ರಾಜ್ಯೋತ್ಸವ ಪ್ರಶಸ್ತಿ ಪ್ರಕಟ| 68 ಮಂದಿ ಸಾಧಕರಿಗೆ ಸನ್ಮಾನ

ಸಮಗ್ರ ನ್ಯೂಸ್: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ. ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರಶಸ್ತಿ ಘೋಷಣೆ ಮಾಡಿದರು.

Ad Widget ... ..

ಬಳಿಕ ಮಾತನಾಡಿದ ಅವರು, 2023ನೇ ಸಾಲಿನಲ್ಲಿ 68 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರತಿನಿತ್ಯ ನೀಡಲಾಗಿದೆ. ‘ಕರ್ನಾಟಕ ಸಂಭ್ರಮ-50’ರ ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

Ad Widget

ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 100 ವರ್ಷ ವಯಸ್ಸು ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಪೈಕಿ ಒಬ್ಬರು ದಾವಣಗೆರೆ ಹಾಗೂ ಒಬ್ಬರು ಉತ್ತರ ಕನ್ನಡ ಜಿಲ್ಲೆಯವರು. 13 ಮಹಿಳೆಯರು ಮತ್ತು 54 ಪುರುಷರು ಹಾಗೂ ಒಬ್ಬರು ಮಂಗಳ ಮುಖಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಪ್ರಶಸ್ತಿಯು 5 ಲಕ್ಷ ರೂ. ನಗದು, 25 ಗ್ರಾಂ ಚಿನ್ನದ ಮೆಡಲ್ ಒಳಗೊಂಡಿರಲಿದೆ.

ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತರು
ಚಲನಚಿತ್ರ:
ಡಿಂಗ್ರಿ ನಾಗರಾಜ್
ಬಿ. ಜನಾರ್ಧನ್ (ಬ್ಯಾಂಕ್ ಜನಾರ್ಧನ್)

ರಂಗಭೂಮಿ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ:
ಎ.ಜಿ. ಚಿದಂಬರ ರಾವ್ ಜಂಬೆ
ಪಿ. ಗಂಗಾಧರ ಸ್ವಾಮಿ
ಹೆಚ್.ಬಿ.ಸರೋಜಮ್ಮ
ತಯ್ಯಬಖಾನ್ ಎಂ.ಇನಾಮದಾರ
ಡಾ.ವಿಶ್ವನಾಥ್ ವಂಶಾಕೃತ ಮಠ
ಪಿ.ತಿಪ್ಪೇಸ್ವಾಮಿ

ಸಂಗೀತ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ :
ಡಾ.ನಯನ ಎಸ್.ಮೋರೆ
ನೀಲಾ ಎಂ ಕೊಡ್ಲಿ
ಶಬ್ಬೀರ್ ಅಹಮದ್
ಡಾ.ಎಸ್ ಬಾಳೇಶ ಭಜಂತ್ರಿ

ಶಿಲ್ಪ ಕಲೆ ಮತ್ತು ಚಿತ್ರಕಲೆ ಕ್ಷೇತ್ರ:
ಟಿ.ಶಿವಶಂಕರ್
ಕಾಳಪ್ಪ ವಿಶ್ವಕರ್ಮ
ಮಾರ್ಥಾ ಜಾಕಿಮೋವಿಚ್
ಪಿ.ಗೌರಯ್ಯ

ಯಕ್ಷಗಾನ & ಬಯಲಾಟ ಕ್ಷೇತ್ರ:
ಅರ್ಗೋಡು ಮೋಹನದಾಸ ಶೆಣೈ
ಕೆ. ಲೀಲಾವತಿ ಬೈಪಾಡಿತ್ತಾಯ
ಕೇಶಪ್ಪ ಶಿಳ್ಳಿಕ್ಯಾತರ
ದಳವಾಯಿ ಸಿದ್ದಪ್ಪ

ಜಾನಪದ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ :
ಹುಸೇನಾಬಿ ಬುಡೆನ್ ಸಾಬ್ ಸಿದ್ದಿ
ಶಿವಂಗಿ ಶಣ್ಮರಿ
ಮಹದೇವು
ನರಸಪ್ಪಾ
ಶಕುಂತಲಾ ದೇವಲಾನಾಯಕ
ಎಚ್.ಕೆ ಕಾರಮಂಚಪ್ಪ
ಶಂಭು ಬಳಿಗಾರ
ವಿಭೂತಿ ಗುಂಡಪ್ಪ
ಚೌಡಮ್ಮ

ಸಮಾಜಸೇವೆ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ:
ಹುಚ್ಚಮ್ಮ ಬಸಪ್ಪ ಚೌದ್ರಿ
ಚಾರ್ಮಾಡಿ ಹಸನಬ್ಬ
ಕೆ.ರೂಪ್ಲಾ ನಾಯಕ್
ಪೂಜ್ಯ ನಿಜಗುಣಾನಂದ ಮಹಾಸ್ವಾಮಿ ನಿಷ್ಕಲ ಮಂಟಪ
ನಾಗರಾಜು.ಜಿ

ಆಡಳಿತ ಕ್ಷೇತ್ರ:
ಬಲರಾಮ್, ತುಮಕೂರು

ವೈದ್ಯಕೀಯ ಕ್ಷೇತ್ರ:
ಡಾ.ಸಿ. ರಾಮಚಂದ್ರ, ಬೆಂಗಳೂರು
ಡಾ.ಪ್ರಶಾಂತ್, ದ.ಕನ್ನಡ

ಸಾಹಿತ್ಯ ಕ್ಷೇತ್ರ:
ಪ್ರೊ. ಸಿ.ನಾಗಣ್ಣ, ಚಾಮರಾಜನಗರ
ಸುಬ್ಬು ಹೊಲೆಯಾರ್, ಹಾಸನ
ಸತೀಶ್ ಕುಲಕರ್ಣಿ, ಹಾವೇರಿ
ಲಕ್ಷ್ಮೀಪತಿ ಕೋಲಾರ
ಪರಪ್ಪ ಗುರುಪಾದಪ್ಪ ಸಿದ್ದಾಪುರ
ಡಾ. ಕೆ ಷರೀಫಾ

ಶಿಕ್ಷಣ ಕ್ಷೇತ್ರ:
ರಾಮಪ್ಪ, ರಾಯಚೂರು
ಕೆ.ಚಂದ್ರಶೇಖರ್, ಕೋಲಾರ
ಕೆ.ಟಿ ಚಂದು, ಮಂಡ್ಯ

ಕ್ರೀಡಾ ಕ್ಷೇತ್ರ:
ಟಿ.ಎಸ್. ದಿವ್ಯಾ
ಅದಿತಿ ಅಶೋಕ್
ಅಶೋಕ್ ಗದಿಗೆಪ್ಪ ಏಣಗಿ

ಪರಿಸರ ಕ್ಷೇತ್ರ;
ಸೋಮನಾಥ ರೆಡ್ಡಿ ಪೂರ್ಮಾ
ದ್ಯಾವನಗೌಡ ಟಿ ಪಾಟೀಲ
ಶಿವರೆಡ್ಡಿ ಹನುಮರೆಡ್ಡಿ ವಾಸನ

ನ್ಯಾಯಾಂಗ ಕ್ಷೇತ್ರ
ಜ. ವಿ ಗೋಪಾಲ ಗೌಡ

ಸಂಕೀರ್ಣ ಕ್ಷೇತ್ರ:
ಎಂಎಂ ಮದರಿ
ಹಾಜಿ ಅಬ್ದುಲ್ಲಾ, ಪರ್ಕಳ
ಮಿಮಿಕ್ರಿ ದಯಾನಂದ್
ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್
ಲೆ. ಜ. ಕೊಡನ ಪೂವಯ್ಯ ಕಾರ್ಯಪ್ಪ

ಮಾಧ್ಯಮ ಕ್ಷೇತ್ರ:
ದಿನೇಶ ಅಮೀನ್ಮಟ್ಟು
ಜವರಪ್ಪ
ಮಾಯಾ ಶರ್ಮ
ರಫೀ ಭಂಡಾರಿ

ವಿಜ್ಞಾನ ಮತ್ತು ತಂತ್ರಜ್ಞಾನ:
ಎಸ್. ಸೋಮನಾಥನ್ ಶ್ರೀಧರ್ ಪನಿಕರ್,
ಪ್ರೊ. ಗೋಪಾಲನ್ ಜಗದೀಶ್

ಹೊರನಾಡು ಮತ್ತು ಹೊರದೇಶ:
ಸೀತಾರಾಮ ಅಯ್ಯಂಗಾರ್
ದೀಪಕ್ ಶೆಟ್ಟಿ
ಶಶಿಕಿರಣ್ ಶೆಟ್ಟಿ
ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿ ಗೌಡ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ 10 ಸಂಘ-ಸಂಸ್ಥೆಗಳು:
ಕರ್ನಾಟಕ ಸಂಘ, ಶಿವಮೊಗ್ಗ ,
ಬಿ.ಎನ್.ಶ್ರೀರಾಮ ಪುಸ್ತಕ ಪ್ರಕಾಶನ, ಮೈಸೂರು,
ಮಿಥಿಕ್ ಸೊಸೈಟಿ, ಬೆಂಗಳೂರು,
ಕರ್ನಾಟಕ ಸಾಹಿತ್ಯ ಸಂಘ, ಯಾದಗಿರಿ,
ಮೌಲಾನಾ ಆಜಾದ್ ಶಿಕ್ಷಣ & ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ, ದಾವಣಗೆರೆ,
ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ದಕ್ಷಿಣ ಕನ್ನಡ,
ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ, ಬಾಗಲಕೋಟೆ,
ಚಿಣ್ಣರಬಿಂಬ, ಮುಂಬೈ,
ಮಾರುತಿ ಜನಸೇವಾ ಸಂಘ, ದಕ್ಷಿಣ ಕನ್ನಡ,
ವಿದ್ಯಾದಾನ ಸಮಿತಿ, ಗದಗ

Leave a Comment

Your email address will not be published. Required fields are marked *