Ad Widget .

ಮಂಗಳೂರು: ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸಿದ ತಾಯಿಯನ್ನೇ ಕೊಲೆಗೈದ ಪಾಪಿ ಮಗ| ಶಿಕ್ಷಿತರ ಜಿಲ್ಲೆಯಲ್ಲೊಂದು ಪೈಶಾಚಿಕ ಘಟನೆ

ಸಮಗ್ರ ನ್ಯೂಸ್: ಸುಶಿಕ್ಷಿತರ ಜಿಲ್ಲೆಯೆಂಬ ಹೆಗ್ಗಳಿಕೆಯಿರುವ ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನವಾದ ಮಂಗಳೂರಿನಲ್ಲೊಂದು ಮೃಗೀಯ ಘಟನೆ ಬೆಳಕಿಗೆ ಬಂದಿದೆ. ಮಗನೇ ಹೆತ್ತ ತಾಯಿಯನ್ನು ಅತ್ಯಾಚಾರ ಮಾಡಲು ಯತ್ನಿಸಿ, ತಾಯಿ ಅದನ್ನು ವಿರೋಧಿಸಿದಾಗ ಆಕೆಯನ್ನೆ ಹತ್ಯೆಗೈದ ಆಘಾತಕಾರಿ ಘಟನೆ ಮುಲ್ಕಿ ತಾಲೂಕಿನ ಕೊಂಡೇಲಾ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಕೊಂಡೇಲಾ ಗ್ರಾಮದ ದುರ್ಗಾನಗರ ನಿವಾಸಿ ರತ್ನ ಶೆಟ್ಟಿ(62) ಹತ್ಯೆಯಾದವರು. ಆಕೆಯ ಪುತ್ರ ರವಿರಾಜ್ ಶೆಟ್ಟಿ ಕೃತ್ಯ ಎಸಗಿದ ಪಾಪಿ. ಅಕ್ಟೋಬರ್ 26 ರ ರಾತ್ರಿ ಈತ ತಾಯಿಯನ್ನು ಕೊಂದು ಬಳಿಕ ಮನೆಗೆ ಬೀಗ ಜಡಿದು ಪರಾರಿಯಾಗಿದ್ದ. ಇದೀಗ ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

Ad Widget . Ad Widget .

ಮಂಗಳೂರು ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯ ಬಜ್ಪೆಯಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ಮನೆಯ ಸುತ್ತಮುತ್ತಾ ನೋಣಗಳು ಮುತ್ತಿಕೊಂಡ ಕಾರಣ ಘಟನೆ ಬೆಳಕಿಗೆ ಬಂದಿತ್ತು. ಬಜಪೆ ಪೊಲೀಸರು ಆರೋಪಿಯನ್ನು ನಿನ್ನೆ ಸಂಜೆ ಬಂಧಿಸಿದ್ದರು.

ಪೊಲೀಸರ ವಿಚಾರಣೆ ವೇಳೆ ತಾನು ತಾಯಿ ಮೇಲೆ ಅತ್ಯಚಾರ ಮಾಡಲು ಯತ್ನಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆಕೆ ಸಹಕರಿಸದಿದ್ದಾಗ ತಾನು ಆಕೆಯನ್ನು ಕೊಂದಿರುವುದಾಗಿ ಪಾಪಿ ಮಗ ಹೇಳಿಕೊಂಡಿದ್ದಾನೆ. ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿರುವ ಬಜ್ಪೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Comment

Your email address will not be published. Required fields are marked *