Ad Widget .

ಕೇರಳ ಬಾಂಬ್ ಸ್ಪೋಟ ಪ್ರಕರಣ| ನಾನೇ ಬಾಂಬ್ ಇಟ್ಟಿದ್ದು ಎಂದು ಶರಣಾದ ಆರೋಪಿ

ಸಮಗ್ರ ನ್ಯೂಸ್: ಕೇರಳದ ಸಭಾಂಗಣವೊಂದರಲ್ಲಿ ನಡೆದ ಅವಳಿ ಸ್ಪೋಟದಲ್ಲಿ ಓರ್ವ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರಲ್ಲೂ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಈ ಮಧ್ಯೆ ವ್ಯಕ್ತಿಯೊಬ್ಬ ಕೊಡಕಾರ ಪೊಲೀಸ್​ ಠಾಣೆಗೆ ಬಂದು ತಾನೇ ಬಾಂಬ್​ ಇಟ್ಟಿದ್ದು, ಎಂದು ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ.

Ad Widget . Ad Widget .

ಸುಮಾರು 1:30ರ ವೇಳೆಗೆ ಠಾಣೆಗೆ ಆಗಮಿಸಿದ ಆತ, ತಾನೂ ಕೊಚ್ಚಿ ಮೂಲದವನು ಎಂದು ತಿಳಿಸಿ ಶರಣಾಗಿದ್ದಾನೆ. ಪೊಲೀಸರು ಆತನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ರಾಜ್ಯದ ಪ್ರಮುಖ ಮಾಧ್ಯಮ ವರದಿ ಮಾಡಿದೆ.

Ad Widget . Ad Widget .

ಶಂಕಿತನನ್ನ ವಶಕ್ಕೆ ಪಡೆದಿರುವ ಪೊಲೀಸರು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಹೆಚ್ಚಿನ ವಿಚಾರಣೆಗಾಗಿ ವ್ಯಕ್ತಿಯನ್ನು ಕೊಚ್ಚಿಯಿಂದ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಪೊಲೀಸರು ವ್ಯಕ್ತಿಯ ಗುರುತನ್ನು ಗೌಪ್ಯವಾಗಿಟ್ಟಿದ್ದಾರೆ. ಆತ ಯಾವುದಾದರೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆಯೇ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡು ವಿವರ ನೀಡಬಹುದು ಎನ್ನಲಾಗುತ್ತಿದೆ.

Leave a Comment

Your email address will not be published. Required fields are marked *