ಸಮಗ್ರ ನ್ಯೂಸ್: ಮರಾಠ ಮೀಸಲಾತಿ ಹೋರಾಟಗಾರರು ಮಹಾರಾಷ್ಟ್ರದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಶಾಸಕ ಪ್ರಕಾಶ್ ಸೋಲಂಕೆ ಅವರ ಮನೆ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಶಾಸಕರ ಮನೆ ಹೊತ್ತಿ ಉರಿದಿದೆ.
ಮನೆಗೆ ಬೆಂಕಿ ಹಚ್ಚಿದ್ದ ವೇಳೆ ಶಾಸಕರು, ಅವರ ಕುಟುಂಬ ಮತ್ತು ಸಿಬ್ಬಂದಿ ಮನೆಯೊಳಗಡೆ ಇದ್ದರೂ ಅದೃಷ್ಟವಶಾತ್ ಬಚಾವಾಗಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಏಕನಾಥ್ ಶಿಂದೆ, ನಿಮ್ಮ ಹೋರಾಟ ದಾರಿ ತಪ್ಪುತ್ತಿದೆ ಎಂದು ಮರಾಠ ಮೀಸಲಾತಿ ಹೋರಾಟದ ನೇತೃತ್ವ ವಹಿಸಿರುವ ಮನೋಜ್ ಜಾರಂಗೆ ಪಾಟೀಲ್ ಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಜಲ್ನಾ ಮೂಲದ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ ಹಮ್ಮಿಕೊಂಡಿರುವ ಅನಿರ್ದಿಷಾವಾಧಿ ಉಪವಾಸ ಸತ್ಯಾಗ್ರಹ 5ನೇ ದಿನಕ್ಕೆ ಕಾಲಿಟ್ಟಿದೆ. ಮನೋಜ್ ಅವರ ಅರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ. ಆದರೆ, ವೈದ್ಯರಿಂದ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅವರು ನಿರಾಕರಿಸಿದ್ದಾರೆ. ಹಾಗಾಗಿ, ಸರ್ಕಾರ ಇಂದು ತುರ್ತು ಸಭೆ ಕರೆದಿದೆ.