್ರ ವಿಶೇಷ: ನವರಾತ್ರಿ 8ನೇ ದಿನವೇ ದುರ್ಗಾಷ್ಟಮಿ. ಈ ದಿನದಂದು, ದುರ್ಗಾ ದೇವಿಯ 8ನೇ ರೂಪವಾದ ಮಹಾಗೌರಿ ರೂಪವನ್ನು ಪೂಜಿಸಲಾಗುತ್ತದೆ. ಶಾರದೀಯ ನವರಾತ್ರಿ 2023 ರ 8ನೇ ದಿನವು ಅಕ್ಟೋಬರ್‌ 22 ರಂದು ಭಾನುವಾರ ಬಂದಿದೆ. ಈ ದಿನ ಮಹಾಗೌರಿಯ ಆರಾಧನೆಯನ್ನು ಮಾಡಲಾಗುತ್ತದೆ. ಈ ದಿನ ಕನ್ಯಾ ಪೂಜೆಯನ್ನು ಸಹ ನಡೆಸಲಾಗುತ್ತದೆ. ಪಾರ್ವತಿ ದೇವಿಯು ಮನುಷ್ಯರ ಅವತಾರ ಎತ್ತಿ ಭೂಮಿಯಲ್ಲಿ ಜನಿಸಿದಳು. ಶಿವನ್ನು ಪಡೆಯುವುದು ಆ ಜನ್ಮದಲ್ಲಿ ಅವಳ ಗುರಿಯಾಗಿರುತ್ತದೆ. ನಾರದ ಮಹರ್ಷಿಗಳ ಸಲಹೆಯ ಮೇರೆಗೆ ಸುದೀರ್ಘ

ನವರಾತ್ರಿ ನವದುರ್ಗೆ| ದುರ್ಗಾಷ್ಟಮಿ ದಿನ ಮಹಾಗೌರಿ ಪೂಜೆ ಹೇಗೆ?| ಆರಾಧನೆ, ಮಹತ್ವದ ಬಗ್ಗೆ ತಿಳಿಯೋಣ… Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಶಾರದಾ ಪೂಜೆ, ಆಯುಧ ಪೂಜೆ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದಲ್ಲಿ ಕಾಲೇಜಿನ ವಿದ್ಯಾರ್ಥಿ ಪರಿಷತ್ತಿನ ವತಿಯಿಂದ ಅ. 21ರಂದು ಶಾರದಾ ಪೂಜೆ ಹಾಗೂ ಆಯುಧ ಪೂಜೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 10 ಗಂಟೆಯಿಂದ 12ರ ವರೆಗೆ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪ್ರತಿ ವಿದ್ಯಾರ್ಥಿಗಳಿಂದ ತರಲ್ಪಟ್ಟ ಪುಸ್ತಕಗಳಿಗೆ ಪೂಜೆಯನ್ನು ನೆರವೇರಿಸಲಾಯಿತು. ನಂತರ ಕಾಲೇಜಿನ ಗ್ರಂಥಾಲಯ, ಪ್ರಯೋಗಾಲಯ ಹಾಗೂ ಜಿಮ್ ಗಳಿಗೆ ಪೂಜೆ ಮಾಡಲಾಯಿತು. ಕಾಲೇಜಿನ ಆಯುಧಗಳಿಗೆ ಪೂಜೆಯನ್ನು ಪೂರ್ಣಗೊಳಿಸಿ, ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ವಾಹನಗಳಿಗೆ ಪೂಜೆ ಮಾಡಿ, ಎಲ್ಲರಿಗೂ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಶಾರದಾ ಪೂಜೆ, ಆಯುಧ ಪೂಜೆ Read More »