ಸಮಗ್ರ ನ್ಯೂಸ್ : ನಾದಕ್ಕೆ ರೂಪವಿಲ್ಲ ರಾಗ ಅನುರಾಗದೊಂದಿಗೆ ರಾಗಾನುರಾಗ ಸ್ವರನಾದ ಅರಳಿತು ಶ್ರೀ ದುರ್ಗಾಪರಮೇಶ್ವರಿ ಮತ್ತು ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ನವರಾತ್ರಿ ಮತ್ತು ಶ್ರೀ ಶಾರದೋತ್ಸವದ 34ನೇ ವರ್ಷದ ಉತ್ಸವದಂದು ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ಹಾಗೂ ಪಡಿಬಾಗಿಲು ಸವಿತಾ ಕೋಡಂದೂರ್ ಮತ್ತು ವಿದ್ಯಾರ್ಥಿಗಳಿಂದ ನಡೆದ ಭಕ್ತಿ ಗಾನ ರಸಮಂಜರಿ ಕಾರ್ಯಕ್ರಮವನ್ನು ವೇ.ಮು ರಾಮಕೃಷ್ಣ ಭಟ್ ನೀರಮೂಲೆ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಭಕ್ತಿಗೀತೆ ,ಭಾವಗೀತೆ, ಜನಪದ ಗೀತೆ , ದಾಸರ ಪದಗಳನ್ನು ಹಾಡಿ ಮನಸೂರೆಗೊಂಡ ಕಾರ್ಯಕ್ರಮವಾಗಿ ಸಂಗೀತದ ಝೇಂಕಾರ ಮೂಡಿಬಂತು ತಾನು ಬೆಳೆಯುವುದಲ್ಲದೆ ಇತರ ಕಲಾವಿದರನ್ನು ಬೆಳೆಸುವ ಗುಣ ಇವರದಾಗಿದ್ದು ಇವರ ಕಲಾ ಜೀವನದ ಪಯಣ ಇದೇ ರೀತಿ ಸಾಗುತ್ತಾ ಇನ್ನಷ್ಟು ಹಾಡಿಗೆ ಸ್ಪೂರ್ತಿ ಸಿಗಲೆಂದು ಅಚ್ಚುಕಟ್ಟಿನ ವಿಶೇಷ ವಸ್ತ್ರ ವಿನ್ಯಾಸ ಪಕ್ಕ ವಾದ್ಯದಲ್ಲಿ ಕೀಬೋರ್ಡ್ ವಾದನದಲ್ಲಿ ಅಮ್ಮು ಮಾಸ್ಟರ್ ಕಾಸರಗೋಡು, ತಬಲವಾದನದಲ್ಲಿ ಸ್ಕಂದಕುಮಾರ್ ಪುತ್ತೂರು, ರಿದಂಪ್ಯಡ್ನಲ್ಲಿ ಸಾಯಿ ನಾರಾಯಣ ಕಲ್ಮಡ್ಕ, ಆಡಳಿತ ಮಂಡಳಿ ಅಧ್ಯಕ್ಷರಾದ ಆನಂದ ಕುಲಾಲ್ ಪಂಜಿ ಕಲ್ಲು ,ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಘವ ,ರಘುರಾಮ ಶಾಸ್ತ್ರಿ ಕೊಡಂದೂರ್ ,ಸಿಂಚನ ಲಕ್ಷ್ಮಿ ಕೊಡಂದೂರು ಮುಂತಾದವರು ಉಪಸ್ಥಿತರಿದ್ದರು. ಪದ್ಮನಾಭ ಚಾರ್ವಾಕ ಕಾರ್ಯಕ್ರಮ ನಿರೂಪಿಸಿದರು.