Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 4ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ…

Ad Widget . Ad Widget .

ಮೇಷ ರಾಶಿ:
ಅಕ್ಟೋಬರ್ ತಿಂಗಳ ಕೊನೆಯ ವಾರ ಹಾಗೂ ನವೆಂಬರ್ ತಿಂಗಳ ಮೊದಲ ವಾರವು ಇದಾಗಿದ್ದು ಗ್ರಹಗತಿಗಳ ಬದಲಾವಣೆಯು ನಿಮಗೆ ಮಧ್ಯಮ ಫಲವನ್ನು ಕೊಡುವುದು. ದ್ವಾದಶ ಸ್ಥಾನಕ್ಕೆ ಹೋಗಲಿರುವ ರಾಹುವು ಪಾಪದ‌ ಕಾರ್ಯಕ್ಕೆ ಪ್ರೇರೇಪಿಸಿ ನಿಮಗೆ ನಷ್ಟ ಮಾಡಬಹುದು. ಏಕಾದಶದಲ್ಲಿ ಶನಿಯು ನಿಧಾನವಾಗಿ ಶುಭವನ್ನು ನೀಡುವನು. ನಿಮ್ಮ ಸ್ಥಾನದಲ್ಲಿ ಇರುವ ಗುರುವಿನ ಮೇಲೆ ಬುಧ, ಕುಜ, ಸೂರ್ಯರ ದೃಷ್ಟಿಯು ಇರಲಿದೆ. ವಿವಾಹಕ್ಕೆ ಯೋಗ್ಯವಾದ ಸಮಯವಾಗಿದ್ದು ಪ್ರೀತಿಯನ್ನು ಮನೆಯಲ್ಲಿ ಹೇಳಿಕೊಂಡು ನಿರಾಳವಾಗಬಹುದು. ಷಷ್ಠದಲ್ಲಿ ಶುಕ್ರನಿದ್ದು ಸ್ತ್ರೀಯರಿಂದ ತೊಂದರೆ ಬರಬಹುದು. ಕಾರ್ತಿಕೇಯನ ಸ್ಮರಣೆ ಅವಶ್ಯಕ.

Ad Widget . Ad Widget .

ವೃಷಭ ರಾಶಿ :
ಈ ವಾರ ರಾಹುವು ಏಕಾದಶಕ್ಕೆ ಹೋಗಲಿದ್ದಾನೆ. ನಿಮ್ಮ ಸಾಮರ್ಥ್ಯವನ್ನು ಬಳಸಿಕೊಂಡು ನೀವು ಲಾಭವನ್ನು ಪಡೆಯಬಹುದು. ಗುರುವಿನ ಬಲವು ನಿಮಗೆ ಇಲ್ಲದ ಕಾರಣ ಯಾವುದೇ ದುಸ್ಸಾಹಸಕ್ಕೆ ಹೋಗುವುದು ಬೇಡ. ಪಂಚಮದಲ್ಲಿ ಕೇತುವಿನ ಜೊತೆ ಶುಕ್ರನೂ ಇರುವ ಕಾರಣ ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ‌ಷಷ್ಠದಲ್ಲಿ ಸೂರ್ಯನಿದ್ದು ಆರೋಗ್ಯದಲ್ಲಿ ತೊಂದರೆ ತೊಂದರೆಯಾಗುವುದು. ಬುಧನಿಂದ ಬಂಧುಗಳ ಬಗ್ಗೆ ಅಸಮಾಧಾನ ಉಂಟಾಗಬಹುದು. ದಶಮದಲ್ಲಿ ಶನಿಯಿದ್ದು ನಿಮ್ಮ ವೃತ್ತಿಯಲ್ಲಿ ಯಾವ ಕಾರ್ಯವೂ ಸುಗಮವಾಗಿ ಆಗದು. ಪುರುಷ ಪ್ರಯತ್ನದ ಮೂಲಕ ಸಾಧಿಸಿಕೊಳ್ಳಬೇಕು. ಗುರು ಸ್ತೋತ್ರವನ್ನು ಮಾಡಿ. ಗುರುವಿನ ದರ್ಶನ ಅನಿವಾರ್ಯವಾದೀತು.

ಮಿಥುನ ರಾಶಿ :
ಈ ವಾರ ರಾಹು ಹಾಗೂ ಕೇತುವಿನ ಬದಲಾವಣೆ ಆಗಲಿದೆ. ಶುಕ್ರನೂ ಬದಲಾಗಲಿದ್ದು ತನ್ನ ನೀಚ ಸ್ಥಾನಕ್ಕೆ ಹೋಗಲಿದ್ದಾನೆ. ದಶಮದಲ್ಲಿ ರಾಹುವಿರುವ ಕಾರಣ ಔಷಧ ಮುಂತಾದ ವ್ಯಾಪಾರಿಗಳಿಗೆ ಹೆಚ್ಚು ಲಾಭವು ಸಿಗುವುದು. ಇಷ್ಟು ದಿನ ಗುರುವು ರಾಹುವಿನ ಜೊತೆ ಇದ್ದು ಅಲ್ಪ ಬಲವುಳ್ಳವನಾಗಿದ್ದು ಇನ್ನೂ ಪೂರ್ಣವಾದ ಬಲವನ್ನು ಪಡೆದು ನಿಮಗೆ ಸ್ಥಾನಮಾನ, ಮಾಡುವ ಕೆಲಸದಲ್ಲಿ ಜಯ ಇರುವುದು. ಸಂತೋಷದ ದಿನಗಳನ್ನು ಹೆಚ್ಚು ಕಾಣಬಹುದು. ಚತುರ್ಥದಲ್ಲಿ ಕೇತು ಹಾಗೂ ಶುಕ್ರರ ಸಂಯೋಗವಾಗಲಿದೆ. ಕುಟುಂಬದ ಜೊತೆಗಿನ ಬಾಂಧವ್ಯವು ಕಡಿಮೆ ಆಗುವುದು. ಹೊಸ ಮನೆಯಾದರೂ ಅದರ ದುರಸ್ತಿಯ ಕೆಲಸವು ಬರುವುದು. ಮಕ್ಕಳ ಬಗ್ಗೆ ಪೂರ್ಣ ಬೆಂಬಲ ಇರದು. ಶನಿಯು ನಿಮ್ಮ ಕಾರ್ಯದಲ್ಲಿ ಶ್ರದ್ಧೆಯನ್ನು ಕಡಿಮೆ‌ ಮಾಡಿಸುವನು.

ಕಟಕ ರಾಶಿ :
ಈ ವಾರ ಗ್ರಹಗಳ ಬದಲಾವಣೆಯಿಂದ ಕೆಲವು ವ್ಯತ್ಯಾಸವು ಆಗಬಹುದು. ರಾಹುವು ನವಮದಲ್ಲಿ ಇರುವ ಕಾರಣ ಬೇಡದ ಕೆಲಸಕ್ಕೆ ನಿಮ್ಮನ್ನು ಪ್ರೇರೇಪಿಸುವನು. ಸರಿ ತಪ್ಪುಗಳ ವಿವೇಚನೆಯು ಕಷ್ಟವಾದೀತು. ಆಲಸ್ಯವನ್ನು ಮೈಗೂಡಿಸಿಕೊಳ್ಳುವಿರಿ. ಪ್ರಯಾಣಕ್ಕೆ ಹೆಚ್ಚು ಉತ್ಸಾಹವನ್ನು ತೋರಿಸುವಿರಿ. ಕೆಲಸ ಕಾರ್ಯಗಳು ಹಿಂದೆ ಬೀಳುವುದು. ಅಮೂಲ್ಯ ವಸ್ತುಗಳನ್ನು ಖರೀದಿಸುವಾಗ ಜಾಗರೂಕತೆ ಇರಲಿ. ಪ್ರತಿಭೆಯ ಅನಾವರಣವನ್ನು ಮಾಡಲಾಗದು.‌ ಒಮ್ಮೆ ಮಾಡಿದರೂ ಅದು ಅಪ್ರಯೋಜಕವೆನಿಸಬಹುದು. ಕುಟುಂಬದ ಹಾಗೂ ಬಂಧುಗಳ ನಡುವೆ ಸಂಬಂಧಗಳು ಸಡಿಲವಾಗುವುದು. ಗುರುವಿನ ಪೂರ್ಣಬಲವಿಲ್ಲದಿದ್ದರೂ ಮಧ್ಯಬಲವು ನಿಮ್ಮನ್ನು ಕಾಪಾಡುವುದು. ಗುರುಚರಿತ್ರೆಯ ಪಠಣ ಮಾಡಿ.

ಸಿಂಹ ರಾಶಿ:
ಗ್ರಹಗತಿಗಳಲ್ಲಿನ ಸ್ವಲ್ಪ ಬದಲಾವಣೆ ನಿಮ್ಮ ಮೇಲೆ‌ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ನವಮದಲ್ಲಿ ಇರುವ ರಾಹುವು ಅಷ್ಟಮಕ್ಕೆ ಬರಲಿದ್ದಾನೆ. ಆರೋಗ್ಯದ ಬಗ್ಗೆ ಕಾಳಜಿ ಬೇಕು.‌ ವೈದ್ಯರ ಸಲಹೆಯನ್ನು ಪಾಲಿಸಲು ಇಷ್ಟವಾಗದೇ ಹೋಗಬಹುದು. ಆದರೂ ಅದನ್ನು ಇಟ್ಟುಕೊಳ್ಳುವುದು ಮುಖ್ಯ. ಗುರುಬಲವು ನಿಮ್ಮ ಎಲ್ಲ ಕಷ್ಟನಷ್ಟಗಳನ್ನೂ ಸರಿದೂಗಿಸಿಕೊಳ್ಳಲು ಬಲವನ್ನು ನೀಡಬಹುದು. ನಿಮ್ಮ ಒರಟು ಸ್ವಭಾವವನ್ನು ಬಿಡಬೇಕಾದೀತು. ಹತ್ತಿರದ ಬಂಧುಗಳು ನಿಮ್ಮ ಸಹಾಯಕ್ಕೆ ಬರಬಹುದು. ಬರಬೇಕಾದ ಸಂಪತ್ತು ಬಾರದೇ ಹೋಗುವುದು. ಸಂಗಾತಿಯ ವಿಚಾರದಲ್ಲಿ ಪೂರ್ಣ ಸಮಾಧಾನ ಇರದು.

ಕನ್ಯಾ ರಾಶಿ:
ಗ್ರಹಗತಿಗಳ ಚಲನೆಯು ನಿಮ್ಮ ಮೇಲೆ ಅಶುಭವೇ ಪರಿಣಾಮವನ್ನು ಬೀರುವುದು. ಅಷ್ಟಮದಲ್ಲಿ ಇರುವ ರಾಹುವುದು ಸಪ್ತಮಕ್ಕೆ ಬರಲಿದ್ದಾನೆ. ವಿವಾಹ ಮುಂತಾದವು ವಿಳಂಬವಾಗುವುದು. ಗುರುಬಲವೂ ಇಲ್ಲದ ಕಾರಣ ಅತ್ತ ಕಡೆ ಮನಸ್ಸು ಮಾಡುವುದೂ ವ್ಯರ್ಥ. ದ್ವಿತೀಯದಲ್ಲಿ ಬುಧನು ಕುಜ ಹಾಗೂ ನೀಚ ಸ್ಥಿತಿಯಲ್ಲಿರುವ ಸೂರ್ಯನ ಜೊತೆ ಇರುವನು. ಹಾಗಾಗಿ ಬರುವ ಸಂಪತ್ತು ಪೂರ್ಣವಾಗಿ ಬರದು. ಹಾಗೂ ನಿಮ್ಮ ಮಾತನ್ನು ಯಾರೂ ಗಂಭೀರವಾಗಿ ಸ್ವೀಕರಿಸರು. ನೀಚ ಶುಕ್ರ ಹಾಗೂ ಕೇತುಗಳು ನಿಮ್ಮ ಮನೆಯಲ್ಲಿಯೇ ಇರುವ ಕಾರಣ ದೈಹಿಕ ಹಾಗೂ ಮಾನಸಿಕ ಒತ್ತಡಗಳು ಹೆಚ್ಚಿರುವುದು. ಸುಬ್ರಹ್ಮಣ್ಯನ ಆರಾಧನೆಯಿಂದ ತೊಂದರೆಯ ಪ್ರಮಾಣವು ಕಡಿಮೆ ಆಗುವುದು.

ತುಲಾ ರಾಶಿ:
ಈ ವಾರ ಈ ರಾಶಿಯವರಿಗೆ ಹೆಚ್ಚು ಶುಭವು ಇರಲಿದೆ. ಇಷ್ಟು ದಿನ ಪೂರ್ಣವಾಗಿ ಗುರುಬಲವಿಲ್ಲದೇ ಇರುವ ಕಾರಣ ನಿಮ್ಮ ಎಲ್ಲ ಮಂಗಲ ಕಾರ್ಯಗಳೂ ತಾನಾಗಿಯೇ ಒಂದಿಲ್ಲೊಂದು ಕಾರಣದಿಂದ ಮುಂದೆ ಹೋಗುತ್ತಿದ್ದು, ಈಗ ಅವೆಲ್ಲವೂ ಸಮೀಪಕ್ಕೆ ಬರಲಿವೆ. ರಾಹುವೂ ಷಷ್ಠಸ್ಥಾನಕ್ಕೆ ಬಂದು ನಿಮ್ಮ ಆರೋಗ್ಯವನ್ನು ಹೆಚ್ಚಿಸುವನು, ಶತ್ರುಗಳ ಕಾಟದಿಂದ ನಿಮ್ಮನ್ನು ಬಿಡಿಸುವನು. ದ್ವಾದಶದಲ್ಲಿ ಶುಕ್ರ ಹಗೂ ಕೇತುಗಳು ಇರುವುದರಿಂದ ಬೇಡ ಕಾರ್ಯಗಳಿಗೆ ಖರ್ಚು ಮಾಡಿಸುವರು. ಶುಕ್ರನೂ ನೀಚನಾಗಿ ಇರುವ ಕಾರಣ ವಾಹನ ಮುಂತಾದವುಗಳಿಂದ ಜಾಗರೂಕರಾಗಿರಿ. ಸೂರ್ಯ, ಕುಜ, ಬುಧರು ನಿಮ್ಮ ಮನೆಯಲ್ಲಿಯೇ ಇರುವರು. ಸೂರ್ಯನೂ ನೀಚಸ್ಥಾನದಲ್ಲಿ ಇದ್ದು ನಿಮ್ಮ ಆರೋಗ್ಯ ಹಾಗೂ ಕಾರ್ಯದಲ್ಲಿ ಹಿನ್ನಡೆಯನ್ನು ಮಾಡಿಸುವನು.‌ ಮಹಾಲಕ್ಷ್ಮಿಯ ಕೃಪೆಯು ನಿಮಗೆ ಆಗಬೇಕಿದೆ.

ವೃಶ್ಚಿಕ ರಾಶಿ:
ಕೆಲವು ಗ್ರಹಗಳು ಬದಲಾವಣೆಗಳನ್ನು ಹೊಂದಿದ್ದು ಮಿಶ್ರಫಲವು ಇರಲಿದೆ. ಷಷ್ಠದಲ್ಲಿ ಇರುವ ರಾಹು ಪಂಚಮಕ್ಕೆ ಬರಲಿದ್ದಾನೆ. ಉನ್ನತ ವಿದ್ಯಾಭ್ಯಾಸಕ್ಕೆ ಏನಾದರೂ ತೊಂದರೆಗಳು ಬರುವುದು. ಆರೋಗ್ಯದ ಸಮಸ್ಯೆ, ಹಣಕಾಸಿನ ಸಮಸ್ಯೆಯನ್ನು ಎದುರಿಸಬೇಕಾದೀತು. ಏಕಾದಶ ಸ್ಥಾನಕ್ಕೆ ಕೇತುವಿನ ಪ್ರವೇಶವಾಗಲಿದೆ.‌ ಶುಕ್ರನೂ ಇರುವ ಕಾರಣ ಸಣ್ಣ ಸಣ್ಣ ಅಂತರದಲ್ಲಿ ನಿಮಗೆ ಸಿಗುವ ವಸ್ತುವು ಕೈ ತಪ್ಪಿ ಹೋಗಬಹುದು. ‌ಅನವಶ್ಯಕ ಖರೀದಿಯನ್ನು ನೀವು ಮಾಡುವಿರಿ. ಪ್ರಮುಖ ನಿರ್ಧಾರವನ್ನು ಕೂಡಲೇ ತೆಗೆದುಕೊಳ್ಳುವುದು ಬೇಡ. ಶನಿಯು ಚತುರ್ಥದಲ್ಲಿ ಇರುವುದರಿಂದ ತಾಯಿಗೆ ತೊಂದರೆ ಕಾಣಿಸಿಕೊಳ್ಳಬಹುದು. ಗುರುಬಲವೂ ಕಡಿಮೆ ಇರುವ ಕಾರಣ ಸಾಹಸಮಯ ಕಾರ್ಯಕ್ಕೆ ಹೋಗುವುದು ಬೇಡ. ಆದಿತ್ಯ ಹೃದಯ ಪಾರಾಯಣವನ್ನು ಸೂರ್ಯೋದಯದ ಕಾಲದಲ್ಲಿ ಮಾಡಿ.

ಧನು ರಾಶಿ:
ಈ ವಾರ ಗ್ರಹಗಳ ಅಲ್ಪ ಬದಲಾವಣೆಯು ಹೆಚ್ಚು ಅನುಕೂಲಕರವಾಗಿರಲಿದೆ. ಶುಕ್ರನು ನವಮದಿಂದ ದಶಮಕ್ಕೆ ಬರಲಿದ್ದಾನೆ. ಕಲಾವಿದರು ಹೆಚ್ಚಿನ ಪ್ರಶಂಸೆ, ಲಾಭವನ್ನು ಗಳಿಸುವರು. ಹೊರ ದೇಶಕ್ಕೂ ಆಹ್ವಾನ ಬರಬಹುದು.‌ ವೃತ್ತಿಯ ಕಾರಣದಿಂದಲೂ ವಿದೇಶವನ್ನು ನೋಡಬಹುದು. ಚತುರ್ಥದಲ್ಲಿ ಕುಟುಂಬದಲ್ಲಿ ಕಿರಿಕಿರಿ ಉಂಡಾಗುವಂತೆ ಮಾಡುವನು. ನೀವು ಅಂದುಕೊಂಡ ಕೆಲಸವನ್ನು ಮಾಡಲು ಕುಟುಂಬವು ಬಿಡದೇಹೋಗಬಹುದು. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಏನಾದರೂ ಕಿರಿಕಿರಿ ನಡೆಯುತ್ತಲೇ ಇರಬಹುದು. ಪಂಚಮದಲ್ಲಿ ಇರುವ ಗುರು ರಾಹುವಿನಿಂದ ಮುಕ್ತನಾಗಿ ಸ್ವತಂತ್ರನು. ಗುರುವಿನ ದೃಷ್ಟಿ ನಿಮ್ಮ ಮೇಲೆ ಇರಲಿದೆ‌. ವಿವಾಹಾದಿ ಶುಭ ಕಾರ್ಯವನ್ನು ಮಾಡಲು ನಿಶ್ಚಿಂತೆಯಿಂದ ಮುಂದುವರಿಯಬಹುದು. ತೃತೀಯದಲ್ಲಿ ಶನಿಯ ಸ್ಥಿತಿಯು ಸಹೋದರರ ಮನಃಪೂರ್ವಕ ಬೆಂಬಲ ಸಿಗದು.

ಮಕರ ರಾಶಿ:
ಈ ವಾರ ಶುಭಾಶುಭ ಮಿಶ್ರವಾದ ವಾರ ಎನ್ನಬೇಕು. ಚತುರ್ಥದಲ್ಲಿ ಇರುವ ರಾಹುವುದು ಈ ವಾರದ ಮಧ್ಯದಲ್ಲಿ ತೃತೀಯಕ್ಕೆ ಬರಲಿದ್ದಾನೆ.‌ ನಿಮ್ಮ ಸಾಮರ್ಥ್ಯ ಹಾಗೂ ಬಲವನ್ನು ತೋರಿಸುವ ಸಮಯ. ಗುರುವಿನ ಬಲವೂ ಎಂದಿಗಿಂತ ಹೆಚ್ಚಾಗುವುದು. ಕುಟುಂಬದಲ್ಲಿ ಉತ್ತಮ‌ಸ್ಥಾನ ಇರಲಿದೆ.‌ ಮನೆ ನಿರ್ಮಾಣದಂತಹ ಯೋಜನೆಯನ್ನು ನೀವು ಸಿದ್ಧಪಡಿಸಿಕೊಳ್ಳಬಹುದು. ಒಂದೊಂದೆ ಅವಕಾಶಗಳನ್ನು ನೀವು ನಿಮ್ಮದಾಗಿಸಿಕೊಳ್ಳುವಿರಿ. ಈ ವಾರ ನಿಮ್ಮ ನಿಂತ ಯೋಜನೆಗಳು ಮತ್ತೆ ಪ್ರಾರಂಭವಾಗುವುದು. ದಶಮದಲ್ಲಿ ಸೂರ್ಯ, ಕುಜ, ಬುಧರು ತಾಂತ್ರಿಕ ವೃತ್ತಿಯವರಿಗೆ ಅನುಕೂಲವನ್ನು‌ ಮಾಡಿಕೊಡುವರು.‌ ವಿದೇಶಪ್ರವಾಸವನ್ನೂ ನೀವು ಯೋಜಿಸಿಕೊಳ್ಳಬಹುದು. ಭೂಮಿಯ ವ್ಯವಹಾರವು ಸುಗಮವಾಗಿ ಸಾಗಿದರೂ ಸರ್ಕಾರದ ಕಡೆಯಿಂದ ಆಗಬೇಕಾದ ಕೆಲಸವು ಆಗದು.

ಕುಂಭ ರಾಶಿ :
ದ್ವಿತೀಯಕ್ಕೆ ರಾಹುವು ಬರಲಿದ್ದಾನೆ. ಸಂಪತ್ತಿನ ವ್ಯಯವು ಅಧಿಕವಾಗಬಹುದು. ಬರಬೇಕಾದ ಸಂಪತ್ತು ವಿಳಂಬವಾಗುವುದು. ತೃತೀಯದಲ್ಲಿ ಗುರು ಮಾತ್ರ ಇದ್ದು ಗುರುಬಲವು ಇಲ್ಲವಾಗಲಿದೆ. ಸಹೋದರರ ನಡುವಿನ ಭಿನ್ನಾಭಿಪ್ರಾಯವು ದೂರವಾಗುವುದು. ಎಚ್ಚರಿಕೆಯ ನಡೆ ಅವಶ್ಯಕ. ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಪೂರ್ಣಪ್ರಮಾಣದ ಸ್ಪಷ್ಟತೆ ಇರಲಿ. ನವಮದಲ್ಲಿರುವ ಸೂರ್ಯನು ದುರ್ಬಲವಾದ ಕಾರಣ ಸರ್ಕಾರದ ಕಡೆಯಿಂದ ತೊಂದರೆಗಳು ಬರಬಹುದು. ಪುರುಷ ಪ್ರಯತ್ನಕ್ಕೆ ಹೆಚ್ಚು ಬೆಲೆ ಇರಲಿದೆ. ಶುಕ್ರನು ಅಷ್ಟಮಕ್ಕೆ ಹೋಗಲಿದ್ದಾನೆ. ಸ್ತ್ರೀಸಂಬಂಧವಾದ ಅಪವಾದಗಳು ಬರಬಹುದು. ಕೇತು ಹಾಗೂ ಶುಕ್ರರ ಯೋಗವಾಗಲಿದ್ದು ವ್ಯವಹಾರವು ಪ್ರಾಮಾಣಿಕವಾಗಿ ಇರಲಿ.

ಮೀನ ರಾಶಿ:
ಈ ರಾಶಿಯವರಿಗೆ ವರ್ಷಗಳ ಬಳಿಕ ರಾಹು ಮತ್ತು ಕೇತುಗಳು ಬದಲಾವಣೆ ಆಗಲಿದೆ. ನಿಮ್ಮ ರಾಶಿಗೆ ರಾಹುವಿನ ಪ್ರವೇಶವಾಗಲಿದ್ದು ದೈಹಿಕ ಬಾಧೆಯು ಆಗಬಹುದು. ಜೀವನವು ಮಂದಗತಿಯಲ್ಲಿ ಇರುವಂತೆ ಕಾಣಿಸುವುದು. ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆ ಇದೆ. ‌ದ್ವಾದಶದಲ್ಲಿ ಶನಿಯು ಇರುವ ಕಾರಣ ಹಣಕಾಸಿನ ವ್ಯವಹಾರವು ಸಫಲವಾಗದು. ಬರುವ ಹಣವನ್ನು ಇಟ್ಟುಕೊಂಡು ಯಾರಿಗೂ ಮಾತು ಕೊಡುವುದು ಬೇಡ. ಅಷ್ಟಮದಲ್ಲಿ ನಾಲ್ಕು ಗ್ರಹಗಳ ಯೋಗವಿದ್ದು ಆರೋಗ್ಯದ ಮೇಲೆ ಹೆಚ್ಚು ಗಮನವಿರಲಿ.

Leave a Comment

Your email address will not be published. Required fields are marked *