Ad Widget .

ಸುಳ್ಯ: ಯುವಕರನ್ನೇ ನಾಚಿಸುವಂತೆ ಪದಕ ಗೆದ್ದ ಧರ್ಮಗುರು| ಕಂಚು‌ ಗೆದ್ದ ಸಂತಸದಲ್ಲಿ ಫಾದರ್ ರೆ.ಫಾ ವಿಕ್ಟರ್

ಸಮಗ್ರ ನ್ಯೂಸ್: ಸಾಧನೆಗೆ ಯಾರ ಹಂಗಿಲ್ಲ. ವಯಸ್ಸಿನ ಮಿತಿಯೂ ಇರುವುದಿಲ್ಲ ಅನ್ನುವುದಕ್ಕೆ ಸುಳ್ಯದ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಸಂಚಾಲಕ ಹಾಗೂ ಸೈಂಟ್ ಬ್ರಿಜಿಡ್ಸ್ ಚರ್ಚ್ ನ ಧರ್ಮ ಗುರುಗಳಾದ ರೆ.ಫಾ.ವಿಕ್ಟರ್ ಡಿಸೋಜಾ ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ.

Ad Widget . Ad Widget .

ಹೌದು, ಮಂಗಳೂರು ಮಾಸ್ಟರ್ ಅಥ್ಲೆಟಿಕ್ ಸಂಸ್ಥೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಕೂಟದಲ್ಲಿ ರೆ.ಫಾ ವಿಕ್ಟರ್ ಡಿಸೋಜಾ 100 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಮಾತ್ರವಲ್ಲ 200 ಮೀ. ಓಟದಲ್ಲಿ ಹಾಗೂ ಗುಂಡು ಎಸೆತ ಸ್ಪರ್ಧೆಯಲ್ಲಿ ಕ್ರಮವಾಗಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

Ad Widget . Ad Widget .

ರೆ.ಫಾ ವಿಕ್ಟರ್ ಡಿಸೋಜಾ ಅವರು ಹಲವಾರು ವರ್ಷಗಳಿಂದ ಸುಳ್ಯದ ಜನರೊಂದಿಗೆ ಬೆರೆತವರಾಗಿದ್ದು ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಬಂದವರಾಗಿದ್ದಾರೆ. Age is Just a Number ಅನ್ನುವ ರೆ.ಫಾ.ವಿಕ್ಟರ್ ಡಿಸೋಜಾ ಕ್ರೀಡೆಯ ಬಗ್ಗೆ ವಿಶೇಷ ಆಸಕ್ತಿಯುಳ್ಳವರಾಗಿದ್ದಾರೆ.

Leave a Comment

Your email address will not be published. Required fields are marked *