Ad Widget .

ಜ್ಞಾನದೀಪ: ಉಚಿತ ಕಂಪ್ಯೂಟರ್ ಶಿಕ್ಷಕಿಯರ ತರಬೇತಿಗೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್:ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ 2023-24ನೇ ಸಾಲಿನಲ್ಲಿ ತಾಲ್ಲೂಕಿನ ಅರ್ಹ ಬಡ ಯುವತಿಯರಿಗೆ ಬೆಳ್ಳಾರೆಯ ಬಸ್ ನಿಲ್ದಾಣದ ಬಳಿ ಟ್ರಸ್ಟ್ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಒಂದು ವರ್ಷದ ಉಚಿತ ಡಿಪ್ಲೋಮ ಇನ್ ಕಂಪ್ಯೂಟರ್ ಟೀಚರ್ ಟ್ರೈನಿಂಗ್ ಕೋರ್ಸ್ ಗೆ ಅರ್ಜಿ ಆಹ್ವಾನಿಸಲಾಗಿದೆ.

Ad Widget . Ad Widget .

ವಾಣಿಜ್ಯದಲ್ಲಿ ಪದವಿ ಪೂರೈಸಿರುವ ಅರ್ಹ ಬಡ ವಿದ್ಯಾರ್ಥಿನಿಯರಿಗೆ ಒಂದು ವರ್ಷ ಯಾವುದೇ ತರಬೇತಿ ಶುಲ್ಕವಿಲ್ಲದೆ ಉಚಿತವಾಗಿ ಈ ತರಬೇತಿ ನೀಡಿ ಸರಕಾರದ ಮಾನ್ಯತೆಯ ಪ್ರಮಾಣ ಪತ್ರ ನೀಡಲಾಗುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರು ಶಾಲೆ, ಕಾಲೇಜು ಅಥವಾ ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆಗಳಲ್ಲಿ ಶಿಕ್ಷಕಿಯರಾಗಿ, ಕಂಪ್ಯೂಟರ್ ನಿರ್ವಹಕರುಗಳಾಗಿ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ಆಸಕ್ತರು ನ.10ರ ಮೊದಲು ತಮ್ಮ ಸ್ವವಿವಾರಗಳನ್ನು ಒಳಗೊಂಡ ಅರ್ಜಿಯನ್ನು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಆದಾಯ ಪ್ರಮಾಣ ಪತ್ರಗಳ ಪ್ರತಿಯೊಂದಿಗೆ ಅಧ್ಯಕ್ಷರು/ನಿರ್ದೇಶಕರು ಜ್ಞಾನದೀಪ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಶ್ರೀ ದುರ್ಗಾ ಕಾಂಪ್ಲೆಕ್ಸ್ ಬಸ್ ನಿಲ್ದಾಣದ ಎದುರು ಬೆಳ್ಳಾರೆ ಸುಳ್ಯ ತಾಲೂಕು 574212 ಇಲ್ಲಿಗೆ ಸಲ್ಲಿಸಬಹುದು ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.

Ad Widget . Ad Widget .

Leave a Comment

Your email address will not be published. Required fields are marked *